ಮೊಬೈಲ್ ಜಾಹೀರಾತಿಗೆ ಮರುಳಾಗಿ ಮೋಸ ಹೋದ ಅಮಾಯಕ: ನಿಮಗೂ ಮೋಸವಾಗಬಹುದು. ಎಚ್ಚರ!

ಶ್ರೀಕಾಂತ ಹೆಮ್ಮಾಡಿ/ಕರಾವಳಿ ಕರ್ನಾಟಕ ವರದಿ

ಕುಂದಾಪುರ:
2,199 ರೂ.ಗಳ ಒಂದು ಗ್ಯಾಲಕ್ಸಿ ಮೊಬೈಲ್ ಕೊಂಡರೆ ಇನ್ನೊಂದು ಮೊಬೈಲ್ ಉಚಿತ ಎಂದು ಪತ್ರಿಕೆಯೊಂದರಲ್ಲಿ ಬಂದ ಜಾಹೀರಾತನ್ನು ನಂಬಿ ಗ್ರಾಹಕನೋರ್ವ ಮೊಬೈಲ್ ಬುಕ್ ಮಾಡಿ ಮೋಸ ಹೋದ ಘಟನೆ ಇಲ್ಲಿಗೆ ಸಮೀಪದ ಹೆಮ್ಮಾಡಿಯಲ್ಲಿ ವರದಿಯಾಗಿದೆ.

'ವಿಜಯವಾಣಿ' ಪತ್ರಿಕೆಯಲ್ಲಿ ಒಂದು ಮೊಬೈಲ್ ಕೊಂಡರೆ ಇನ್ನೊಂದು ಉಚಿತ ಎಂದು ಆಕರ್ಷಣೀಯ ಜಾಹೀರಾತು ನೀಡಿ ಕಡಿಮೆ ಮೌಲ್ಯದ, ಉಪಯೋಗಿಸಲು ಸಾಧ್ಯವಾಗದ ಒಂದೇ ಮೊಬೈಲ್ ಕಳುಹಿಸಿದ್ದು ಇದೀಗ ಪತ್ರಿಕೆಯ ಓದುಗನ ಕಣ್ಣು ಕೆಂಪಗಾಗಿಸಿದೆ.

ಈ ಕುರಿತು ಓದುಗ ಕರಾವಳಿ ಕರ್ನಾಟಕದ ಕಚೇರಿಗೆ ಆಗಮಿಸಿ ತನಗಾದ ಮೋಸವನ್ನು ಪತ್ರಿಕೆಯಲ್ಲಿ ಬಯಲುಗೊಳಿಸುವಂತೆ ಮತ್ತು ಯಾರೂ ಈ ರೀತಿ ಮೋಸ ಹೋಗದಂತೆ ವರದಿ ಪ್ರಕಟಿಸಲು ಮನವಿ ಮಾಡಿಕೊಂಡಿದ್ದಾರೆ.

ಹೆಸರು ಹೇಳಲಿಚ್ಛಿಸದ ಹೆಮ್ಮಾಡಿ ನಿವಾಸಿಯೋರ್ವರು ಪತ್ರಿಕೆಯಲ್ಲಿ ಬಂದ ಜಾಹೀರಾತಿನಿಂದ ಪ್ರಭಾವಿತರಾಗಿ ತಮ್ಮ ವಿಳಾಸ ನೀಡಿ ಮೊಬೈಲ್ ಬುಕ್ ಮಾಡಿದ್ದರು. 14G ಫುಲ್ ಟಚ್ ಸ್ಮಾರ್ಟ್ ಫೋನ್ ಜೊತೆಗೆ 14G ಫುಲ್ ಟಚ್ ಸ್ಮಾರ್ಟ್ ಫೋನ್ ಉಚಿತ ಎಂದು ಬರೆದಿದ್ದಲ್ಲದೇ 6 ಇಂಚಿನ ಗ್ಯಾಲಕ್ಸಿ ಮೊಬೈಲ್ ಉಚಿತ ಎಂದು ನಾಲ್ಕು ಮೊಬೈಲ್ ನಂಬರ್‌ಗಳನ್ನು ಲಗತ್ತಿಸಿ ಪತ್ರಿಕೆಯ ಜಾಹೀರಾತಿನಲ್ಲಿ ಪ್ರಕಟಿಸಲಾಗಿತ್ತು.

ದಿನ ನಿತ್ಯವೂ ಪೇಪರ್ ಓದುವ ಹವ್ಯಾಸ ರೂಢಿಸಿಕೊಂಡಿರುವ ಇವರು ಪತ್ರಿಕೆಯಲ್ಲಿ ಪ್ರಕಟವಾದ ಜಾಹೀರಾತಿನ್ನು ನೋಡಿ ತಡಮಾಡದೆ ಜಾಹೀರಾತಿನಲ್ಲಿದ್ದ ನಂಬರ್‌ಗೆ ಫೋನ್ ಮಾಡಿ ತಮ್ಮ ವಿಳಾಸಗಳನ್ನು ನೀಡಿ ಸ್ಮಾರ್ಟ್ ಫೋನ್ ಬುಕ್ ಮಾಡಿಸಿಕೊಂಡಿದ್ದರು.

ಹೆಮ್ಮಾಡಿ ಅಂಚೆ ಕಚೇರಿಗೆ ಬಂದ ಮೊಬೈಲ್ ಅನ್ನು ತೆಗೆದುಕೊಳ್ಳಲು ಹೋದಾಗ ಆ ವ್ಯಕ್ತಿಯಲ್ಲಿ ಕಚೇರಿಯ ಸಿಬ್ಬಂದಿ 2,900 ರೂ. ಹಣ ಕಟ್ಟಲು ಹೇಳಿದ್ದರು. ದಿನಪತ್ರಿಕೆಯಲ್ಲಿ 2,199 ಇದೆ ಎಂದು ಹೇಳಿದಾಗ ಬಿಲ್‌ನಲ್ಲಿ 2,900ರೂ. ಇದೆ. ಇಷ್ಟನ್ನು ಕಟ್ಟಿ ಮೊಬೈಲ್ ಅನ್ನು ತೆಗೆದುಕೊಂಡು ಹೋಗಿ ಎಂದಿದ್ದರು. ಕೊನೆಗೂ 2,900 ರೂ. ಹಣ ಕಟ್ಟಿ ಮೊಬೈಲ್ ಅನ್ನು ಮನೆಗೆ ತಂದಿದ್ದರು.

ಪಾರ್ಸೆಲ್ ತೆರೆದಾಗ ಕಾದಿತ್ತು ಅಚ್ಚರಿ!
ಮನೆಗೆ ಬಂದು ಪಾರ್ಸೆಲ್ ಬಾಕ್ಸ್ ಅನ್ನು ತೆರೆದಾಗ ಜಾಹೀರಾತಿನಲ್ಲಿ ನೀಡಿರುವ ಮೊಬೈಲ್ ಕಳುಹಿಸಿದೆ ಬೇರೊಂದು ಕಡಿಮೆ ಮೌಲ್ಯದ ಮತ್ತು ಉಪಯೋಗಿಲಸಾಧ್ಯವಾದ 'ವಿಂಗ್' ಹೆಸರಿನ ಚಿಕ್ಕ ಮೊಬೈಲ್ ಕಳುಹಿಸಿ ಕೊಡಲಾಗಿತ್ತು. ಅಲ್ಲದೇ ಉಚಿತ ನೀಡಲಾಗುವ ಫೋನ್ ಅನ್ನು ಕಳುಹಿಸದೆ ವಂಚಿಸಿದ್ದಾರೆ.

ಫೋನ್ ಮಾಡಿದರೆ ಅಸಮರ್ಪಕ ಉತ್ತರ
ತನಗಾದ ಮೋಸವನ್ನರಿತ ಗ್ರಾಹಕ ಕೂಡಲೇ ಫೋನ್ ಮಾಡಿ ವಿಚಾರ ಪ್ರಸ್ತಾಪಿಸಿದ್ದರು. ಆದರೆ ಅವರು ಬೇರೊಂದು ನಂಬರ್ ಕೊಟ್ಟು ಈ ನಂಬರ್‌ಗೆ ಕರೆ ಮಾಡಿ ಎಂದು ಸಲಹೆ ನೀಡಿದ್ದಾರೆ. ಅವರು ನೀಡಿರುವ ನಂಬರ್‌ಗೆ ಕರೆ ಹೋಗುತ್ತಿರಲಿಲ್ಲ. ಮತ್ತೆ ಪುನಃ ಕರೆ ಮಾಡಿದಾಗ ವಿಚಾರಿಸಿ ಹೇಳುತ್ತೇವೆ ಎಂದವರು ಈ ತನಕವೂ ಕರೆ ಮಾಡಿಲ್ಲ ಎಂದು ಗ್ರಾಹಕ ತನಗಾದ ಮೋಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಇಂದು ಹೆಚ್ಚು ಓದಿದ ಸುದ್ದಿಗಳು:
►►ವಿರೋಧಿಗಳು ಘೋಷಣೆ ಕೂಗಿದರೆ ನಾನು ಇನ್ನಷ್ಟು ಪ್ರಬಲನಾಗುತ್ತೇನೆ: ಪ್ರಕಾಶ್ ರೈ:
http://bit.ly/2ELiyMP
►►ನ್ಯಾಯಾಧೀಶರ ಎದುರೆ ಸರಕಾರಿ ಅಭಿಯೋಜಕರತ್ತ ಶೂ ಎಸೆದ ರೇಪ್ ಆರೋಪಿ: http://bit.ly/2GWTogc
►►ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮ: ಕಥುವಾ, ಉನ್ನಾವ್ ಪ್ರಕರಣದ ಬಗ್ಗೆ ಮೌನ ಮುರಿದ ಮೋದಿ: http://bit.ly/2HAQTRZ
►►ಡಿವಿಲಿಯರ್ಸ್ ಅಬ್ಬರ: ಗೆಲುವಿನ ಖಾತೆ ತೆರೆದ ರಾಯಲ್ ಚಾಲೆಂಜರ್ಸ್: http://bit.ly/2IRX1o8
►►ಚನ್ನರಾಯಪಟ್ಟಣ ಬಸ್ ಅಪಘಾತ : ಕುಂದಾಪುರದ ಶಾಲಾ ಬಾಲಕ, ಬ್ರಹ್ಮಾವರದ ಯುವಕ ಸಾವು: http://bit.ly/2ISlLfV

Related Tags: Vijayavani Paper, Advertisement, Galaxy Mobile, Cheating, Fraud, Hemmady Post Office, Hemmady, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ