ವಿರೋಧಿಗಳು ಘೋಷಣೆ ಕೂಗಿದರೆ ನಾನು ಇನ್ನಷ್ಟು ಪ್ರಬಲನಾಗುತ್ತೇನೆ: ಪ್ರಕಾಶ್ ರೈ

ಕರಾವಳಿ ಕರ್ನಾಟಕ ವರದಿ

ಕಲಬುರಗಿ:
ಕಾರು ಅಡ್ಡಗಟ್ಟಿ ನನ್ನ ವಿರುದ್ಧ ಘೋಷಣೆ ಕೂಗುವುದರ ಮೂಲಕ ನೀವು ನನ್ನನ್ನು ಕುಂದಿಸಲಾರಿರಿ. ನಿಮ್ಮ ನಡವಳಿಕೆಯಿಂದ ನಾನು ಇನ್ನಷ್ಟು ಪ್ರಬಲನಾಗುತ್ತೇನೆ ಎಂದು ವಿರೋಧಿಗಳಿಗೆ ಬಹುಭಾಷಾ ನಟ ಪ್ರಕಾಶ್ ರೈ ಚಾಟಿ ಬೀಸಿದ್ದಾರೆ.

ಇಲ್ಲಿನ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಕಾಶ್ ರೈ, ಕೆಲವರು ನನ್ನ ಕಾರಿಗೆ ಮುತ್ತಿಗೆ ಹಾಕಿ ನನ್ನ ವಿರುದ್ದ ಘೋಷಣೆ ಕೂಗಿದ್ದಾರೆ. ನನ್ನ ವಿರುದ್ಧ ಘೋಷಣೆ ಕೂಗುವಂತ ಕೆಲಸ ನಾನೇನು ಮಾಡಿದ್ದೇನೆ ಎಂದು ಪ್ರಶ್ನಿಸಿದ್ದಾರೆ.

ತಪ್ಪಿತಸ್ಥರನ್ನು ಸರ್ಕಾರ ರಕ್ಷಿಸುತ್ತಿರುವುದರ ಬಗ್ಗೆ ಪ್ರಶ್ನಿಸುವುದು ತಪ್ಪಾ, ಅವರು ಕೆಲವೇ ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದಿದ್ದಾರೆ. ದೌರ್ಜನ್ಯ ಪ್ರಮಾಣ ಹೆಚ್ಚಾಗಿದೆ. ಪ್ರಶ್ನಿಸುವವರನ್ನು ಸುಮ್ಮನಾಗಿಸುತ್ತಿದ್ದಾರೆ. ಕರ್ನಾಟಕದ ಜನತೆಯನ್ನು ಎಲ್ಲಿಯವರೆಗೆ ಮೂರ್ಖರನ್ನಾಗಿಸಲು ಅವರಿಂದ ಸಾಧ್ಯ ಎಂದು ರೈ ಪ್ರಶ್ನಿಸಿದ್ದಾರೆ.

ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮ ಉದ್ಘಾಟಿಸಲೆಂದು ಕಲಬುರಗಿಗೆ ಆಗಮಿಸಿದ್ದ ಪ್ರಕಾಶ್ ರೈ ಅವರ ಕಾರನ್ನು ಮೋದಿ ಅಭಿಮಾನಿಗಳು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದ್ದರು.

ಕಾರಿಗೆ ಕೈ ಇಂದ ಗುದ್ದಿ, 'ಮೋದಿ, ಮೋದಿ' ಎಂದು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರಧಾನಿ ನರೇಂದ್ರ ಮೊದಿ ಅವರಿಗೆ ಜಸ್ಟ್ ಆಸ್ಕಿಂಗ್ (#justasking) ಮೂಲಕ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸುತ್ತಿರುವ ನಟ ರೈ ಬಿಜೆಪಿ ಪಕ್ಷವನ್ನು ಕ್ಯಾನ್ಸರ್‌ಗೆ ಹೋಲಿಸಿದ್ದರು.

ಪ್ರಕಾಶ್ ರೈ ಅವರ ಕಾರಿಗೆ ಮೋದಿ ಅಭಿಮಾನಿಗಳು ಮುತ್ತಿಗೆ ಹಾಕಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪ್ರಗತಿಪರರು ಇದನ್ನು ವಿರೋಧಿಸಿದ್ದರೆ, ಮೋದಿ ಅಭಿಮಾನಿಗಳು ಪ್ರತಿಭಟನಾಕಾರರ ಕಾರ್ಯ ಶ್ಲಾಘಿಸಿದ್ದರು.

ಇಂದು ಹೆಚ್ಚು ಓದಿದ ಸುದ್ದಿಗಳು:
►►ನ್ಯಾಯಾಧೀಶರ ಎದುರೆ ಸರಕಾರಿ ಅಭಿಯೋಜಕರತ್ತ ಶೂ ಎಸೆದ ರೇಪ್ ಆರೋಪಿ:
http://bit.ly/2GWTogc
►►ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮ: ಕಥುವಾ, ಉನ್ನಾವ್ ಪ್ರಕರಣದ ಬಗ್ಗೆ ಮೌನ ಮುರಿದ ಮೋದಿ: http://bit.ly/2HAQTRZ
►►ಡಿವಿಲಿಯರ್ಸ್ ಅಬ್ಬರ: ಗೆಲುವಿನ ಖಾತೆ ತೆರೆದ ರಾಯಲ್ ಚಾಲೆಂಜರ್ಸ್: http://bit.ly/2IRX1o8
►►ಚನ್ನರಾಯಪಟ್ಟಣ ಬಸ್ ಅಪಘಾತ : ಕುಂದಾಪುರದ ಶಾಲಾ ಬಾಲಕ, ಬ್ರಹ್ಮಾವರದ ಯುವಕ ಸಾವು: http://bit.ly/2ISlLfV
►►ಬ್ಲ್ಯಾಕ್‌ಮೇಲ್ ಪ್ರಕರಣ: ಕುಂದಾಪುರ ಪತ್ರಕರ್ತರ ಸಂಘದಿಂದ ಖಂಡನೆ: http://bit.ly/2Hz1UTR
►►65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: 'ಹೆಬ್ಬೆಟ್ಟು ರಾಮಕ್ಕ' ಕನ್ನಡದ ಅತ್ಯುತ್ತಮ ಚಿತ್ರ: http://bit.ly/2ISekFt
►►ಬೈಂದೂರು ಬಿಜೆಪಿ ಟಿಕೆಟ್ ತಪ್ಪಿದರೆ ಪಕ್ಷೇತರನಾಗಿ ಸ್ಪರ್ಧಿಸಲಾರೆ: ಬಿ.ಎಂ ಸುಕುಮಾರ ಶೆಟ್ಟಿ: http://bit.ly/2IRHKn8
►►ಎ.ಜಿ ಕೊಡ್ಗಿಯವರ ಬಗ್ಗೆ ನನಗೆ ಗೌರವ ಇದೆ: ಹಾಲಾಡಿ ಶ್ರೀನಿವಾಸ ಶೆಟ್ಟಿ: http://bit.ly/2IOy6BQ

Related Tags: Prakash Rai, Kalburgi, Car, Protest, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ