ನ್ಯಾಯಾಧೀಶರ ಎದುರೆ ಸರಕಾರಿ ಅಭಿಯೋಜಕರತ್ತ ಶೂ ಎಸೆದ ರೇಪ್ ಆರೋಪಿ

ಕರಾವಳಿ ಕರ್ನಾಟಕ ವರದಿ

ಉಡುಪಿ:
ಅತ್ಯಾಚಾರ ಪ್ರಕರಣದ ಅಪರಾಧಿಯೊಬ್ಬ ನ್ಯಾಯಾಲಯದಲ್ಲಿ ಶಿಕ್ಷೆ ಪ್ರಕಟವಾಗುತ್ತಿದ್ದಂತೆ ನ್ಯಾಯಾಧೀಶರ ಎದುರಲ್ಲೇ ವಕೀಲರ ಮೇಲೆ ಶೂ ಎಸೆದ ಆಘಾತಕಾರಿ ಘಟನೆ ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ನಡೆದಿದೆ.

ಪೋಕ್ಸೋ ಕಾಯ್ದೆಯಡಿ 20 ವರ್ಷಗಳ ಜೈಲು ಶಿಕ್ಷೆಗೆ ಒಳಗಾದ ಪ್ರಶಾಂತ ಕುಲಾಲ್ ಎಂಬವನೇ ಶೂ ಎಸೆದ ಅಪರಾಧಿ.

ಅತ್ಯಾಚಾರ ಪ್ರಕರಣದಲ್ಲಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ವಾದಿಸಿದ ವಿಶೇಷ ಅಭಿಯೋಜಕ ವಿಜಯ ವಾಸು ಪೂಜಾರಿ ಎಂಬವರ ಮೇಲೆ ಈತ ಶೂ ಎಸೆದಿದ್ದು, ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
ಬ್ರಹ್ಮಾವರ ಸಮೀಪದ ಹೇರೂರು ಗ್ರಾಮದ ನಿವಾಸಿ ಪ್ರಶಾಂತ್ 2013ರಲ್ಲಿ 15 ವರ್ಷ ವಯಸ್ಸಿನ ಶಾಲಾ ಬಾಲಕಿಯೊಬ್ಬಳನ್ನು ಪೆರ್ಡೂರು ಸಮೀಪದ ಪಾಡಿಗಾರ ಎಂಬಲ್ಲಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದನು.

ಈ ಬಗ್ಗೆ ಬಾಲಕಿಯ ದೂರಿನಂತೆ ಪ್ರಕರಣ ದಾಖಲಾದ ಬಳಿಕ ವಿಚಾರಣೆ ನಡೆದು ಗುರುವಾರ ವಿಶೇಷ ಪೋಕ್ಸೋ ನ್ಯಾಯಾಲಯದಲ್ಲಿ ನ್ಯಾಯಾಧೀಶ ವೆಂಕಟೇಶ್ ನಾಯ್ಕ್ ಅವರು 20 ವರ್ಷಗಳ ಜೈಲು ಶಿಕ್ಷೆ, 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಈ ಪ್ರಕರಣದಲ್ಲಿ ಸಂತ್ರಸ್ತ ಬಾಲಕಿಯ ಮನೆಯವರ ಪರವಾಗಿ ಸರ್ಕಾರ ವಿಜಯ ವಾಸು ಪೂಜಾರಿ ಅವರನ್ನು ವಿಶೇಷ ಅಭಿಯೋಜನಕರನ್ನಾಗಿ ನಿಯೋಜಿಸಿತ್ತು. ವಿಜಯ ವಾಸು ಗುರುವಾರ ತಮ್ಮ ಕೊನೆಯ ವಾದವನ್ನು ಮಂಡಿಸಿ, ಆರೋಪಿ ಪ್ರಶಾಂತ್ ಅತ್ಯಾಚಾರ ಮಾತ್ರವಲ್ಲದೇ ಕೊಲೆ ಮತ್ತು ಇತರ ಆನೇಕ ಪ್ರಕರಣಗಳಲ್ಲಿಯೂ ಆರೋಪಿಯಾಗಿದ್ದಾನೆ. ಆದ್ದರಿಂದ ಆತನಿಗೆ ಗರಿಷ್ಠ ಶಿಕ್ಷೆ ವಿಧಿಸಬೇಕು ಎಂದು ನ್ಯಾಯಾಲಯವನ್ನು ಆಗ್ರಹಿಸಿದ್ದರು.

ಇದರಿಂದ ಕುಪಿತನಾದ ಆರೋಪಿ, ನ್ಯಾಯಾಧೀಶರು ಆತನಿಗೆ ಗರಿಷ್ಠ ಶಿಕ್ಷೆಯನ್ನು ಘೋಷಿಸಿತ್ತಿದ್ದಂತೆ ಕಟಕಟೆಯಿಂದಲೇ ತನ್ನ ಕಾಲಲ್ಲಿದ್ದ ಶೂವನ್ನು ತೆಗೆದು ವಿಜಯ ವಾಸು ಪೂಜಾರಿಯವರತ್ತ ತೂರಿದ್ದು, ಅದು ಗುರಿ ತಪ್ಪಿ ಕೆಳಗೆ ಬಿದ್ದಿದೆ. ತಕ್ಷಣ ಎಚ್ಚೆತ್ತ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಉಡುಪಿ ಜಿಲ್ಲಾ ನ್ಯಾಯಾಲಯದ 2 ದಶಕಗಳ ಇತಿಹಾಸದಲ್ಲೇ ಅಪರಾಧಿಯಿಂದ ಇಂತಹ ದುರ್ವರ್ತನೆ ನಡೆದಿರುವುದು ಇದೇ ಮೊದಲಾಗಿದೆ.
 
ಇಂದು ಹೆಚ್ಚು ಓದಿದ ಸುದ್ದಿಗಳು:
►►ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮ: ಕಥುವಾ, ಉನ್ನಾವ್ ಪ್ರಕರಣದ ಬಗ್ಗೆ ಮೌನ ಮುರಿದ ಮೋದಿ:
http://bit.ly/2HAQTRZ
►►ಡಿವಿಲಿಯರ್ಸ್ ಅಬ್ಬರ: ಗೆಲುವಿನ ಖಾತೆ ತೆರೆದ ರಾಯಲ್ ಚಾಲೆಂಜರ್ಸ್: http://bit.ly/2IRX1o8
►►ಚನ್ನರಾಯಪಟ್ಟಣ ಬಸ್ ಅಪಘಾತ : ಕುಂದಾಪುರದ ಶಾಲಾ ಬಾಲಕ, ಬ್ರಹ್ಮಾವರದ ಯುವಕ ಸಾವು: http://bit.ly/2ISlLfV
►►ಬ್ಲ್ಯಾಕ್‌ಮೇಲ್ ಪ್ರಕರಣ: ಕುಂದಾಪುರ ಪತ್ರಕರ್ತರ ಸಂಘದಿಂದ ಖಂಡನೆ: http://bit.ly/2Hz1UTR
►►65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: 'ಹೆಬ್ಬೆಟ್ಟು ರಾಮಕ್ಕ' ಕನ್ನಡದ ಅತ್ಯುತ್ತಮ ಚಿತ್ರ: http://bit.ly/2ISekFt
►►ಬೈಂದೂರು ಬಿಜೆಪಿ ಟಿಕೆಟ್ ತಪ್ಪಿದರೆ ಪಕ್ಷೇತರನಾಗಿ ಸ್ಪರ್ಧಿಸಲಾರೆ: ಬಿ.ಎಂ ಸುಕುಮಾರ ಶೆಟ್ಟಿ: http://bit.ly/2IRHKn8
►►ಎ.ಜಿ ಕೊಡ್ಗಿಯವರ ಬಗ್ಗೆ ನನಗೆ ಗೌರವ ಇದೆ: ಹಾಲಾಡಿ ಶ್ರೀನಿವಾಸ ಶೆಟ್ಟಿ: http://bit.ly/2IOy6BQ

Related Tags: Udupi, Rape Accused, Hurls Shoes, Public Prosecutor, Judge Pronounces Verdict, Prashanth Kulal, Vijaya Vasu Poojary, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ