ಚನ್ನರಾಯಪಟ್ಟಣ ಬಸ್ ಅಪಘಾತ : ಕುಂದಾಪುರದ ಶಾಲಾ ಬಾಲಕ ಸಾವು
Apr 13 2018 8:42PM
ಕರಾವಳಿ ಕರ್ನಾಟಕ ವರದಿ

ಕುಂದಾಪುರ : ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದ ಹಿರೆಸಾವೇ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಬಸ್ ಅಪಘಾತದಲ್ಲಿ ಕುಂದಾಪುರ ಮೂಲದ ಶ್ರೀಶಿರ (14) ಹಾಗೂ ಬ್ರಹ್ಮಾವರದ ಕುಂಬ್ರಗೋಡಿನ ಮಹೇಶ್ ಪೂಜಾರಿ (38) ಮೃತರಾಗಿದ್ದಾರೆ.
ಅಪಘಾತದಲ್ಲಿ ಮೃತ ಪಟ್ಟ ಬಾಲಕ ಶ್ರೀಶಿರ ಕುಂದಾಪುರದ ಶ್ರೀಲತಾ ಡ್ರೆಸ್ ಸೆಂಟರ್ ಮಾಲಕ ನಾಗೇಶ್ ರಾವ್ ಅವರ ಪುತ್ರಿ ಶ್ರೀದೇವಿ ಅವರ ಪುತ್ರ. ಶಾಲೆಯ ರಜೆ ಕಳೆಯಲು ತಂದೆ–ತಾಯಿ ಹಾಗೂ ಸಹೋದರಿಯೊಂದಿಗೆ ಕುಂದಾಪುರಕ್ಕೆ ಬಂದಿದ್ದ. 8ನೇ ತರಗತಿಯ ಪ್ರವೇಶ ನೊಂದಾವಣೆಗಾಗಿ ಗುರುವಾರ ರಾತ್ರಿ ತಂದೆಯೊಡನೆ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದ. ಶುಕ್ರವಾರ ಮುಂಜಾನೆ ಬಸ್ ಅಪಘಾತದಲ್ಲಿ ಮೃತಪಟ್ಟಿರುವ ಖೇದಕರ ಸಂಗತಿ ಇದಾಗಿದೆ.
ಮಳೆ ಹನಿಯುತ್ತಿದ್ದ ಕಾರಣ ಆಕಸ್ಮಿಕವಾಗಿ ಹಾಕಿದ ಬ್ರೇಕ್ನಿಂದಾಗಿ ಬಸ್ಸು ಸ್ಕೀಡ್ ಆಗಿ ಡಿವೈಡರ್ಗೆ ಹೊಡೆದು ಮಗುಚಿ ಬಿದ್ದಿದ್ದರಿಂದ ಕೆಳ ಸ್ಲೀಪರ್ನಲ್ಲಿ ನಿದ್ರಿಸುತ್ತಿದ್ದು ಶ್ರೀಶಿರ ಹೊರ ಎಸೆಯಲ್ವಟ್ಟು, ಬಸ್ಸಿನ ಅಡಿಗೆ ಸಿಲುಕಿ ಮೃತ ಪಟ್ಟಿದ್ದಾನೆ.
ಅಪಘಾತದಲ್ಲಿ ಮೃತ ಪಟ್ಟಿರುವ ಶ್ರೀಶಿರ ಅವರ ಅಜ್ಜನ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ತಾಯಿ, ಅಜ್ಜ–ಅಜ್ಜಿ ಹಾಗೂ ಬಂಧುಗಳ ಆಕ್ರಂದನ ಮುಗಿಲು ಮುಟ್ಟಿದೆ.
ಪ್ರತಿಭಾವಂತ ವಿದ್ಯಾರ್ಥಿ ಬಾಲಕ ಮುಂದಿನ ಭವಿಷ್ಯದ ಕನಸುಗಳನ್ನು ಹೊತ್ತು ತಂದೆಯೊಡನೆ ಬೆಂಗಳೂರಿಗೆಂದು ತೆರಳಿದ್ದವನು ಶವವಾಗಿ ಬರುತ್ತಿರುವ ವಾರ್ತೆಯನ್ನು ಅರಗಿಸಿಕೊಳ್ಳಲಾಗದ ಬಂಧುಗಳ ಕಣ್ಣೀರು ಕಲ್ಲು ಹೃದಯವನ್ನು ಕರುಗಿಸುತ್ತಿದೆ.
ಇದೆ ಬಸ್ಸಿನಲ್ಲಿ ಬೆಂಗಳೂರಿಗೆ ಬ್ರಹ್ಮಾವರದಿಂದ ಪ್ರಯಾಣ ಬೆಳೆಸಿದ್ದ ಕುಂಬ್ರಗೋಡಿನ ಮಹೇಶ್ ಪೂಜಾರಿ ಎನ್ನುವವರಿಗೂ ಅಪಘಾತದಲ್ಲಿ ಉಂಟಾದ ತೀವೃವಾದ ಗಾಯಗಳಿಂದಾಗಿ ಅವರು ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಶೀಶಿರ್ ಅವರ ತಂದೆ, ಮಹೇಶ್ ಪೂಜಾರಿ ಅವರ ಪತ್ನಿ ಸೇರಿದಂತೆ 7–8 ಪ್ರಯಾಣಿಕರಿಗೂ ಸಣ್ಣ ಪುಟ್ಟ ಗಾಯಗಳುಂಟಾಗಿವೆ ಎನ್ನಲಾಗಿದೆ.
ಕುಂಬ್ರಗೋಡಿನ ಮಹೇಶ್ ಪೂಜಾರಿ ಬೆಂಗಳೂರಿನ ಅಂತರಾಷ್ಟ್ರೀಯ ಮಟ್ಟದ ಪ್ರಸಿದ್ದ ಕಂಪೆನಿಯಲ್ಲಿ ಉನ್ನತ ವೇತನ ಶ್ರೇಣಿಯ ಉದ್ಯೋಗಿಯಾಗಿದ್ದರು. ಕಾರ್ಯಕ್ರಮಕ್ಕೆಂದು ಊರಿಗೆ ಬಂದಿದ್ದ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಮರಳಿ ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಿದ್ದರು.
ಇಂದು ಹೆಚ್ಚು ಓದಿದ ಸುದ್ದಿಗಳು:
►►ಬ್ಲ್ಯಾಕ್ಮೇಲ್ ಪ್ರಕರಣ: ಕುಂದಾಪುರ ಪತ್ರಕರ್ತರ ಸಂಘದಿಂದ ಖಂಡನೆ: http://bit.ly/2Hz1UTR
►►65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: 'ಹೆಬ್ಬೆಟ್ಟು ರಾಮಕ್ಕ' ಕನ್ನಡದ ಅತ್ಯುತ್ತಮ ಚಿತ್ರ: http://bit.ly/2ISekFt
►►ಬೈಂದೂರು ಬಿಜೆಪಿ ಟಿಕೆಟ್ ತಪ್ಪಿದರೆ ಪಕ್ಷೇತರನಾಗಿ ಸ್ಪರ್ಧಿಸಲಾರೆ: ಬಿ.ಎಂ ಸುಕುಮಾರ ಶೆಟ್ಟಿ: http://bit.ly/2IRHKn8
►►ಎ.ಜಿ ಕೊಡ್ಗಿಯವರ ಬಗ್ಗೆ ನನಗೆ ಗೌರವ ಇದೆ: ಹಾಲಾಡಿ ಶ್ರೀನಿವಾಸ ಶೆಟ್ಟಿ: http://bit.ly/2IOy6BQ
►►ಕಾಮನ್ವೆಲ್ತ್ ಗೇಮ್ಸ್: ಪಿಸ್ತೂಲ್ನಲ್ಲಿ ಚಿನ್ನ ಗೆದ್ದ ಭಾರತದ ಅತ್ಯಂತ ಕಿರಿಯ ಸಾಧಕ: http://bit.ly/2GUWIIt
►►ಉನ್ನಾವ್ ಅತ್ಯಾಚಾರ ಪ್ರಕರಣ: ಉ.ಪ್ರ ಬಿಜೆಪಿ ಶಾಸಕ ಸಿಬಿಐ ವಶಕ್ಕೆ: http://bit.ly/2GRRbGK
►►ಪತ್ರಕರ್ತರ ಸೋಗಿನಲ್ಲಿ ನಿರಂತರ ಕಿರುಕುಳ, ಬ್ಲ್ಯಾಕ್ಮೇಲ್: ಮೂವರ ಬಂಧನ: http://bit.ly/2ISekFt
Related Tags: Accident at Channapatna, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕುಂದಾಪುರ ಬಾಲಕ ಅಪಘಾತಕ್ಕೆ ಬಲಿ,ಶ್ರೀಲತಾ ಡ್ರೆಸ್ ಸೆಂಟರ್, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ