ತಿಪ್ಪೇಸ್ವಾಮಿಗೆ ತಪ್ಪಿದ ಟಿಕೆಟ್: ಶ್ರೀರಾಮುಲುಗೆ ಪೊರಕೆ, ಚಪ್ಪಲಿ ಸ್ವಾಗತ!

ಕರಾವಳಿ ಕರ್ನಾಟಕ ವರದಿ

ಚಿತ್ರದುರ್ಗ:
ಮೊಳಕಾಲ್ಮೂರು ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಪ್ರಚಾರ ನಡೆಸಲು ಮುಂದಾದ ವೇಳೆ ಶಾಸಕ ತಿಪ್ಪೇಸ್ವಾಮಿ ಬೆಂಬಲಿಗರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಶ್ರೀರಾಮುಲು ವಿರುದ್ದ ಕಲ್ಲು ತೂರಾಟ ನಡೆಸಿದ ಘಟನೆ ವರದಿಯಾಗಿದೆ.

ಶ್ರೀರಾಮುಲು ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧೆ ಮಾಡಬಾರದು. ತಿಪ್ಪೇಸ್ವಾಮಿ ಅವರಿಗೆ ಕ್ಚೇತ್ರ ಬಿಟ್ಟುಕೊಡಬೇಕು ಎಂದು ಆಗ್ರಹಿಸಿ ತಿಪ್ಪೇಸ್ವಾಮಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ.

ಚಳ್ಳಕೆರೆಯ ನಾಯಕನ ಹಟ್ಟಿ ದೇಗುಲದ ಬಳಿ ಶ್ರೀರಾಮುಲು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಉದ್ರಿಕ್ತರು ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಪುಡಿಯಾಗಿದೆ.

ಶ್ರೀರಾಮುಲು ಅವರು ಭಾರೀ ಭದ್ರತೆಯೊಂದಿಗೆ ತಿಪ್ಪೇರುದ್ರಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದ್ದಾರೆ. ದೇಗುಲದ ಬಳಿ ನೂರಾರು ತಿಪ್ಪೇಸ್ವಾಮಿ ಬೆಂಬಲಿಗರು ಸೇರಿದ್ದು ಧಿಕ್ಕಾರಗಳನ್ನು ಕೂಗಿ ಆಕ್ರೋಶ ಹೊರಗೆಡವಿದ್ದಾರೆ.

ನೂರಾರು ಮಹಿಳೆಯರು, ಮಕ್ಕಳು 'ಗೋ ಬ್ಯಾಕ್ ಶ್ರೀರಾಮುಲು' ಎಂದು ಘೋಷಣೆಗಳನ್ನು ಕೂಗಿದರು. ಮಹಿಳೆರು ಪೊರಕೆ ಹಿಡಿದು ಶ್ರೀರಾಮುಲು ಅವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಕೆಲವರು ಶ್ರೀರಾಮುಲು ಅವರ ಕಾರಿನತ್ತ ಚಪ್ಪಲಿಗಳನ್ನು ತೂರಿದರು.

ಈ ಕುರಿತು ಪ್ರತಿಕ್ರಿಯಿಸಿರುವ ಶ್ರೀರಾಮುಲು ಘಟನೆಯ ಕುರಿತು ಮನಸ್ಸಿಗೆ ನೋವಾಗಿದೆ. ತಿಪ್ಪೇಸ್ವಾಮಿಯವರ ಕುರಿತು ತುಂಬಾ ಗೌರವವಿತ್ತು. ಆ ಗೌರವನ್ನು ಅವರು ಇಂದು ಕಳೆದುಕೊಂಡಿದ್ದಾರೆ. ಮುಂದೆ ಬರುವ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ. ನಿರ್ಧಾರ ಬದಲಾವಣೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದಿದ್ದಾರೆ.

ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿ  25 ಮಂದಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ.

ಇಂದು ಹೆಚ್ಚು ಓದಿದ ಸುದ್ದಿಗಳು:
►►ಬ್ಲ್ಯಾಕ್‌ಮೇಲ್ ಪ್ರಕರಣ: ಕುಂದಾಪುರ ಪತ್ರಕರ್ತರ ಸಂಘದಿಂದ ಖಂಡನೆ:
http://bit.ly/2Hz1UTR
►►65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: 'ಹೆಬ್ಬೆಟ್ಟು ರಾಮಕ್ಕ' ಕನ್ನಡದ ಅತ್ಯುತ್ತಮ ಚಿತ್ರ: http://bit.ly/2ISekFt
►►ಬೈಂದೂರು ಬಿಜೆಪಿ ಟಿಕೆಟ್ ತಪ್ಪಿದರೆ ಪಕ್ಷೇತರನಾಗಿ ಸ್ಪರ್ಧಿಸಲಾರೆ: ಬಿ.ಎಂ ಸುಕುಮಾರ ಶೆಟ್ಟಿ: http://bit.ly/2IRHKn8
►►ಎ.ಜಿ ಕೊಡ್ಗಿಯವರ ಬಗ್ಗೆ ನನಗೆ ಗೌರವ ಇದೆ: ಹಾಲಾಡಿ ಶ್ರೀನಿವಾಸ ಶೆಟ್ಟಿ: http://bit.ly/2IOy6BQ
►►ಕಾಮನ್‌ವೆಲ್ತ್ ಗೇಮ್ಸ್‌: ಪಿಸ್ತೂಲ್‌ನಲ್ಲಿ ಚಿನ್ನ ಗೆದ್ದ ಭಾರತದ ಅತ್ಯಂತ ಕಿರಿಯ ಸಾಧಕ: http://bit.ly/2GUWIIt
►►ಉನ್ನಾವ್ ಅತ್ಯಾಚಾರ ಪ್ರಕರಣ: ಉ.ಪ್ರ ಬಿಜೆಪಿ ಶಾಸಕ ಸಿಬಿಐ ವಶಕ್ಕೆ: http://bit.ly/2GRRbGK
►►ಪತ್ರಕರ್ತರ ಸೋಗಿನಲ್ಲಿ ನಿರಂತರ ಕಿರುಕುಳ, ಬ್ಲ್ಯಾಕ್‌ಮೇಲ್: ಮೂವರ ಬಂಧನ: http://bit.ly/2ISekFt

Related Tags: Sriramulu, MLA Thippeswamy Supporters, Chitradurga News, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ