ಬ್ಲ್ಯಾಕ್‌ಮೇಲ್ ಪ್ರಕರಣ: ಕುಂದಾಪುರ ಪತ್ರಕರ್ತರ ಸಂಘದಿಂದ ಖಂಡನೆ

ಕರಾವಳಿ ಕರ್ನಾಟಕ ವರದಿ

ಕುಂದಾಪುರ:
ಪತ್ರಕರ್ತರ ಸೋಗಿನಲ್ಲಿ ಸಾರ್ವಜನಿಕರಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಮತ್ತು ಕಿರುಕುಳ ನೀಡುತ್ತಿದ್ದ ಮೂವರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದು, ಅವರ ಮೇಲೆ ಪ್ರಕರಣ ದಾಖಲಾಗಿದೆ.

ಸಾರ್ವಜನಿಕರಿಗೆ ನಿರಂತರ ತೊಂದರೆ ಕೊಡುತ್ತಿದ್ದ ಈ ಮೂವರ ಕೃತ್ಯವನ್ನು "ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ" ತೀವ್ರವಾಗಿ ಖಂಡಿಸಿದೆ.

ಪ್ರಕರಣದ ಆರೋಪಿಗಳಾದ ಲೋಕೇಶ್ ಭಂಡಾರಿ ಮತ್ತು ಮಂಜುನಾಥ ಎಂಬ ಇಬ್ಬರು ಪತ್ರಕರ್ತರ ಸಂಘದ ಸದಸ್ಯರಲ್ಲ. ಆದರೆ ಇನ್ನೋರ್ವ ಆರೋಪಿಯಾದ ಧರ್ಮೇಂದ್ರ ಬೆಂಗಳೂರಿನ ಪತ್ರಿಕೆಯೊಂದರ ದಾಖಲೆಗಳನ್ನು ನೀಡಿ ಎರಡು ತಿಂಗಳ ಹಿಂದಷ್ಟೆ ನಮ್ಮ ಸಂಘದ ಸದಸ್ಯತ್ವ ಪಡೆದಿರುತ್ತಾರೆ.

ಬ್ಲ್ಯಾಕ್‌ಮೇಲ್ ಮತ್ತು ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಧರ್ಮೇಂದ್ರ ಅವರ ಸದಸ್ಯತ್ವವನ್ನು ತಕ್ಷಣದಿಂದಲೇ ಅಮಾನತು ಮಾಡಲಾಗಿದೆ.

ಯಾವುದೇ ಪತ್ರಕರ್ತರು ಅಥವಾ ಪತ್ರಕರ್ತರೆಂದು ಹೇಳಿಕೊಳ್ಳುವವರು ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ಬ್ಲ್ಯಾಕ್‌ಮೇಲ್ ಮಾಡುವುದು, ಕಿರುಕುಳ ಕೊಡುವುದು ಮತ್ತು ಹಣ ವಸೂಲಿಗೆ ಇಳಿಯುವುದನ್ನು ಕುಂದಾಪುರ ತಾ.ಕಾ.ನಿ ಪತ್ರಕರ್ತರ ಸಂಘ ಎಂದಿಗೂ ಬೆಂಬಲಿಸುವುದಿಲ್ಲ.

ಅಂತಹ ಯಾವುದೇ ಪ್ರಕರಣಗಳು ಗಮನಕ್ಕೆ ಬಂದಲ್ಲಿ ಸಾರ್ವಜನಿಕರು ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದನ್ನು ನಮ್ಮ ಸಂಘವು ಸದಾ ಬೆಂಬಲಿಸುತ್ತದೆ ಎಂದು ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಮತ್ತು ಕಾರ್ಯದರ್ಶಿ ನಾಗರಾಜ ರಾಯಪ್ಪನ ಮಠ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:
►►ಪತ್ರಕರ್ತರ ಸೋಗಿನಲ್ಲಿ ನಿರಂತರ ಕಿರುಕುಳ, ಬ್ಲ್ಯಾಕ್‌ಮೇಲ್: ಮೂವರ ಬಂಧನ:
http://bit.ly/2ISekFt

ಇಂದು ಹೆಚ್ಚು ಓದಿದ ಸುದ್ದಿಗಳು:
►►65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: 'ಹೆಬ್ಬೆಟ್ಟು ರಾಮಕ್ಕ' ಕನ್ನಡದ ಅತ್ಯುತ್ತಮ ಚಿತ್ರ:
http://bit.ly/2ISekFt
►►ಬೈಂದೂರು ಬಿಜೆಪಿ ಟಿಕೆಟ್ ತಪ್ಪಿದರೆ ಪಕ್ಷೇತರನಾಗಿ ಸ್ಪರ್ಧಿಸಲಾರೆ: ಬಿ.ಎಂ ಸುಕುಮಾರ ಶೆಟ್ಟಿ: http://bit.ly/2IRHKn8
►►ಎ.ಜಿ ಕೊಡ್ಗಿಯವರ ಬಗ್ಗೆ ನನಗೆ ಗೌರವ ಇದೆ: ಹಾಲಾಡಿ ಶ್ರೀನಿವಾಸ ಶೆಟ್ಟಿ: http://bit.ly/2IOy6BQ
►►ಕಾಮನ್‌ವೆಲ್ತ್ ಗೇಮ್ಸ್‌: ಪಿಸ್ತೂಲ್‌ನಲ್ಲಿ ಚಿನ್ನ ಗೆದ್ದ ಭಾರತದ ಅತ್ಯಂತ ಕಿರಿಯ ಸಾಧಕ: http://bit.ly/2GUWIIt
►►ಉನ್ನಾವ್ ಅತ್ಯಾಚಾರ ಪ್ರಕರಣ: ಉ.ಪ್ರ ಬಿಜೆಪಿ ಶಾಸಕ ಸಿಬಿಐ ವಶಕ್ಕೆ: http://bit.ly/2GRRbGK
►►ಪತ್ರಕರ್ತರ ಸೋಗಿನಲ್ಲಿ ನಿರಂತರ ಕಿರುಕುಳ, ಬ್ಲ್ಯಾಕ್‌ಮೇಲ್: ಮೂವರ ಬಂಧನ: http://bit.ly/2ISekFt

Related Tags: Blackmail, Journalists, Kundapur, Dharmendra, Lokesh, Manjunath, Vikram, Kundapur Police, Farook Koteshwar, Kundapur Police, Kundapur Talluk Journalist Union, Shashidhar Hemmady, Nagaraj Rayappanamata, Kannada News, Karnataka News, Coastal Karnataka News, Karavali News, Karavali Karnataka, Latest Ka
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ