65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: 'ಹೆಬ್ಬೆಟ್ಟು ರಾಮಕ್ಕ' ಕನ್ನಡದ ಅತ್ಯುತ್ತಮ ಚಿತ್ರ

ಕರಾವಳಿ ಕರ್ನಾಟಕ ವರದಿ

ನವದೆಹಲಿ:
65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು, ಪ್ರಾದೇಶಿಕ ಭಾಷೆಗಳ ವಿಭಾಗದಲ್ಲಿ ಕನ್ನಡದ ಅತ್ಯುತ್ತಮ ಚಿತ್ರವಾಗಿ 'ಹೆಬ್ಬೆಟ್ಟು ರಾಮಕ್ಕ' ಆಯ್ಕೆಯಾಗಿದೆ. ಅತ್ಯುತ್ತಮ ಜನಪ್ರಿಯ ಚಿತ್ರ ಪ್ರಶಸ್ತಿ 'ಬಾಹುಬಲಿ 2'ಗೆ ಒಲಿದಿದ್ದು, ಅತ್ಯುತ್ತಮ ಹಿನ್ನೆಲೆ ಗಾಯಕರಾಗಿ ಯೇಸುದಾಸ್ ಹಾಗೂ ಗಾಯಕಿಯಾಗಿ ಸಾಷಾ ತೃಪತಿ ಆಯ್ಕೆಯಾಗಿದ್ದಾರೆ.

ಅತ್ಯುತ್ತಮ ನಟ ಪ್ರಶಸ್ತಿಗೆ 'ರುಸ್ತುಂ' ಚಿತ್ರದಲ್ಲಿನ ಅಭಿನಯಕ್ಕಾಗಿ ಅಕ್ಷಯ್ ಕುಮಾರ್ ಭಾಜನರಾಗಿದ್ದಾರೆ. 'ಮಾಮ್' ಚಿತ್ರದಲ್ಲಿನ ನಟನೆಗಾಗಿ 'ಅತಿಲೋಕ ಸುಂದರಿ' ದಿವಂಗತ ನಟಿ ಶ್ರೀದೇವಿಗೆ 'ಅತ್ಯುತ್ತಮ ನಟಿ' ಪ್ರಶಸ್ತಿ ಲಭಿಸಿದೆ.

ಬಾಲಿವುಡ್ ನಟ ದಿವಂಗತ ವಿನೋದ್ ಖನ್ನಾ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರಕಟವಾಗಿದೆ. ಭಾರತೀಯ ಚಿತ್ರರಂಗದಲ್ಲಿನ ಜೀವಮಾನದ ಸಾಧನೆಗಾಗಿ ಭಾರತ ಸರ್ಕಾರವು ನೀಡುವ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಗೌರವಕ್ಕೆ ನಟ ವಿನಹೋದ್ ಖನ್ನಾ ಪಾತ್ರರಾಗಿದ್ದಾರೆ. ಮೇ. ೦3 ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಈ ಬಾರಿ ಪ್ರಶಸ್ತಿ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಖ್ಯಾತ ನಿರ್ದೇಶಕ ಶೇಖರ್ ಕಪೂರ್ ಕಾರ್ಯನಿರ್ವಹಿಸಿದ್ದಾರೆ. ಹತ್ತು ಸದಸ್ಯರನ್ನು ಒಳಗೊಂಡಿರುವ ಆಯ್ಕೆ ಸಮಿತಿಯಲ್ಲಿ ಚಿತ್ರಕಥೆಗಾರರಾದ ಇಮ್ತಿಯಾಜ್ ಹುಸ್ಸೇನ್, ಗೀತಸಾಹಿತಿ ಮೆಹಬೂಬ್, ನಟಿ ಗೌತಮಿ ತಡಿಮಲ್ಲ, ಕನ್ನಡದ ನಿರ್ದೇಶಕ ಪಿ ಶೇಷಾದ್ರಿ, ಅನಿರುದ್ಧ್ ರಾಯ್ ಚೌದರಿ, ರಂಜಿತ್ ದಾಸ್, ರಾಜೇಶ್ ಮಪುಸ್ಕರ್, ತ್ರಿಪುರಾರಿ ಶರ್ಮಾ ಮತ್ತು ರುಮಿ ಜಾಫ್ರಿ ಇದ್ದಾರೆ.

ಉಳಿದಂತೆ ಪ್ರಶಸ್ತಿಗೆ ಪಾತ್ರರಾದವರ ಪಟ್ಟಿ ಇಂತಿದೆ
ಅತ್ಯುತ್ತಮ ನಾನ್ ಫೀಚರ್ ಫಿಲ್ಮ್- ವಾಟರ್ ಬೇಬಿ
ಅತ್ಯುತ್ತಮ ಶೈಕ್ಷಣಿಕ ಚಿತ್ರ - ದ ಗರ್ಲ್ ವಿ ಆರ್ ಅಂಡ್ ದ ವುಮೆನ್ ವಿ ಆರ್
ಅತ್ಯುತ್ತಮ ಕಲಾ ಮತ್ತು ಸಾಂಸ್ಕೃತಿಕ ಚಿತ್ರ- ಗಿರಿಜಾ (ಎ ಲೈಫ್ ಆಫ್ ಮ್ಯೂಸಿಕ್)
ಅತ್ಯುತ್ತಮ ಸಾಮಾಜಿಕ ಕಳಕಳಿಯ ಚಿತ್ರ- ಐ ಆ್ಯಮ್ ಬೊಮ್ಮಿ ಅಂಡ್ ವೇಲ್ ಡನ್
ಅತ್ಯುತ್ತಮ ಕಿರುಚಿತ್ರ (ಫಿಕ್ಷನ್)- ಮರಾಠಿ ಭಾಷೆಯ ಮಯ್ಯಾತ್
ವಿಶೇಷ ಪ್ರಶಸ್ತಿ - ಮೋರ್ಕಿಯಾ (ಮರಾಠಿ), ಹೆಲ್ಲೋ ಆರ್ಸಿ (ಒರಿಯಾ), ಟೇಕ್ ಆಫ್ ಗಾಟ್ (ಮಲಯಾಳಂ)
ಅತ್ಯುತ್ತಮ ಜಾಸ್ಸರಿ ಚಿತ್ರ - ಸಿಂಜಾರ್
ಅತ್ಯುತ್ತಮ ಒರಿಯಾ ಚಿತ್ರ - ಹೆಲ್ಲೋ ಆರ್ಸಿ
ಅತ್ಯುತ್ತಮ ತುಳು ಚಿತ್ರ- ಪಡ್ಡಾಯಿ
ಅತ್ಯುತ್ತಮ ಕನ್ನಡ ಚಿತ್ರ - ಹೆಬ್ಬೆಟ್ಟು ರಾಮಕ್ಕ
ಅತ್ಯುತ್ತಮ ತೆಲುಗು ಚಿತ್ರ - ದಿ ಘಾಜಿ ಅಟ್ಯಾಕ್
ಅತ್ಯುತ್ತಮ ಸಾಹಸ ನಿರ್ದೇಶಕ ಪ್ರಶಸ್ತಿ- ರಾಜಮೌಳಿ ನಿರ್ದೇಶನದ ಬಾಹುಬಲಿ
ಅತ್ಯುತ್ತಮ ಕೊರಿಯೋಗ್ರಫಿ- ಟಾಯ್ಲೆಟ್ ಏಕ್ ಪ್ರೇಮಕಥಾ ಚಿತ್ರದ ಗೋರಿ ತೂ ಲಾಥ್ ಮಾರಿ ಹಾಡು
ಅತ್ಯುತ್ತಮ ವಿಷ್ಯುವಲ್ ಎಫೆಕ್ಟ್ಸ್ - ಬಾಹುಬಲಿ
ಅತ್ಯುತ್ತಮ ಸಂಗೀತ ನಿರ್ದೇಶನ - ಮಣಿ ರತ್ನಂ ನಿರ್ದೇಶನದ ಕಾಟ್ರು ವೆಲಿಯಿಡಯ್
ಅತ್ಯುತ್ತಮ ಹಿನ್ನಲೆ ಸಂಗೀತ - ಮಾಮ್ ಚಿತ್ರ, ಸಂಗೀತ ನಿರ್ದೇಶಕ ಎಆರ್ ರೆಹಮಾನ್
ಅತ್ಯುತ್ತಮ ಮೇಕಪ್ ಆರ್ಟಿಸ್ಟ್- ಬೆಂಗಾಳಿ ಚಿತ್ರ ನಗರ್ ಕೀರ್ತನ್

ಇಂದು ಹೆಚ್ಚು ಓದಿದ ಸುದ್ದಿಗಳು:
►►ಬೈಂದೂರು ಬಿಜೆಪಿ ಟಿಕೆಟ್ ತಪ್ಪಿದರೆ ಪಕ್ಷೇತರನಾಗಿ ಸ್ಪರ್ಧಿಸಲಾರೆ: ಬಿ.ಎಂ ಸುಕುಮಾರ ಶೆಟ್ಟಿ:
http://bit.ly/2IRHKn8
►►ಎ.ಜಿ ಕೊಡ್ಗಿಯವರ ಬಗ್ಗೆ ನನಗೆ ಗೌರವ ಇದೆ: ಹಾಲಾಡಿ ಶ್ರೀನಿವಾಸ ಶೆಟ್ಟಿ: http://bit.ly/2IOy6BQ
►►ಕಾಮನ್‌ವೆಲ್ತ್ ಗೇಮ್ಸ್‌: ಪಿಸ್ತೂಲ್‌ನಲ್ಲಿ ಚಿನ್ನ ಗೆದ್ದ ಭಾರತದ ಅತ್ಯಂತ ಕಿರಿಯ ಸಾಧಕ: http://bit.ly/2GUWIIt
►►ಉನ್ನಾವ್ ಅತ್ಯಾಚಾರ ಪ್ರಕರಣ: ಉ.ಪ್ರ ಬಿಜೆಪಿ ಶಾಸಕ ಸಿಬಿಐ ವಶಕ್ಕೆ: http://bit.ly/2GRRbGK
►►ಪತ್ರಕರ್ತರ ಸೋಗಿನಲ್ಲಿ ನಿರಂತರ ಕಿರುಕುಳ, ಬ್ಲ್ಯಾಕ್‌ಮೇಲ್: ಮೂವರ ಬಂಧನ: http://bit.ly/2ISekFt
►►ಧೈರ್ಯವಿದ್ದರೆ ಮುಖಾಮುಖಿ ಚರ್ಚೆಗೆ ಬನ್ನಿ: ಅನಂತ ಹೆಗಡೆಗೆ ಪ್ರಕಾಶ್ ರೈ ಸವಾಲು: http://bit.ly/2v7LLlF

Related Tags: National Film Awards 2018, Hebbettu Ramakka, Best Kannada Film, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ