ಬೈಂದೂರು ಬಿಜೆಪಿ ಟಿಕೆಟ್ ತಪ್ಪಿದರೆ ಪಕ್ಷೇತರನಾಗಿ ಸ್ಪರ್ಧಿಸಲಾರೆ: ಬಿ.ಎಂ ಸುಕುಮಾರ ಶೆಟ್ಟಿ
ಬೇರೆಯವರಿಗೆ ಟಿಕೆಟ್ ನೀಡಿದರೆ ಜನ ತೀರ್ಮಾನಿಸುತ್ತಾರೆ. ಜಯಪ್ರಕಾಶ್ ಹೆಗ್ಡೆಯವರನ್ನು ಅಲ್ಪಾವಧಿಯಲ್ಲಿ ಬೈಂದೂರಿಗೆ ಪರಿಚಯಿಸಲು ಸಾಧ್ಯವೆ?

ಕರಾವಳಿ ಕರ್ನಾಟಕ ವರದಿ

ಕುಂದಾಪುರ:
ನನ್ನನ್ನು ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡಿದರೆ ಜನ ತೀರ್ಮಾನಿಸುತ್ತಾರೆ. ಆದರೆ ಟಿಕೆಟ್ ಸಿಕ್ಕಿಲ್ಲ ಎಂದು ಪಕ್ಷೇತರನಾಗಿ ಸ್ಪರ್ಧಿಸಲಾರೆ ಎಂದು ಬೈಂದೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಬಿ.ಎಂ ಸುಕುಮಾರ ಶೆಟ್ಟಿ ಹೇಳಿದ್ದಾರೆ.

ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆಯವರಿಗೆ ಉಳಿದ ಇಪ್ಪತ್ತೈದು ದಿನಗಳಲ್ಲು ಬೈಂದೂರು ಕ್ಷೇತ್ರಕ್ಕೆ ಬಂದು ರಾಜಕೀಯ ಮಾಡಲು ಸಾಧ್ಯವೇ? ಅವರನ್ನು 243 ಬೂತ್‌ಗಳಿಗೆ ಪರಿಚಯಿಸಲು ಸಾಧ್ಯವೆ ಎಂದು ಅವರು ಪ್ರಶ್ನಿಸಿದರು. 

ಜಯಪ್ರಕಾಶ್ ಹೆಗ್ಡೆ ಬೈಂದೂರು ಕ್ಷೇತ್ರಕ್ಕೆ ಬರಲೇ ಇಲ್ಲ ಎಂದಿರುವ ಸುಕುಮಾರ ಶೆಟ್ಟರು ಕ್ಷೇತ್ರದ ಜನ ಬುದ್ಧಿವಂತರಿದ್ದು, ಕ್ಷೇತ್ರದ ಅಭಿವೃದ್ಧಿಗೆ ಯಾರು ಸಮರ್ಥರು ಎಂಬುದು ಅವರಿಗೆ ಗೊತ್ತಿದೆ ಎನ್ನುವ ಮೂಲಕ ಬೈಂದೂರು ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ದೊರೆಯುವ ಬಗ್ಗೆ ಪ್ರಬಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಎರಡನೇ ಪಟ್ಟಿಯಲ್ಲಿ ಹೆಸರು ಬಂದರೂ ತಲೆಬಿಸಿ ಮಾಡುವುದಿಲ್ಲ. ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಶಾಸಕರು, ಮಾಜಿ ಶಾಸಕರ ಹೆಸರಿವೆ. ಆದ್ದರಿಂದ ನಾನು ಜನಪರ ಕೆಲಸ ಮಾಡಿರುವುದರಿಂದ ನನಗೆ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟರನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬುದು ಸುಕುಮಾರ ಶೆಟ್ಟರ ಖಚಿತ ಅಭಿಪ್ರಾಯ. ಅವರು ಬಿಜೆಪಿ ಸೇರಿರುವುದರಿಂದ ಬೈಂದೂರು ಬಿಜೆಪಿಗೂ ಲಾಭ ಎಂಬುದು ಅವರ ಲೆಕ್ಕಾಚಾರವಾಗಿದೆ.

ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕೆಲ ಬಿಜೆಪಿ ಮುಖಂಡರ ರಾಜೀನಾಮೆಯಿಂದ ಬೈಂದೂರು ಕ್ಷೇತ್ರದ ಮೇಲೆ ಕಿಂಚಿತ್ ಪರಿಣಾಮ ಇಲ್ಲ. ಅವರು ಬೈಂದೂರು ಕ್ಷೇತ್ರದವರಲ್ಲ ಎಂಬುದು ಸುಕುಮಾರ ಶೆಟ್ಟರ ಅನಿಸಿಕೆಯಾಗಿದೆ.

ಇದನ್ನೂ ಓದಿ:
►►ಬೈಂದೂರಲ್ಲಿ ಕೊಡಲ್ಲ. ಕುಂದಾಪುರದಲ್ಲಿ ಬಿಡಲ್ಲ! ಜಯಪ್ರಕಾಶ ಹೆಗ್ಡೆ ನಡೆ ಯಾವ ಕಡೆ?:
http://bit.ly/2ErcHfu
►►ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ಟಿಕೆಟ್, ಅಸಮಾಧಾನಗೊಂಡ ಪದಾಧಿಕಾರಿಗಳ ರಾಜೀನಾಮೆ http://bit.ly/2qn7IYX
►►ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ- ಕುಂದಾಪುರಕ್ಕೆ ಹಾಲಾಡಿ ಶ್ರೀನಿವಾಸ ಶೆಟ್ಟಿ http://bit.ly/2GJZsbG
►►ಹಾಲಾಡಿ ಶ್ರೀನಿವಾಸ ಶೆಟ್ಟರ ವಿರುದ್ದ ಸಿಡಿಮಿಡಿಗೊಂಡ ಎ.ಜಿ ಕೊಡ್ಗಿ http://bit.ly/2GLvrZb
►►ಹಾಲಾಡಿ ಬಿಜೆಪಿ ಸೇರುವುದು ಜನದ್ರೋಹ: http://bit.ly/2h1lSrg
►►ಹಾಲಾಡಿ, ಹೆಗ್ಡೆ ಬೇಡ ಎಂಬ ಅಧಿಕಾರ ಯಾರಿಗೂ ಇಲ್ಲ: ಶೋಭಾ: http://bit.ly/2if1x2X
►►ಬಿಜೆಪಿಯಲ್ಲಿ ಸ್ಪೋಟಗೊಂಡ ಅಸಮಾಧಾನ: ಹಾಲಾಡಿಗೆ ಮಂಡಿಯೂರಿದ ಬಿಜೆಪಿ ಹೈಕಮಾಂಡ್: http://bit.ly/1QSpclG
►►ಏಕತಾ ಸಮಾವೇಶದಲ್ಲಿ ಕಾಣಿಸಿಕೊಂಡ ಹಾಲಾಡಿ. ಬಿಜೆಪಿಗೆ ಮರಳಲು ಗೆಟ್ಟಿಂಗ್ ರೆಡಿ: http://bit.ly/2gAysiA
►►ಹಾಲಾಡಿ ಬೆಂಬಲಿಗರು ಕೇಳಿದ್ದಕ್ಕೆ ಟಿಕೆಟ್: ಕೋಟ: http://bit.ly/20yuyVZ
►►ಪಕ್ಷಕ್ಕೆ 'ಹೊಸಬ' ಎಂಬ ಆಸ್ಕರ್ ಹೇಳಿಕೆಯಿಂದ ನೋವು: ಜಯಪ್ರಕಾಶ ಹೆಗ್ಡೆ: http://bit.ly/1YNc3y2
►►ಕುಂದಾಪುರದಲ್ಲಿ ಪರಿವರ್ತನಾ ಯಾತ್ರೆ: ಬಿಜೆಪಿ ಬಣಗಳ ನಡುವೆ ಮಾರಾಮಾರಿ: http://bit.ly/2AEusqZ
►►ಕೋಟಿ-ಚೆನ್ನಯ? ಮುದಿಯಾನೆ? ಕುಂದಾಪುರ ಬಿಜೆಪಿ ಕಛೇರಿಗೆ ಮೊದಲ ಬಾರಿ ಜೆ.ಪಿ ಹೆಗ್ಡೆ: http://bit.ly/2nKa1p4
►►ಕಛೇರಿ ಉದ್ಘಾಟನೆಯಲ್ಲೂ ಭಿನ್ನಮತ: ಕೇಸರಿ ಶಾಲು ಮುಚ್ಚಿಕೊಂಡ ಜೆಪಿ: http://bit.ly/2ohfBw4
►►ಕುಂದಾಪುರ ಬಿಜೆಪಿ: ಸಂಭ್ರಮಾಚರಣೆಯಲ್ಲೂ ಬಣ ರಾಜಕೀಯ: http://bit.ly/2mm5MMn

ಇಂದು ಹೆಚ್ಚು ಓದಿದ ಸುದ್ದಿಗಳು:
►►ಎ.ಜಿ ಕೊಡ್ಗಿಯವರ ಬಗ್ಗೆ ನನಗೆ ಗೌರವ ಇದೆ: ಹಾಲಾಡಿ ಶ್ರೀನಿವಾಸ ಶೆಟ್ಟಿ:
http://bit.ly/2IOy6BQ
►►ಕಾಮನ್‌ವೆಲ್ತ್ ಗೇಮ್ಸ್‌: ಪಿಸ್ತೂಲ್‌ನಲ್ಲಿ ಚಿನ್ನ ಗೆದ್ದ ಭಾರತದ ಅತ್ಯಂತ ಕಿರಿಯ ಸಾಧಕ: http://bit.ly/2GUWIIt
►►ಉನ್ನಾವ್ ಅತ್ಯಾಚಾರ ಪ್ರಕರಣ: ಉ.ಪ್ರ ಬಿಜೆಪಿ ಶಾಸಕ ಸಿಬಿಐ ವಶಕ್ಕೆ: http://bit.ly/2GRRbGK
►►ಪತ್ರಕರ್ತರ ಸೋಗಿನಲ್ಲಿ ನಿರಂತರ ಕಿರುಕುಳ, ಬ್ಲ್ಯಾಕ್‌ಮೇಲ್: ಮೂವರ ಬಂಧನ: http://bit.ly/2ISekFt
►►ಧೈರ್ಯವಿದ್ದರೆ ಮುಖಾಮುಖಿ ಚರ್ಚೆಗೆ ಬನ್ನಿ: ಅನಂತ ಹೆಗಡೆಗೆ ಪ್ರಕಾಶ್ ರೈ ಸವಾಲು: http://bit.ly/2v7LLlF
►►'ಗೋ ಬ್ಯಾಕ್ ಮೋದಿ': ಪ್ರತಿಭಟನಾ ನಿರತರಿಂದ ಮೋದಿಗೆ ಧಿಕ್ಕಾರದ ಸ್ವಾಗತ!: http://bit.ly/2GXr2SM
►►ಯುವತಿಯೊಂದಿಗೆ ಕಛೇರಿಯಲ್ಲಿ ಪಿಡಿಒ ಸೆಕ್ಸ್: ಸೂಕ್ತ ಕ್ರಮಕ್ಕೆ ಸಮತಾ ಸೈನಿಕ ದಳ ಆಗ್ರಹ: http://bit.ly/2qqICIN
►►ಮಹಿಳೆ ಸಂಶಯಾಸ್ಪದ ಸಾವು. ಗಂಡನ ಮೊಬೈಲ್ ಸ್ವಿಚ್ ಆಫ್: http://bit.ly/2qsoeGi

Related Tags: Sukumar Shetty, Haladi Shrinivas Shetty, Jayaprakash Hegde, Political Move, BJP, Kundapur, BJP Ticket, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುಕುಮಾರ ಶೆಟ್ಟಿ, ಜಯಪ್ರಕಾಶ್ ಹೆಗ್ಡೆ, ಕರಾವಳಿ ಸುದ್ದಿ, ಕರಾವಳಿ ಕರ್ನಾಟ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ