ಎ.ಜಿ ಕೊಡ್ಗಿಯವರ ಬಗ್ಗೆ ನನಗೆ ಗೌರವ ಇದೆ: ಹಾಲಾಡಿ ಶ್ರೀನಿವಾಸ ಶೆಟ್ಟಿ
ಸಾಮಾಜಿಕ ನ್ಯಾಯ, ಅಭಿವೃದ್ಧಿ ಕೆಲಸಗಳಿಂದ ಈ ಬಾರಿ ಹೆಚ್ಚು ಮತಗಳ ಅಂತರದಿಂದ ಗೆಲ್ಲುವುದು ನಿಶ್ಚಿತ ಎಂದು ಹಾಲಾಡಿ ವಿಶ್ವಾಸ.

ಕರಾವಳಿ ಕರ್ನಾಟಕ ವರದಿ

ಕುಂದಾಪುರ:
ರಾಜಕಾರಣದಲ್ಲಿ ಕೆಲವು ಸಂದರ್ಭಗಳಲ್ಲಿ ಅಂತರ ಏರ್ಪಡುವುದು ಆಕಸ್ಮಿಕ. ಎಲ್ಲ ಪಕ್ಷಗಳು, ವ್ಯವಸ್ಥೆಗಳಲ್ಲಿ ಈ ರೀತಿಯ ಅಂತರ ಇರುವುದು ಸಾಮಾನ್ಯ. ಕಾಲಾಂತರದಲ್ಲಿ ಅದೆಲ್ಲ ಸರಿಯಾಗುತ್ತದೆ ಎಂದು ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ತನ್ನ ಮತ್ತು ಎ.ಜಿ.ಕೊಡ್ಗಿಯವರ ಸಂಬಂಧದಲ್ಲಿ ಉಂಟಾದ ಬಿರುಕನ್ನು ವಿಶ್ಲೇಷಿಸಿದ್ದಾರೆ.

ಕುಂದಾಪುರ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ ಬಳಿಕ ಅಮಾಸೆಬೈಲಿನಲ್ಲಿರುವ ಬಿಜೆಪಿ ಹಿರಿಯ ಮುಖಂಡ ಎ.ಜಿ.ಕೊಡ್ಗಿಯವರನ್ನು ಭೇಟಿಯಾದ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಅವರ ಆಶೀರ್ವಾದ ಪಡೆದರು.

ಅವರೊಂದಿಗೆ ಉಪಹಾರ ಸೇವಿಸಿದರು. ಚುನಾವಣೆಗೆ ನಿಂತಿದ್ದೇನೆ ಎಂದಾಗ, ನಿಲ್ಲಿ, ಸಂತೋಷ ಎಂದು ಕೊಡ್ಗಿಯವರು ಆಶೀರ್ವಾದ ಮಾಡಿದರು. ಈ ಸೌಹಾರ್ದ ಭೇಟಿ ಸಂದರ್ಭ ಕೊಡ್ಗಿಯವರ ಮಕ್ಕಳು ಕೂಡ ಇದ್ದರು.

ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಂದ ನನಗೆ ಮಾನಸಿಕ ಹಿಂಸೆಯಾಗಿದೆ. ಅವರಿಗೆ ಟಿಕೆಟ್ ನೀಡಲು ನನ್ನ ಬೆಂಬಲವಿಲ್ಲ ಎಂದು ಬಿಜೆಪಿ ಹೈಕಮಾಂಡ್‌ಗೆ ಪತ್ರ ಬರೆದಿದ್ದೇನೆ ಎಂದು ಎ.ಜಿ.ಕೊಡ್ಗಿಯವರು ಇತ್ತೀಚೆಗಷ್ಟೇ ಹಾಲಾಡಿಯವರ ವಿರುದ್ಧ ತನ್ನ ಕೋಪ ಹೊರಹಾಕಿದ್ದರು.

ಸವಿ ಮಾತುಗಳಿಂದಲೇ ಜನಮನ ಮುಟ್ಟುವಲ್ಲಿ ಚತುರರಾದ ಹಾಲಾಡಿಯವರು ತಕ್ಷಣ ಎ.ಜಿ.ಕೊಡ್ಗಿಯವರ ಮನೆಗೆ ಧಾವಿಸಿದ್ದಾರೆ. ಹಿರಿಯರಾದ ಎ.ಜಿ.ಕೊಡ್ಗಿಯವರ ಬಗ್ಗೆ ನನಗೆ ಗೌರವ ಇದೆ. ಭೇಟಿ ಸಂದರ್ಭ ಅವರು ಅಸಮಾಧಾನ ಹೇಳಿಕೊಂಡಿಲ್ಲ ಎಂದಿದ್ದಾರೆ.


ಪಕ್ಷಕ್ಕೆ ರಾಜೀನಾಮೆ ನೀಡಿದವರ ಬಗ್ಗೆ ಜನರಿಗೆ ಗೊತ್ತಿದೆ
ಕುಂದಾಪುರ ಅಭ್ಯರ್ಥಿಯಾಗಿ ನನ್ನ ಆಯ್ಕೆ ವಿರೋಧಿಸಿ ಪಕ್ಷದ ಹುದ್ದೆಗೆ ರಾಜೀನಾಮೆ ನೀಡಿದವರಿಂದ ನನಗೆ ಏನು ಪರಿಣಾಮ ಬೀಳುವುದಿಲ್ಲ ಎಂದು ಹೇಳುವುದಿಲ್ಲ. ಆದರೆ ಅದು ಎಷ್ಟರ ಮಟ್ಟಿಗೆ ಎಂಬುದು ಜನರಿಗೆ ಗೊತ್ತಿದೆ ಎಂದು ಹಾಲಾಡಿ ಹೇಳಿದ್ದಾರೆ.

ನನ್ನ ಆಯ್ಕೆಯ ಬಗ್ಗೆ ಅಸಮಾಧಾನಗೊಂಡಿರುವವರನ್ನು ಪಕ್ಷದ ಪದಾಧಿಕಾರಿಗಳು ಸರಿಮಾಡುತ್ತಾರೆ. ಅದು ಪಕ್ಷದ ಪದಾಧಿಕಾರಿಗಳಿಗೆ ಸಂಬಂಧಿಸಿದ ಸಂಗತಿ. ನಾನು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೆ ಮುಂದುವರಿಯುತ್ತೇನೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಜಯಪ್ರಕಾಶ್ ಹೆಗ್ಡೆಯವರಿಗೆ ಟಿಕೆಟ್ ಕೇಳುವ ಹಕ್ಕಿದೆ
ಪ್ರಜಾಪ್ರಭುತವದಲ್ಲಿ ಜಯಪ್ರಕಾಶ್ ಹೆಗ್ಡೆಯವರು ಟಿಕೆಟ್ ಆಕಾಂಕ್ಷಿಯಾಗಿ ಟಿಕೆಟ್ ಕೇಳುವುದು ಸಹಜವೇ. ಆ ಹಕ್ಕು ಅವರಿಗೆ ಇದೆ. ಆದರೆ ಯಾರಿಗೆ ಟಿಕೆಟ್ ನೀಡಬೇಕು ಎಂದು ಪಕ್ಷ ನಿರ್ಧರಿಸಿದೆ ಎಂದರು.

ಸಾಮಾಜಿಕ ನ್ಯಾಯ, ಅಭಿವೃದ್ಧಿ ಕೆಲಸಗಳಿಂದ ಈ ಬಾರಿ ಹೆಚ್ಚು ಮತಗಳ ಅಂತರದಿಂದ ಗೆಲ್ಲುವುದು ನಿಶ್ಚಿತ ಎಂದು ಹಾಲಾಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:
►►ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ಟಿಕೆಟ್, ಅಸಮಾಧಾನಗೊಂಡ ಪದಾಧಿಕಾರಿಗಳ ರಾಜೀನಾಮೆ
http://bit.ly/2qn7IYX
►►ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ- ಕುಂದಾಪುರಕ್ಕೆ ಹಾಲಾಡಿ ಶ್ರೀನಿವಾಸ ಶೆಟ್ಟಿ http://bit.ly/2GJZsbG
►►ಹಾಲಾಡಿ ಶ್ರೀನಿವಾಸ ಶೆಟ್ಟರ ವಿರುದ್ದ ಸಿಡಿಮಿಡಿಗೊಂಡ ಎ.ಜಿ ಕೊಡ್ಗಿ http://bit.ly/2GLvrZb
►►ಬೈಂದೂರಲ್ಲಿ ಕೊಡಲ್ಲ. ಕುಂದಾಪುರದಲ್ಲಿ ಬಿಡಲ್ಲ! ಜಯಪ್ರಕಾಶ ಹೆಗ್ಡೆ ನಡೆ ಯಾವ ಕಡೆ?: http://bit.ly/2ErcHfu
►►ಹಾಲಾಡಿ ಬಿಜೆಪಿ ಸೇರುವುದು ಜನದ್ರೋಹ: http://bit.ly/2h1lSrg
►►ಹಾಲಾಡಿ, ಹೆಗ್ಡೆ ಬೇಡ ಎಂಬ ಅಧಿಕಾರ ಯಾರಿಗೂ ಇಲ್ಲ: ಶೋಭಾ: http://bit.ly/2if1x2X
►►ಬಿಜೆಪಿಯಲ್ಲಿ ಸ್ಪೋಟಗೊಂಡ ಅಸಮಾಧಾನ: ಹಾಲಾಡಿಗೆ ಮಂಡಿಯೂರಿದ ಬಿಜೆಪಿ ಹೈಕಮಾಂಡ್: http://bit.ly/1QSpclG
►►ಏಕತಾ ಸಮಾವೇಶದಲ್ಲಿ ಕಾಣಿಸಿಕೊಂಡ ಹಾಲಾಡಿ. ಬಿಜೆಪಿಗೆ ಮರಳಲು ಗೆಟ್ಟಿಂಗ್ ರೆಡಿ: http://bit.ly/2gAysiA
►►ಹಾಲಾಡಿ ಬೆಂಬಲಿಗರು ಕೇಳಿದ್ದಕ್ಕೆ ಟಿಕೆಟ್: ಕೋಟ: http://bit.ly/20yuyVZ
►►ಪಕ್ಷಕ್ಕೆ 'ಹೊಸಬ' ಎಂಬ ಆಸ್ಕರ್ ಹೇಳಿಕೆಯಿಂದ ನೋವು: ಜಯಪ್ರಕಾಶ ಹೆಗ್ಡೆ: http://bit.ly/1YNc3y2
►►ಕುಂದಾಪುರದಲ್ಲಿ ಪರಿವರ್ತನಾ ಯಾತ್ರೆ: ಬಿಜೆಪಿ ಬಣಗಳ ನಡುವೆ ಮಾರಾಮಾರಿ: http://bit.ly/2AEusqZ
►►ಕೋಟಿ-ಚೆನ್ನಯ? ಮುದಿಯಾನೆ? ಕುಂದಾಪುರ ಬಿಜೆಪಿ ಕಛೇರಿಗೆ ಮೊದಲ ಬಾರಿ ಜೆ.ಪಿ ಹೆಗ್ಡೆ: http://bit.ly/2nKa1p4
►►ಕಛೇರಿ ಉದ್ಘಾಟನೆಯಲ್ಲೂ ಭಿನ್ನಮತ: ಕೇಸರಿ ಶಾಲು ಮುಚ್ಚಿಕೊಂಡ ಜೆಪಿ: http://bit.ly/2ohfBw4
►►ಕುಂದಾಪುರ ಬಿಜೆಪಿ: ಸಂಭ್ರಮಾಚರಣೆಯಲ್ಲೂ ಬಣ ರಾಜಕೀಯ: http://bit.ly/2mm5MMn

ಇಂದು ಹೆಚ್ಚು ಓದಿದ ಸುದ್ದಿಗಳು:
►►ಕಾಮನ್‌ವೆಲ್ತ್ ಗೇಮ್ಸ್‌: ಪಿಸ್ತೂಲ್‌ನಲ್ಲಿ ಚಿನ್ನ ಗೆದ್ದ ಭಾರತದ ಅತ್ಯಂತ ಕಿರಿಯ ಸಾಧಕ:
http://bit.ly/2GUWIIt
►►ಉನ್ನಾವ್ ಅತ್ಯಾಚಾರ ಪ್ರಕರಣ: ಉ.ಪ್ರ ಬಿಜೆಪಿ ಶಾಸಕ ಸಿಬಿಐ ವಶಕ್ಕೆ: http://bit.ly/2GRRbGK
►►ಪತ್ರಕರ್ತರ ಸೋಗಿನಲ್ಲಿ ನಿರಂತರ ಕಿರುಕುಳ, ಬ್ಲ್ಯಾಕ್‌ಮೇಲ್: ಮೂವರ ಬಂಧನ: http://bit.ly/2ISekFt
►►ಧೈರ್ಯವಿದ್ದರೆ ಮುಖಾಮುಖಿ ಚರ್ಚೆಗೆ ಬನ್ನಿ: ಅನಂತ ಹೆಗಡೆಗೆ ಪ್ರಕಾಶ್ ರೈ ಸವಾಲು: http://bit.ly/2v7LLlF
►►'ಗೋ ಬ್ಯಾಕ್ ಮೋದಿ': ಪ್ರತಿಭಟನಾ ನಿರತರಿಂದ ಮೋದಿಗೆ ಧಿಕ್ಕಾರದ ಸ್ವಾಗತ!: http://bit.ly/2GXr2SM
►►ಯುವತಿಯೊಂದಿಗೆ ಕಛೇರಿಯಲ್ಲಿ ಪಿಡಿಒ ಸೆಕ್ಸ್: ಸೂಕ್ತ ಕ್ರಮಕ್ಕೆ ಸಮತಾ ಸೈನಿಕ ದಳ ಆಗ್ರಹ: http://bit.ly/2qqICIN
►►ಮಹಿಳೆ ಸಂಶಯಾಸ್ಪದ ಸಾವು. ಗಂಡನ ಮೊಬೈಲ್ ಸ್ವಿಚ್ ಆಫ್: http://bit.ly/2qsoeGi

Related Tags: Haladi Shrinivas Shetty, A.G.Kodgi, Jayaprakash Hegde, Political Move, BJP, Kundapur, BJP Ticket, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಹಾಲಾಡಿ ಶ್ರೀನಿವಾಸ ಶೆಟ್ಟಿ, ಎ.ಜಿ.ಕೊಡ್ಗಿ, ಜಯಪ್ರಕಾಶ್ ಹೆಗ್ಡೆ, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ