ಕಾಮನ್‌ವೆಲ್ತ್ ಗೇಮ್ಸ್‌: ಪಿಸ್ತೂಲ್‌ನಲ್ಲಿ ಚಿನ್ನ ಗೆದ್ದ ಭಾರತದ ಅತ್ಯಂತ ಕಿರಿಯ ಸಾಧಕ

ಕರಾವಳಿ ಕರ್ನಾಟಕ ವರದಿ

ಗೋಲ್ಡ್ ಕೋಸ್ಟ್:
ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ಸಾಗುತ್ತಿರುವ ಪ್ರತಿಷ್ಠಿತ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತೀಯರ ಚಿನ್ನದ ಪದಕಗಳ ಬೇಟೆ ಮುಂದುವರೆದಿದೆ.

ಭಾರತ 16ನೇ ಚಿನ್ನದ ಪದಕ ಗೆದ್ದಿದ್ದು, 15 ವರ್ಷದ ಅನೀಷ್ ಭನ್ವಾಲಾ ಅವರು, 25 ಎಮ್ ರ‍್ಯಾಪಿಡ್ ಫೈರ್ ಪಿಸ್ತೂಲ್‌ನಲ್ಲಿ ಚಿನ್ನವನ್ನು ಗೆದ್ದುಕೊಂಡಿದ್ದಾರೆ.

ಅನೀಷ್ ಭನ್ವಾಲಾ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಪದಕ ಗೆದ್ದ ಅತಿ ಕಿರಿಯ ಭಾರತೀಯನೆಂಬ ಕೀರ್ತಿಗೆ ಪಾತ್ರವಾಗಿದ್ದಾರೆ.

ಇದರಂತೆ ಮಹಿಳೆಯರ 50 ಮೀಟರ್ ರೈಫಲ್ ಪ್ರೋನ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದ ತೇಜಸ್ವಿನಿಯವರು 50 ಮೀಟರ್ ರೈಫಲ್‌ನಲ್ಲಿ ಚಿನ್ನವನ್ನು ಗೆದ್ದಿದ್ದಾರೆ. ಭಾರತದವರೇ ಆಗಿರುವ ಅಂಜುಮ್ ಮೌದ್ಗಿಲ್ ಅವರು ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.

ಪದಕ ಪಟ್ಟಿಯಲ್ಲಿ ಭಾರತದ ಒಟ್ಟು 16 ಚಿನ್ನದ ಪದಕ, 8 ಬೆಳ್ಳಿ, 10 ಕಂಚಿನ ಪದಕಗಳನ್ನು ಪಡೆದುಕೊಳ್ಳುವ ಮೂಲಕ 3ನೇ ಸ್ಥಾವನ್ನು ಪಡೆದುಕೊಂಡಿದೆ. ಈ ಮೂಲಕ ನಾಲ್ಕು ವರ್ಷಗಳ ಹಿಂದೆ ನಡೆದ ಗ್ಗಾಸ್ಗೋ ಕಾಮನ್‌ವೆಲ್ತ್ ಗೇಮ್ಸ್ ಸಾಧನೆಯನ್ನು ಮೀರಿಸಿದೆ.

ಇಂದು ಹೆಚ್ಚು ಓದಿದ ಸುದ್ದಿಗಳು:
►►ಉನ್ನಾವ್ ಅತ್ಯಾಚಾರ ಪ್ರಕರಣ: ಉ.ಪ್ರ ಬಿಜೆಪಿ ಶಾಸಕ ಸಿಬಿಐ ವಶಕ್ಕೆ:
http://bit.ly/2GRRbGK
►►ಪತ್ರಕರ್ತರ ಸೋಗಿನಲ್ಲಿ ನಿರಂತರ ಕಿರುಕುಳ, ಬ್ಲ್ಯಾಕ್‌ಮೇಲ್: ಮೂವರ ಬಂಧನ: http://bit.ly/2ISekFt
►►ಧೈರ್ಯವಿದ್ದರೆ ಮುಖಾಮುಖಿ ಚರ್ಚೆಗೆ ಬನ್ನಿ: ಅನಂತ ಹೆಗಡೆಗೆ ಪ್ರಕಾಶ್ ರೈ ಸವಾಲು: http://bit.ly/2v7LLlF
►►'ಗೋ ಬ್ಯಾಕ್ ಮೋದಿ': ಪ್ರತಿಭಟನಾ ನಿರತರಿಂದ ಮೋದಿಗೆ ಧಿಕ್ಕಾರದ ಸ್ವಾಗತ!: http://bit.ly/2GXr2SM
►►ಯುವತಿಯೊಂದಿಗೆ ಕಛೇರಿಯಲ್ಲಿ ಪಿಡಿಒ ಸೆಕ್ಸ್: ಸೂಕ್ತ ಕ್ರಮಕ್ಕೆ ಸಮತಾ ಸೈನಿಕ ದಳ ಆಗ್ರಹ: http://bit.ly/2qqICIN
►►ಮಹಿಳೆ ಸಂಶಯಾಸ್ಪದ ಸಾವು. ಗಂಡನ ಮೊಬೈಲ್ ಸ್ವಿಚ್ ಆಫ್: http://bit.ly/2qsoeGi

Related Tags: CWG 2018, Anish Bhanwala, Rapid Fire Pistol, Creates History, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ