ಪತ್ರಕರ್ತರ ಸೋಗಿನಲ್ಲಿ ನಿರಂತರ ಕಿರುಕುಳ, ಬ್ಲ್ಯಾಕ್‌ಮೇಲ್: ಮೂವರ ಬಂಧನ

ಶ್ರೀಕಾಂತ ಹೆಮ್ಮಾಡಿ/ಕರಾವಳಿ ಕರ್ನಾಟಕ ವರದಿ

ಕುಂದಾಪುರ:
ಕೋಟೇಶ್ವರದ ಉದ್ಯಮಿಯೋರ್ವರಿಗೆ ಹಣಕ್ಕಾಗಿ ಬೆದರಿಸಿ ಬ್ಲ್ಯಾಕ್‌ಮೇಲ್ ಮಾಡಿದ ಆರೋಪದಲ್ಲಿ ನಾಲ್ವರು ನಕಲಿ ಪತ್ರಕರ್ತರ ವಿರುದ್ದ ಪ್ರಕರಣ ದಾಖಲಾಗಿದ್ದು, ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕುಂದಾಪುರದ ಲೋಕೇಶ್, ಧರ್ಮೇಂದ್ರ, ಮಂಜುನಾಥ್ ಎಂದು ಗುರುತಿಸಲಾಗಿದೆ.

ಕೋಟೇಶ್ವರದ ಬೀಚ್ ರಸ್ತೆಯಲ್ಲಿನ ಎಫ್ಎಮ್ ವೇಸ್ಟ್ ಪ್ಲಾಸ್ಟಿಕ್ ಕಟ್ಟಿಂಗ್ ಮತ್ತು ಹೈಡ್ರೋಲಿಕ್ ಪ್ರೆಸ್ಸಿಂಗ್ ಯುನಿಟ್ ಮಾಲಕ ಫಾರೂಕ್ ಏಪ್ರಿಲ್ 9 ಫ್ಯಾಕ್ಟರಿಯಲ್ಲಿರುವಾಗ ಕಾರಿನಲ್ಲಿ ಬಂದ ಲೋಕೇಶ್, ಧರ್ಮೇಂದ್ರ, ಮಂಜುನಾಥ, ವಿಕ್ಕಿ ಯಾನೆ ವಿಕ್ರಮ ಎಂಬವರು ನಾವು ಮಾಧ್ಯಮದವರು ನೀವು ಗ್ಲುಕೋಸ್ ಬಾಟಲಿಗಳನ್ನು ತೆಗೆದುಕೊಳ್ಳಬಾರದು ಎಂದು ಬೆದರಿಸಿದ್ದರು.

ಅಲ್ಲದೇ ಒಂದು ಲಕ್ಷ ಕೊಡದಿದ್ದರೆ ನಿಮ್ಮ ವಿರುದ್ದ ಪತ್ರಿಕೆಯಲ್ಲಿ ಬರೆಯುತ್ತೇವೆ ಎಂದು ಬ್ಲ್ಯಾಕ್ಮೇಲ್ ಮಾಡಿದ್ದರು. ಈ ವೇಳೆ ಫಾರೂಕ್ ಅವರಿಂದ 5,000 ಹಣವನ್ನು ತೆಗೆದುಕೊಂಡು ಹೋಗಿದ್ದರು ಎಂದು ಆರೋಪಿಸಲಾಗಿದೆ.

ಏಪ್ರಿಲ್ 12 ರಂದು ಮತ್ತೆ ಪುನಃ ಫ್ಯಾಕ್ಟರಿಗೆ ಬಂದ ಲೋಕೇಶ, ಧರ್ಮೇಂದ್ರ, ಮಂಜುನಾಥ ಅವರು ಫಾರೂಕ್ ಅವರಲ್ಲಿ 5,000 ಹಣವನ್ನು ಕಸಿದುಕೊಂಡು ಹೋಗಿದ್ದಲ್ಲದೆ ಫ್ಯಾಕ್ಟರಿಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಪತ್ರಿಕೆಯಲ್ಲಿ ಹಾಕಿ ಮಾನ ಹರಾಜು ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಫಾರೂಕ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಕುರಿತು ದಿಟ್ಟ ನಿರ್ಧಾರ ಕೈಗೊಂಡ ಫಾರುಕ್ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಲ್ಲದೆ, ಆರೋಪಿಗಳು ಫ್ಯಾಕ್ಟರಿಗೆ ಬಂದು ಹೋದ ಸಿಸಿಟಿವಿಯ ದೃಶ್ಯಾವಳಿಗಳನ್ನು ಪೊಲೀಸರಿಗೆ ನೀಡಿದ್ದಾರೆ.

ಈ ಹಿಂದೆಯೂ ಹಣದ ಬೇಡಿಕೆ ಇಟ್ಟು ಬಾರ್ ಒಂದರಲ್ಲಿ ವಿಡಿಯೊ ಕ್ಯಾಮೆರಾ ಹಿಡಿದು ಬಾರ್ ಮಾಲಿಕರೋರ್ವರಿಗೆ ಬೆದರಿಸಿದ ವಿಡಿಯೊ ವಾಟ್ಸಾಪ್ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದವು.

ಇಂದು ಹೆಚ್ಚು ಓದಿದ ಸುದ್ದಿಗಳು:
►►ಧೈರ್ಯವಿದ್ದರೆ ಮುಖಾಮುಖಿ ಚರ್ಚೆಗೆ ಬನ್ನಿ: ಅನಂತ ಹೆಗಡೆಗೆ ಪ್ರಕಾಶ್ ರೈ ಸವಾಲು:
http://bit.ly/2v7LLlF
►►'ಗೋ ಬ್ಯಾಕ್ ಮೋದಿ': ಪ್ರತಿಭಟನಾ ನಿರತರಿಂದ ಮೋದಿಗೆ ಧಿಕ್ಕಾರದ ಸ್ವಾಗತ!: http://bit.ly/2GXr2SM
►►ಯುವತಿಯೊಂದಿಗೆ ಕಛೇರಿಯಲ್ಲಿ ಪಿಡಿಒ ಸೆಕ್ಸ್: ಸೂಕ್ತ ಕ್ರಮಕ್ಕೆ ಸಮತಾ ಸೈನಿಕ ದಳ ಆಗ್ರಹ: http://bit.ly/2qqICIN
►►ಮಹಿಳೆ ಸಂಶಯಾಸ್ಪದ ಸಾವು. ಗಂಡನ ಮೊಬೈಲ್ ಸ್ವಿಚ್ ಆಫ್: http://bit.ly/2qsoeGi

Related Tags: Blackmail, Journalists, Kundapur, Dharmendra, Lokesh, Manjunath, Vikram, Kundapur Police, Farook Kot
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ