ನಮ್ಮ ಸಂಸ್ಕೃತಿಯ, ಗೌರವದ ಕೇಂದ್ರಗಳಿಗೆ ಅಮಿತ್ ಶಾ ಭೇಟಿ ನೀಡಬೇಡಪ್ಪ: ರಾಘವೇಂದ್ರ ಕುಷ್ಟಗಿ ಮನವಿ

ಕರಾವಳಿ ಕರ್ನಾಟಕ ವರದಿ

ಹುಬ್ಬಳ್ಳಿ:
  'ನಮ್ಮ ಸಂಸ್ಕೃತಿಯ, ಗೌರವದ ಕೇಂದ್ರಗಳಿಗೆ ಅಮಿತ್ ಶಾ ಭೇಟಿ ನೀಡಬೇಡಪ್ಪ' ಎಂದು ತಮ್ಮ ಮಾತಿನ ಧಾಟಿಯಲ್ಲೇ ಜನಾಂದೋಲನ ಮಹಾಮೈತ್ರಿಯ ಸಂಸ್ಥಾಪಕರಲ್ಲೊಬ್ಬರಾದ ರಾಘವೇಂದ್ರ ಕುಷ್ಟಗಿ ಮನವಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಕುರುಡು ಕಾಂಚಾಣ ಕುಣಿಯುತಲಿತ್ತು' ಕವನ ಬರೆದ ವರಕವಿ ದ.ರಾ. ಬೇಂದ್ರೆಯವರ ಮನೆಗೆ ಬೇಕಾಬಿಟ್ಟಿಯಾಗಿ ಹಣ ಚೆಲ್ಲಿ ರಾಜಕೀಯ ಮಾಡುತ್ತಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭೇಟಿ ನೀಡುತ್ತಿರುವುದು ದೊಡ್ಡ ದುರಂತ ಎಂದು ರಾಘವೇಂದ್ರ ಕುಷ್ಟಗಿ ಅಭಿಪ್ರಾಯಪಟ್ಟಿದ್ದಾರೆ.

ಜಾತಿ ಧರ್ಮಗಳ ನಡುವೆ ವಿಷ ಬೀಜ ಬಿತ್ತುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸೌಹಾರ್ದದ ಸಂಕೇತವಾದ ಸಿದ್ಧಾರೂಢ ಮಠಕ್ಕೆ ಭೇಟಿ ನೀಡುತ್ತಿರುವುದು ವಿಪರ್ಯಾಸ ಎಂದು ಅವರು ಹೇಳಿದರು.

ಜಾತ್ಯತೀತ ಜನತಾದಳ, ಕಾಂಗ್ರೆಸ್, ಬಿಜೆಪಿ (ಜೆಸಿಬಿ)ಯಂತಹ ಪಕ್ಷಗಳು ಮನೆಯೊಂದು ಮೂರು ಬಾಗಿಲು ಇದ್ದಂತೆ. ಈ ಮೂರೂ ಪಕ್ಷಗಳು ಕಾರ್ಪೋರೆಟ್ ಕಂಪನಿಗಳ ಪಾದಸೇವೆ ಮಾಡುತ್ತವೆ ಎಂದು ಅವರು ಟೀಕಿಸಿದ್ದಾರೆ.

Related Tags: Janandolana Maha Maithri, Karnataka Elections, Amit SHah, Visit to Poet''s House, Raghavendra Kushtagi
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ