ಹಂಡಿಬಾಗ್ ಪತ್ನಿ ಮೈ ಮಾರಿಕೊಂಡು ಬದುಕಬೇಕಿತ್ತು: ಕುಮಾರ ಸ್ವಾಮಿ ಕೀಳು ಮಾತು!

ಕರಾವಳಿ ಕರ್ನಾಟಕ ವರದಿ

ಅಥಣಿ:
ಡಿವೈಎಸ್ಪಿಯಾಗಿದ್ದ ಕಲ್ಲಪ್ಪ ಹಂಡಿಬಾಗ್‌ ಆತ್ಮಹತ್ಯೆ ಮಾಡಿಕೊಂಡಾಗ ದನಿ ಎತ್ತಿದ ನಾನು ಸರ್ಕಾರದ ಮೇಲೆ ಒತ್ತಡ ಹೇರಿ ಅವರ ಕುಟುಂಬಕ್ಕೆ ಸೌಲಭ್ಯ ಕೊಡಿಸಿದ್ದೆ. ಇಲ್ಲವಾಗಿದ್ದರೆ ಹಂಡಿಬಾಗ್‌ ಪತ್ನಿ ಕೂಲಿ ಮಾಡಿ ಅಥವಾ ಮೈ ಮಾರಿಕೊಂಡು ಜೀವನ ಸಾಗಿಸಬೇಕಾಗುತ್ತಿತ್ತು ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಕುಮಾರ ಸ್ವಾಮಿಯ ಹೇಳಿಕೆ ಈಗ ಭಾರಿ ಟೀಕೆಗೆ ಗ್ರಾಸವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಕುಮಾರ ಸ್ವಾಮಿಯ ಈ ಹೇಳಿಕೆ ವಿರುದ್ಧ ಭಾರಿ ಆಕ್ರೋಶ ಕಂಡುಬಂದಿದೆ.

ಇಲ್ಲಿ ಸೋಮವಾರ ನಡೆದ ಕುಮಾರಪರ್ವ ಸಮಾವೇಶದಲ್ಲಿ ಮಾತನಾಡಿದ ಅವರು, ‘ಕಲ್ಲಪ್ಪ ಮನೆಯ ಪರಿಸ್ಥಿತಿ ತುಂಬಾ ಕೆಟ್ಟದಾಗಿತ್ತು. ಬಡ ಕುಟುಂಬವಾಗಿತ್ತು. ಆಶ್ರಯ ಮನೆಯಲ್ಲಿ ವಾಸಿಸುತ್ತಿದ್ದರು. ಆ ಕುಟುಂಬದವರಿಗೆ ನಾನು ನೆರವಾದೆ. ಸರ್ಕಾರಿ ಕೆಲಸ ಕಂಡುಕೊಳ್ಳುವುದಕ್ಕೆ ನೆರವಾದೆ’ ಎಂದು ಹೇಳಿದರು.

‘ನಾನು ಹೋಗಿ ಆ ಕುಟುಂಬದ ಪರಿಸ್ಥಿತಿ ನೋಡಿದ್ದೆ. ವಿಧಾನಸೌಧದಲ್ಲಿ ಕುಟುಂಬದ ಪರವಾಗಿ ನಾನು ಚರ್ಚಿಸದೆ ಇದ್ದಿದ್ದರೆ, 20 ವರ್ಷದ ಹೆಣ್ಣು ಮಗಳು ಭಿಕ್ಷೆ ಬೇಡಕಾಗುತ್ತಿತ್ತು ಅಥವಾ ಕೂಲಿ ಕೆಲಸ ಮಾಡಬೇಕಿತ್ತು ಇಲ್ಲವೇ, ಸಮಾಜದ ಕೆಟ್ಟ ದೃಷ್ಟಿ ಬಿದ್ದು ಮೈ ಮಾರಿಕೊಳ್ಳಬೇಕಾಗುತ್ತಿತ್ತು.

ಅಂಥ ಹೆಣ್ಣು ಮಗಳಿಗೆ ಸರ್ಕಾರ ಹೊಸ ಜೀವನ ಕೊಡಬೇಕು ಎಂದು ಹೋರಾಟ ಮಾಡಿದ್ದೆ. ಆಕೆ ಈಗ ಬೈಲಹೊಂಗಲ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಉಪನೋಂದಣಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಒತ್ತಡ ಹಾಕಿ ಆ ಕುಟುಂಬವನ್ನು ಉಳಿಸಿದ ನನ್ನ ನಡವಳಿಕೆ ಬಗ್ಗೆ ಒಂದು ಉದಾಹರಣೆ ಕೊಡುತ್ತಿದ್ದೇನೆ’ ಎಂದು ತಿಳಿಸಿದರು.

‌‘ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡದಿರುವುದು, ಅಧಿಕಾರ ದುರ್ಬಳಕೆ, ದಕ್ಷ ಅಧಿಕಾರಿಗಳ ಆತ್ಮಹತ್ಯೆ ಇವಿಷ್ಟೇ ಈ ಸರ್ಕಾರದ ಸಾಧನೆ’ ಎಂದು ರಾಜ್ಯ ಸರ್ಕಾರವನ್ನು ಟೀಕಿಸಿದರು.

ಇಂದು ಓದಿದ ಹೆಚ್ಚು ಸುದ್ದಿಗಳು:
►►ಚುನಾವಣಾಧಿಕಾರಿ ಎ. ಸಿ ಮೇಲೆ ಹಲ್ಲೆ ಯತ್ನ. ಹೊಟೇಲ್ ಮಾಲಿಕನ ಬಂಧನ:
http://bit.ly/2qjz6GE
►►ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ: ಸಿಬಿಐ ತನಿಖೆಗೆ ಹೈಕೋರ್ಟ್ ಅಸಮಾಧಾನ: http://bit.ly/2EwfcNy
►►ಸಂಸದೆ ಶೋಭಾ ಕರಂದ್ಲಾಜೆಗೆ ಟಿಕೆಟ್ ಇಲ್ಲ: ಯಡಿಯೂರಪ್ಪ: http://bit.ly/2H7T5Ta
►►ಬೆಳಿಗ್ಗೆ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ. ಸಂಜೆ ಪುನಃ ಕಾಂಗ್ರೆಸಿಗೆ: ಇದು ಫಾಸ್ಟ್ ಪಕ್ಷಾಂತರ!: http://bit.ly/2qg3rql
►►ಇನ್ನೋವಾ-ಓಮ್ನಿ ನಡುವೆ ಭೀಕರ ಅಪಘಾತ: ತಾಯಿ-ಮಗ ದಾರುಣ ಸಾವು: http://bit.ly/2qhARE4
►►ಕಾರು ಢಿಕ್ಕಿಯಾಗಿ ಸಾವು-ಬದುಕಿನ ಹೋರಾಟ ನಡೆಸಿದ ವಿದ್ಯಾರ್ಥಿನಿ ಮೃತ್ಯು: http://bit.ly/2EvIDiY

Related Tags: Kumar Swamy H D, Ex CM, Handibag Suicide, DYSP, Wife, Derogatory Comment, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ