ರಾಯಲ್ ಚಾಲೆಂಜರ್ಸ್ ವಿರುದ್ದ ಕೊಲ್ಕತ್ತ ನೈಟ್​ ರೈಡರ್ಸ್‌ಗೆ ಜಯ

ಕರಾವಳಿ ಕರ್ನಾಟಕ ವರದಿ

ಕೋಲ್ಕತ್ತಾ:
ಐಪಿಎಲ್ 11ನೇ ಆವೃತ್ತಿಯ ಮೂರನೇ ಪಂದ್ಯದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ವಿರುದ್ದ ಕೊಲ್ಕತ್ತ ನೈಟ್​ ರೈಡರ್ಸ್ 4 ವಿಕೆಟ್‌ಗಳ ಅಂತರದ ಜಯ ದಾಖಲಿಸಿದೆ.

ಮೊದಲು ಬ್ಯಾಟ್ ಮಾಡಿದ್ದ ಆರ್​ಸಿಬಿ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 176 ರನ್​ ಕಲೆ ಹಾಕಿತ್ತು. ಆರ್‌ಸಿಬಿ ಪರವಾಗಿ ಬ್ರೆಂಡನ್​ ಮೆಕಲಮ್​(43), ವಿರಾಟ್​ ಕೊಹ್ಲಿ(31), ಎಬಿ ಡಿವಿಲಿಯರ್ಸ್​(44) ಹಾಗೂ ಮಂದೀಪ್​ ಸಿಂಗ್​ (37) ಉತ್ತಮ ರನ್ ಪೇರಿಸಿದ್ದರು.

ಬೆಂಗಳೂರು ತಂಡ ನೀಡಿದ್ದ 177 ರನ್ ಗಳ ಗುರಿ ಬೆನ್ನತ್ತಿದ ಕೋಲ್ಕತ್ತಾ 18.5 ಓವರ್​ಗಳಲ್ಲಿ 6 ವಿಕೆಟ್​ ಕಳೆದುಕೊಂಡು ಗುರಿ ತಲುಪಿತು. ಸುನೀಲ್​ ನರೇನ್​ (50), ನಿತೀಶ್​ ರಾಣ(34) ಹಾಗೂ ದಿನೇಶ್​ ಕಾರ್ತಿಕ್ ಔಟಾಗದೆ​(35) ರನ್ ಬಾರಿಸಿದರು.

ಆರ್​ಸಿಬಿ ಬೌಲರ್ ಕ್ರಿಸ್​ ವೋಕ್ಸ್​ 3 ವಿಕೆಟ್ ಪಡೆದು ಮಿಂಚಿದರೆ ಉಮೇಶ್​ ಯಾದವ್​ 2 ವಿಕೆಟ್​ ಉರುಳಿಸಲು ಸಮರ್ಥರಾದರು. ವಾಷಿಂಗ್ಟ್​ನ್​ ಸುಂದರ್​ 1 ವಿಕೆಟ್​ ಪಡೆದುಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೋರ್
ರಾಯಲ್ ಚಾಲೆಂಜರ್ಸ್‌ ಬೆಂಗಳೂರು: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 176 (ಬ್ರೆಂಡನ್ ಮೆಕ್ಲಮ್ 43, ವಿರಾಟ್ ಕೊಹ್ಲಿ 31, ಎಬಿ ಡಿವಿಲಿಯರ್ಸ್ 44, ಮನದೀಪ್ ಸಿಂಗ್ 37, ಆರ್. ವಿನಯಕುಮಾರ್ 30ಕ್ಕೆ2, ನಿತೀಶ್ ರಾಣಾ 11ಕ್ಕೆ2).

ಕೆಕೆಆರ್‌: 18.5 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 177 (ಸುನಿಲ್‌ ನಾರಾಯಣ್‌ 50, ನಿತೀಶ್ ರಾಣ 34, ದಿನೇಶ್ ಕಾರ್ತಿಕ್ ಔಟಾಗದೆ 35)

Related Tags: IPL 2018, KKR vs RCB, Royal Challengers Bangalore, KKR Win, Cricket News, Sports News, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ