ಕಾಮನ್‌ವೆಲ್ತ್ ಗೇಮ್ಸ್: ವೇಟ್‌ಲಿಫ್ಟಿಂಗ್‌ನಲ್ಲಿ ಸಂಜಿತಾ ಚಾನುಗೆ ಚಿನ್ನ

ಕರಾವಳಿ ಕರ್ನಾಟಕ ವರದಿ

ಗೋಲ್ಡ್ ಕೋಸ್ಟ್:
ಕಾಮನ್‌ವೇಲ್ತ್‌ ಗೇಮ್ಸ್‌ನಲ್ಲಿ ಭಾರತದ ಚಿನ್ನದ ಬೇಟೆ ಮುಂದುವರಿದಿದ್ದು, ಸಂಜಿತಾ ಚಾನು 53 ಕೆ.ಜಿ ಮಹಿಳಾ ವೇಟ್‌ಲಿಫ್ಟಿಂಗ್‌ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ.

ಸಂಜಿತಾ ಚಾನು ಒಟ್ಟು 192 ಕೆಜಿ ತೂಕ ಎತ್ತುವ ಮೂಲಕ ಅಗ್ರ ಸ್ಥಾನ ಗಳಿಸಿದ್ದಾರೆ. 182 ಕೆಜಿ ತೂಕ ಎತ್ತಿದ ಪಪುವಾ ನ್ಯೂಗಿನಿಯಾದ ಲೋಡಿಕಾ ಅವರು ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕ ತನ್ನದಾಗಿಸಿಕೊಂಡರೆ, ನ್ಯೂಜಿಲೆಂಡ್‌ನ ರಾಚೆಲ್ ಲೆಬ್ಲಾಂಕ್ ಬಾಝಿನೆಟ್ ಅವರು ಒಟ್ಟು 181 ಕೆಜಿ ತೂಕ ಎತ್ತುವ ಮೂಲಕ ಮೂರನೇ ಸ್ಥಾನ ಪಡೆದು ಕಂಚಿನ ಪದಕ ಗಳಿಸಿದ್ದಾರೆ.

ಸಂಜಿತಾ ಚಾನು 2014ರಲ್ಲಿ ನಡೆದ ಗ್ಲಾಸ್ಗೋ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲೂ 48 ಕೆ. ಜಿ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಭಾಜನರಾಗಿದ್ದರು.

ಭಾರತಕ್ಕೆ ಇದು ಎರಡನೇ ಚಿನ್ನದ ಪದಕವಾಗಿದ್ದು, ನಿನ್ನೆ ಇದೇ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ಮೀರಾಬಾಯಿ ಚಾನು ಅವರು ಚಿನ್ನದ ಪದಕ ಗಳಿಸಿದ್ದರು.

ಇನ್ನು ಪುರುಷರ ವೇಟ್‌ಲಿಫ್ಟಿಂಗ್‌ನ 56 ಕೆ.ಜಿ ವಿಭಾಗದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಕುಂದಾಪುರದ ಗುರುರಾಜ್ ಪೂಜಾರಿ ಬೆಳ್ಳಿ ಪದಕ ಜಯಿಸಿದ್ದರು.

ಇಂದು ಹೆಚ್ಚು ಓದಿದ ಸುದ್ದಿಗಳು:
►►ಸ್ಪರ್ಧಿಸುತ್ತೀರೋ? ಭಾನುವಾರ ಸಂಜೆಯೊಳಗೆ ನಿರ್ಧರಿಸಿ: ಅಂಬರೀಶ್‍ಗೆ ಕಾಂಗ್ರೆಸ್ ಖಡಕ್ ಸೂಚನೆ:
http://bit.ly/2qaDrvv
►►ಬೆಳ್ಳಿ ಗೆದ್ದ ಗುರುರಾಜ್‍ಗೆ 25 ಲಕ್ಷ, ಸರ್ಕಾರಿ ನೌಕರಿ: ಪ್ರಮೋದ್ ಮಧ್ವರಾಜ್: http://bit.ly/2H3I0lM
►►ಸುಳ್ಳು ದಾಖಲೆ ನೀಡಿ ಜಾಮೀನು: ಪತ್ರಕರ್ತ ರವಿ ಬೆಳಗೆರೆಗೆ ಹೈಕೋರ್ಟ್ ನೋಟಿಸ್‌: http://bit.ly/2GCC3gj
►►ದನಗಳ ಅಕ್ರಮ ಸಾಗಾಟ: ಮೂವರ ಬಂಧನ: http://bit.ly/2q5XFHw
►►ಮಂಗಳೂರು: ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿ ಸಾವು: http://bit.ly/2GzxHGT
►►ಕೃಷ್ಣಮೃಗ ಬೇಟೆ ಪ್ರಕರಣ: ಸಲ್ಮಾನ್ ಖಾನ್ ದೋಷಿ ಎಂದು ಕೋರ್ಟ್ ತೀರ್ಪು: http://bit.ly/2GXuTCQ
►►‘ರಾವ್ ಬೈಲ್’ ಖ್ಯಾತಿಯ ವ್ಯಂಗ್ಯಚಿತ್ರಕಾರ ಬೈಲಂಗಡಿ ಪ್ರಭಾಕರ ರಾವ್ ಇನ್ನಿಲ್ಲ: http://bit.ly/2uMOqRH
►►ಶಿವಮೊಗ್ಗದಲ್ಲಿ ಅಪಘಾತ: ಕುಂದಾಪುರದ ವ್ಯಕ್ತಿ ದಾರುಣ ಸಾವು: http://bit.ly/2Ix53mn

Related Tags: Commonwealth Games 2018, Sanjita Chanu, Weightlifting, Gold, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ