ಕಾಮನ್‌ವೆಲ್ತ್ ಗೇಮ್ಸ್: ಬೆಳ್ಳಿ ಗೆದ್ದು ಭಾರತದ ಪದಕ ಪಟ್ಟಿ ತೆರೆದ ಕುಂದಾಪುರದ ಗುರುರಾಜ್

ಕರಾವಳಿ ಕರ್ನಾಟಕ ವರದಿ

ಗೋಲ್ಡ್ ಕೋಸ್ಟ್:
21ನೆಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕರ್ನಾಟಕದ ಕುಂದಾಪುರದ ಗುರುರಾಜ್ ಪೂಜಾರಿ ವೆಯ್ಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದು ಭಾರತದ ಪದಕಗಳ ಖಾತೆ ತೆರೆದಿದ್ದಾರೆ.

56 ಕೆಜಿ ವಿಭಾಗದಲ್ಲಿ 25 ವರ್ಷದ ಗುರುರಾಜ್ ಪೂಜಾರಿ ಈ ಸಾಧನೆ ಮಾಡಿ ಭಾರತದ ಪದಕಗಳ ಪಟ್ಟಿಗೆ ಮೊದಲ ಪದಕವನ್ನು ಕಾಣಿಕೆ ನೀಡಿದ್ದಾರೆ.

"ಭಾರತದ ಪದಕಗಳ ಖಾತೆಯನ್ನು ನಾನು ತೆರೆದಿದ್ದು ನಿಜಕ್ಕೂ ಸಂತಸ ತಂದಿದೆ. ನನ್ನ ಇಂದಿನ ಸಾಧನೆ ನನ್ನ ಅತ್ಯುತ್ತಮ ಸಾಧನೆಯ ಸನಿಹಕ್ಕೂ ತಲುಪಿಲ್ಲ. ಆದರೂ ಭಾರತಕ್ಕಾಗಿ ಬೆಳ್ಳಿ ಪದಕ ಗೆದ್ದಿರುವುದು ತುಂಬಾ ಸಂತಸ ತಂದಿದೆ" ಎಂದು ಗುರುರಾಜ್ ಪೂಜಾರಿ ಹೇಳಿದ್ದಾರೆ.

56 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಮಲೇಶ್ಯಾ ಮತ್ತು ಕಂಚಿನ ಪದಕ ಶ್ರೀಲಂಕಾ ಪಾಲಾಗಿದೆ.

ಕುಂದಾಪುರದ ಚಿತ್ತೂರು ಗ್ರಾಮದ ಗುರುರಾಜ್‌ಗೆ ಕಳೆದ ತಿಂಗಳು ಕರ್ನಾಟಕ ಸರ್ಕಾರ ಏಕಲವ್ಯ ಪ್ರಶಸ್ತಿ ಪ್ರಕಟಿಸಿತ್ತು.


ಬಡತನ ಮೆಟ್ಟಿನಿಂತ ಸಾಧಕ ಗುರುರಾಜ್
ಅಸ್ಸಾಂನ ಗುವಾಹಟಿಯಲ್ಲಿ ನಡೆದ 12 ನೇ ಸೌತ್ ಏಷ್ಯಾ ಗೇಮ್ಸ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ಧ ಕುಂದಾಪುರ ತಾಲೂಕಿನ ಚಿತ್ತೂರು ಗ್ರಾಮದ ವಂಡ್ಸೆ ನಿವಾಸಿ ಮಹಾಬಲ ಪೂಜಾರಿ ಮತ್ತು ಪದ್ಧು ಪೂಜಾರಿಯವರ ಮಗ ಗುರುರಾಜ್ 56 ಕೆ.ಜಿ ವೇಯ್ಟ್ ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವುದರ ಮೂಲಕ ದೇಶದ ಕೀರ್ತಿಯನ್ನು ಗಗನದೆತ್ತರಕ್ಕೆ ಹಾರಿಸುವಲ್ಲಿ ಯಶಸ್ವಿಯಾಗಿದ್ದರು.

ಬಾಲ್ಯದಿಂದಲೇ ಕ್ರೀಡೆಯಲ್ಲಿ ತುಂಬಾ ಆಸಕ್ತಿ ಹೊಂದಿದ್ದ ಗುರುರಾಜ್ ಛಲ ಬಿಡದ ಪರಿಶ್ರಮದಿಂದಾಗಿ ಈ ಗುರಿಯನ್ನು ತಲುಪಿದ್ದಾರೆ.

ಚಿತ್ತೂರು ಗ್ರಾಮದ ಮಹಾಬಲ ಪೂಜಾರಿ ಹಾಗು ಪದ್ಧು ದಂಪತಿಗಳ 6 ಮಕ್ಕಳಲ್ಲಿ 5ನೆ ಪುತ್ರನಾದ ಗುರುರಾಜ್ ಓದಿನಷ್ಟೆ ಕ್ರೀಡೆಯಲ್ಲಿ ಆಸಕ್ತಿ ತೋರುತ್ತಿದ್ದರು. ತಂದೆ ಚಾಲಕ ವೃತ್ತಿ ಮಾಡಿಕೊಂಡು ಕಷ್ಟದಾಯಕವಾಗಿ ಕುಟುಂಬವನ್ನು ನಡೆಸುತ್ತಿದ್ದಾರೆ.

ಕಿತ್ತು ತಿನ್ನುವ ಬಡತನದ ನಡುವೆಯೂ ಮಗನ ಪ್ರತಿಭೆಯನ್ನು ಪ್ರೋತ್ಸಾಹಿಸುತ್ತಾ ಬಂದ ಪೋಷಕರು ಹಾಗೂ ಇವರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದ ಗುರುಗಳು, ಇವರೆಲ್ಲರ ಪ್ರೋತ್ಸಾಹದ ಫಲವೇ ಇಂದು ಗುರುರಾಜ್  ಕ್ರೀಡಾಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ದೊಡ್ಡ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ.

ಹರ್ಷಿತ ಎಸ್‌(ಅಥ್ಲೆಟಿಕ್),  ರಾಜೇಶ್ ಪ್ರಕಾಶ್ ಉಪ್ಪಾರ್(ಬ್ಯಾಸ್ಕೇಟ್ ಬಾಲ್‌), ಪೂರ್ವಿಶ್‌ ಎಸ್‌ ರಾಮ್(ಬ್ಯಾಡ್ಮಿಂಟನ್‌), ರೇಣುಕಾ ದಂಡಿನ್‌(ಸೈಕ್ಲಿಂಗ್‌), ಮಯೂರ್ ಡಿ ಭಾನು(ಶೂಟಿಂಗ್‌), ಕಾರ್ತಿಕ್‌ ಎ(ವಾಲಿಬಾಲ್‌), ಮಾಳವಿಕ ವಿಶ್ವನಾಥ್(ಈಜು), ಕೀರ್ತನಾ ಟಿ.ಕೆ(ರೋಯಿಂಗ್), ಅಯ್ಯಪ್ಪ ಎಂ.ಬಿ(ಹಾಕಿ), ಸುಕೇಶ್‌ ಹೆಗ್ಡೆ(ಕಬಡ್ಡಿ), ಗುರುರಾಜ(ಭಾರ ಎತ್ತುವುದು), ಸಂದೀಪ್ ಬಿ ಕಾಟೆ(ಕುಸ್ತಿ), ರೇವತಿ ನಾಯಕ ಎಂ (ಪ್ಯಾರಾ ಈಜುಪಟು) ಏಕಲವ್ಯ ಪ್ರಶಸ್ತಿ ಪಡೆದ ಕ್ರೀಡಾಪಟುಗಳು.

ಜೀವಮಾನ ಸಾಧನೆ ಪ್ರಶಸ್ತಿ- 2016
ಕ್ರೀಡಾ ಕ್ಷೇತ್ರಕ್ಕೆ ಅಪ್ರತಿಮ ಕ್ರೀಡಾಪಟುಗಳನ್ನು ನೀಡಿದ ಕರ್ನಾಟಕದ ತರಬೇತುದಾರರಿಗೆ ಅವರ ಜೀವಮಾನದ ಸಾಧನೆಯನ್ನು ಪರಿಗಣಿಸಿ ಪ್ರತಿ ವರ್ಷ 2 ಕ್ರೀಡಾ ತರಬೇತುದಾರರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಪ್ರಸಕ್ತ ವರ್ಷ ಇಬ್ಬರು ಸಾಧಕರಾದ ವಿ.ಆರ್. ಬೀಡು (ಅಥ್ಲೆಟಿಕ್ಸ್), ಎಂ.ಆರ್. ಮೊಹಿತೆ (ಈಜು)ಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದೆ.

ಜೀವಮಾನ ಸಾಧನೆ ಪ್ರಶಸ್ತಿಗಾಗಿ ಆಯ್ಕೆಯಾಗಿರುವ ತರಬೇತುದಾರರಿಗೆ ತಲಾ ರೂ.1.50 ಲಕ್ಷಗಳ ನಗದು ಬಹುಮಾನ, ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಗುವುದು.

ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ- 2016
ಕರ್ನಾಟಕ ರಾಜ್ಯದ ಗ್ರಾಮೀಣ ಕ್ರೀಡೆಗಳಿಗೆ ಮತ್ತು ಗ್ರಾಮೀಣ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು 2014-15ನೇ ಸಾಲಿನಲ್ಲಿ ಹೊಸ ಯೋಜನೆಯಾಗಿ ಅನುಷ್ಟಾನಕ್ಕೆ ತರಲಾಗಿದೆ. ಗ್ರಾಮೀಣ ದೇಸಿ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವುದರ ಮೂಲಕ ಕ್ರೀಡಾಪಟುಗಳನ್ನು ಬೆಳಕಿಗೆ ತರುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.  

2016ರ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗೆ ಆಯ್ಕೆಯಾಗಿರುವ ಕ್ರೀಡಾಪಟುಗಳು
 ಸೈಯದ್ಫತೇಶಾವಲಿ ಹೆಚ್. ಬೇಪಾರಿ (ಆಟ್ಯಾ-ಪಾಟ್ಯಾ), ಯಶಸ್ವಿನಿ ಕೆ.ಜಿ (ಬಾಲ್ ಬ್ಯಾಡ್ಮಿಂಟನ್), ಶೇಖರ್ ವಾಲಿ (ಗುಂಡು ಎತ್ತುವುದು), ಯುವರಾಜ್ ಜೈನ್ (ಕಂಬಳ), ಮುನ್ನೀರ್ ಭಾಷಾ (ಖೋ-ಖೋ)
ಸುಗುಣಸಾಗರ್ ಹೆಚ್ ವಡ್ರಾಳೆ (ಮಲ್ಲಕಂಬ), ಸಬಿಯ ಎಸ್ (ಥ್ರೋಬಾಲ್), ಆತ್ಮಶ್ರೀ ಹೆಚ್.ಎಸ್ (ಕುಸ್ತಿ), ಧನುಶ್ ಬಾಬು (ರೋಲರ್ ಸ್ಕೇಟಿಂಗ್)
   
ಗ್ರಾಮೀಣ ಕ್ರೀಡಾ ರತ್ನ ಪ್ರಶಸ್ತಿಗಾಗಿ ಆಯ್ಕೆಯಾಗಿರುವ ಕ್ರೀಡಾ ಸಾಧಕರಿಗೆ ತಲಾ ರೂ.1.00 ಲಕ್ಷಗಳ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು.

ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ -2017-18
ಕ್ರೀಡೆಗಳ ಅಭಿವೃದ್ದಿ ಮತ್ತು ಕ್ರೀಡಾಪಟುಗಳ ಉನ್ನತ ಸಾಧನೆಯಲ್ಲಿ ಕ್ರೀಡಾ ಪ್ರವರ್ತಕರ ಪಾತ್ರ ಮಹತ್ವದ್ದಾಗಿದೆ. ಅಂತಹ ಕ್ರೀಡಾ ಪ್ರವರ್ತಕರನ್ನು ಗುರುತಿಸಿ ಪ್ರೋತ್ಸಾಹಿಸಲು 2017-18ನೇ ಸಾಲಿನಿಂದ 'ಕರ್ನಾಟಕ ಕ್ರೀಡಾ ಪೋಷಕ' ಪ್ರಶಸ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ.

2017-18ನೇ ಸಾಲಿಗೆ ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿಗೆ ಆಯ್ಕೆಯಾಗಿರುವ ಕ್ರೀಡಾ ಪ್ರವರ್ತಕರ ಪಟ್ಟಿ
ಬ್ರಹ್ಮಾವರ ಸ್ಪೋಟ್ರ್ಸ ಕ್ಲಬ್, ಬ್ರಹ್ಮಾವರ ಉಡುಪಿ
ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ (ರಿ) ಮಿಯ್ಯಾರ್ ಉಡುಪಿ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದಿರೆ ದಕ್ಷಿಣ ಕನ್ನಡ
ಜೈನ್ ವಿಶ್ವವಿದ್ಯಾಲಯ, ಬೆಂಗಳೂರು ಬೆಂಗಳೂರು
ಜೆ.ಎಸ್.ಡಬ್ಲ್ಯೂ, ಬಳ್ಳಾರಿ ಬಳ್ಳಾರಿ
ಕ್ಯಾತನಹಳ್ಳಿ ಕ್ರೀಡಾ ಒಕ್ಕೂಟ(ರಿ) ಕ್ಯಾತನಹಳ್ಳಿ, ಪಾಂಡವಪುರ ತಾಲ್ಲೂಕು, ಮಂಡ್ಯ ಜಿಲ್ಲೆ. ಮಂಡ್ಯ
ಕ್ರೀಡಾ ಉತ್ತೇಜನ ಹಾಗೂ ಅಭಿವೃದ್ಧಿ ಸಹಕಾರ ನಿ. ಚಂದರಗಿ ಬೆಳಗಾವಿ
ಕಂಠೀರವ ಕೇಸರಿ ರತನ್ ಮಠಪತಿ ಸ್ಪೋಟ್ರ್ಸ ಅಂಡ್ ಎಜ್ಯುಕೇಷನ್ ಸೊಸೈಟಿ, ಹುನ್ನೂರ, ತಾಲ್ಲೂಕು ಜಮಖಂಡಿ, ಜಿಲ್ಲಾ ಬಾಗಲಕೋಟ  ಬಾಗಲಕೋಟ
ಕೃಷ್ಣಾ ತೀರಾ ರೈತ ಸಂಘ (ರಿ), ಜಮಖಂಡಿ, ಜಿಲ್ಲಾ ಬಾಗಲಕೋಟ ಬಾಗಲಕೋಟ
ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ), ಶ್ರೀ ಆದಿಚುಂಚನಗಿರಿ ಕ್ಷೇತ್ರ, ನಾಗಮಂಗಲ ತಾಲ್ಲೂಕು ಮಂಡ್ಯ. ಮಂಡ್ಯ

ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿಗಾಗಿ ಆಯ್ಕೆಯಾಗಿರುವ ಕ್ರೀಡಾ ಪ್ರವರ್ತಕರಿಗೆ ತಲಾ ರೂ.5.00 ಲಕ್ಷಗಳ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.

ಇದನ್ನೂ ಓದಿ:
►►ಚಿನ್ನದ ಪದಕ ಗೆದ್ದು ಭಾರತಕ್ಕೆ ಕೀರ್ತಿ ತಂದ ಚಿತ್ತೂರಿನ ಕ್ರೀಡಾಪಟು:
http://bit.ly/1PERygY
►►ಕುಂದಾಪುರದ ಅನುಪ್ ಡಿ’ಕೋಸ್ತಾಗೆ ಏಕಲವ್ಯ ಪ್ರಶಸ್ತಿ: http://bit.ly/2dUPRBe

Related Tags: Commonwealth Games, Weight Lifting, Gururaj Poojary, Silver Medal, Goald Coast, Kundapur, Karnataka
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ