ಕುವೈಟ್ ಭೀಕರ ಬಸ್ ಅಪಘಾತ: 7 ಭಾರತೀಯರು ಸೇರಿ 15 ಕಾರ್ಮಿಕರ ಸಾವು

ಕರಾವಳಿ ಕರ್ನಾಟಕ ವರದಿ

ಕುವೈಟ್:
ಬುರ್ಗಾನ್‌ನಲ್ಲಿ ಸಂಭವಿಸಿದ ಎರಡು ಬಸ್‌ಗಳ ಭೀಕರ ಅಪಘಾತದಲ್ಲಿ ಹದಿನೈದಕ್ಕೂ ಅಧಿಕ ಕಾರ್ಮಿಕರು ಸಾವಪ್ಪಿದ ಕಳವಳಕಾರಿ ಘಟನೆ ವರದಿಯಾಗಿದೆ. 

ದಕ್ಷಿಣ ಕುವೈಟ್‌ನಲ್ಲಿ ರವಿವಾರ ಸಂಭವಿಸಿದ ಅಪಘಾತದಲ್ಲಿ ಮೃತರಲ್ಲಿ ಏಳು ಮಂದಿ ಭಾರತೀಯ ಕಾರ್ಮಿಕರಾಗಿದ್ದಾರೆ. ಇಬ್ಬರು ಭಾರತೀಯರು ಮತ್ತು ಓರ್ವ ಕುವೈಟ್ ಪ್ರಜೆ ಗಾಯಗೊಂಡಿದ್ದಾರೆ. ಮೃತರಲ್ಲಿ ಐವರು ಈಜಿಫ್ಟಿಯನ್ನರು ಮತ್ತು ಮೂವರು ಪಾಕಿಸ್ತಾನಿಯರು.

ಬುರ್ಗಾನ್ ಡ್ರಿಲ್ಲಿಂಗ್ ಕಂಪನಿ ಮತ್ತು HEISCO ಸಂಸ್ಥೆಗಳ ಕಾರ್ಮಿಕರು ಎರಡು ಬಸ್ಸುಗಳಲ್ಲಿ ಪ್ರಯಾಣಿಸುತ್ತಿದ್ದರು.

ಸರಕಾರಿ ಒಡೆತನದ ಕುವೈಟ್ ಆಯಿಲ್ ಕಂಪೆನಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Related Tags: Seven Indians Killed, Bus Accident, Kuwait Accident, Burgan Drilling Company, HEISCO, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕುವೈಟ್ ಬಸ್ ಮುಖಾಮುಖಿ, ಭೀಕರ ಬಸ್ ಅಪಘಾತ, ಬುರ್ಗಾನ್ ಡ್ರಿಲ್ಲಿಂಗ್, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ