ಭಂಡಾರ್ಕರ್‌ಗೆ ಮೋದಿ ಸಿನೆಮಾ ಮಾಡಲು ಧೈರ್ಯವಿದೆಯೆ?
ಇಂದಿರಾ ಮತ್ತು ಸಂಜಯ್ ಬದುಕನ್ನು ಆಧರಿಸಿದ "ಇಂದು ಸರ್ಕಾರ್” ನಿರ್ದೇಶಿಸಿದ ಮಧುರ್ ಭಂಡಾರ್ಕರ್‌ಗೆ ತನ್ನ ಭಂಡತನ ಮೋದಿಯ ಸಿನೆಮಾದಲ್ಲಿ ತೋರಿಸುವಷ್ಟು ಧೈರ್ಯವಿದೆಯೇ?

ಆರ್. ಬಿ. ಶೇಣವ
ಮಾನ್ಯರೇ,
ಈಗ ಬಿಡುಗಡೆಯಾಗುತ್ತಿರುವ “ಇಂದು ಸರ್ಕಾರ್” ಎಂಬ ವಿವಾದಿತ ಹಿಂದಿ ಚಲನಚಿತ್ರವನ್ನು ಮಧುರ್ ಭಂಡಾರ್ಕರ್ ನಿರ್ದೇಶಿಸಿದ್ದು ಅದು 1975-77 ರ ತುರ್ತು ಪರಿಸ್ಥಿತಿ ಹಾಗೂ ಇಂದಿರಾ ಗಾಂಧಿ ಮತ್ತು ಸಂಜಯನ ಖಾಸಗಿ ಜೀವನ ಆಧಾರಿತವಾಗಿದೆಯಂತೆ. ಅದನ್ನು ಅಮಿತ್ ಶಾನ ಆದೇಶದಂತೆ ಇದೇ ವರ್ಷ  ನವಂಬರಿನಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಿ ನಿರ್ಮಿಸಲಾಗಿದೆಯಂತೆ.  

ನರೇಂದ್ರ ಮೋದಿ ಜೀವನ ಆಧಾರಿತ ಚಲನಚಿತ್ರ ನಿರ್ಮಿಸಿದರೆ ಅದರಲ್ಲಿ ಕಾಮೇಡಿ, ರೊಮಾನ್ಸ್, ಸಸ್ಪೆನ್ಸ್, ಬೀಕರ ವಾಯ್ಲೆನ್ಸ್ ಹಾಗೂ (ಯಶೋಧಾಬೆನ್ ರ) ಟ್ರಾಜೆಡಿ ಈ ಎಲ್ಲಾ ಮಸಾಲೆಗಳು ಇರತ್ತವೆ. ಮೋದಿ ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಗುಜರಾತ್ ಪೊಲೀಸರು ಮೋದಿ ಅಮಿತ್ ಷಾ ಆದೇಶದಂತೆ ಒಬ್ಬ ಯುವ ಆರ್ಕಿಟೆಕ್ಟ್ ಹೆಂಗಸನ್ನು ಮಫ್ತೀ ಪೊಲೀಸರು ಸತತ ಹಿಂಬಾಲಿಸಿ (stalk ಮಾಡಿ) ಅವಳ ಜೀವನ ದುರ್ಭರ ಮಾಡಿದ್ದ ರೋಮ್ಯಾಂಟಿಕ್ ಕತೆಯುಳ್ಳ ಹಾಗೂ ನರೇಂದ್ರ ಚಿಕ್ಕಂದಿನಿಂದಲೇ ಯಶೋಧಾಬೆನ್ ರವರ ಜೀವನದಲ್ಲಿ ವಿಲನ್ ಆದ ಟ್ರಾಜೆಡಿ ಕತೆಯುಳ್ಳ ಸಿನಿಮಾ ನಿರ್ಮಿಸಿದರೆ ಅದು ಕಂಬನಿಪ್ರಿಯ ಮಹಿಳೆಯರಲ್ಲಿ ಹಿಟ್ ಆಗಬಹುದು.

ಜತೆಗೆ ಮೋದಿ ಚಿಕ್ಕಂದಿನಲ್ಲಿ ಮೊಸಳೆಗಳೊಂದಿಗೆ ಹೊಡೆದಾಡಿದ್ದ ಕಾಲ್ಪನಿಕ ಕಥೆ, ಹಿಮಾಲಯದಲ್ಲಿ 12 ವರ್ಷ ಸಂಪೂರ್ಣ ದಿಗಂಬರನಾಗಿ ತಪಸ್ಸು ಮಾಡಿ ಅಲ್ಲಿ ಯೇತಿ ಎಂಬ ಹಿಮ ಮಾನವನೋಟ್ಟಿಗೆ ಹೊಡೆದಾಡಿದ್ದ ಸುಳ್ಳು ಕಥೆ ಜೋಡಿಸಿದರೆ ಹಾಗೂ ಮೆಟ್ರಿಕ್ ನಲ್ಲಿ ಫೇಲ್ ಆಗಿ ತಂದೆಯೊಡನೆ ಜಗಳಾಡಿ ಮನೆಬಿಟ್ಟು ಓಡಿದ್ದ ನಿಜ ಘಟನೆಗಳನ್ನು ಸೇರಿಸಿದರೆ ಆ ಚಿತ್ರ ತುಂಬಾ ಹಿಟ್ ಆಗಬಹುದು.

ಚಿಕ್ಕಂದಿನಿಂದಲೂ ತುಂಬಾ ಜಗಳಗಂಟನಾಗಿದ್ದ ನರೇಂದ್ರನು ಶಾಲೆಯಲ್ಲಿ ಸಹಪಾಠಿಗಳೊಂದಿಗೆ ಹಾಗೂ ಮನೆಯಲ್ಲಿ ಅಣ್ಣ ತಮ್ಮಂದಿರೊಂದಿಗೆ ಜಗಳಾಡುತ್ತಿದ್ದ ನಿಜ ಘಟನೆಗಳನ್ನು ಆಧರಿಸಿ ಸಿನೆಮಾದಲ್ಲಿ ಮಾರಾಮಾರಿ ಸ್ಟಂಟ್ ಹಾಗೂ ವೈಲೆನ್ಸ್ ಸೇರಿಸಬಹುದು. ಮೋದಿ ಜಗತ್ತಿನ ಯಾವುದೇ ಕಾಲೇಜಿನಲ್ಲಿ ಇರದೇ ಇರುವ ಎಂಟಾಯರ್ ಪಾಲಿಟಿಕಲ್ ಸಾಯನ್ಸ್ ಎಂಬ ವಿಷಯದಲ್ಲಿ ಬಿ‌ಏ-ಎಮ್‌ಏ ಪದವಿಗಳ ನಕಲಿ ಸರ್ಟಿಫಿಕೇಟ್ ಮಾಡಿದ ದೃಶ್ಯಗಳು, ಕರೀಂ ತೆಲಗಿಯ ನಕಲಿ ಸ್ಟ್ಯಾಂಪ್ ಪೇಪರಿಗಿಂತಲೂ ಹೆಚ್ಚು ಸಸ್ಪೆನ್ಸ್ ಹುಟ್ಟಿಸುವುದು ಖಂಡಿತ. ಮೇಲಾಗಿ ಅಮೆರಿಕಾದಲ್ಲೂ ಆಗಿನ್ನೂ ಕಂಪ್ಯೂಟರ್-ಪ್ರಿಂಟರ್ ಆವಿಷ್ಕಾರವಾಗಿರದಿದ್ದ ಕಾಲದಲ್ಲಿಯೇ ಮೋದಿ ಕಂಪ್ಯೂಟರಿನಲ್ಲಿ ಮಾರ್ಕ್ ಶೀಟ್ ಮತ್ತು ಪದವಿ ಸರ್ಟಿಫಿಕೇಟ್ ಪ್ರಿಂಟ್ ಮಾಡಿರುವ ಫ್ಯೂಚರಿಷ್ಟಿಕ್ ತಂತ್ರಜ್ಞಾನದ ಸೈ-ಫೈ ದೃಶ್ಯಗಳು ಸ್ಟಾರ್ ವಾರ್ ಗಿಂತಲೂ ಹೆಚ್ಚು ರೋಮಾಂಚನಕಾರಿ ಆಗಬಲ್ಲದು.

ಅಷ್ಟೇ ಅಲ್ಲ, ಗೋಧ್ರಾದಲ್ಲಿ ಹಿಂದೂ ಕರಸೇವಕರಿದ್ದ ಟ್ರೇನಿಗೆ ತಮ್ಮವರಿಂದಲೇ ಬೆಂಕಿ ಹಚ್ಚಿಸಿದ್ದು, ಆನಂತರ ತಮ್ಮ ಗೂಂಡಾಗಳ ಮೂಲಕ ಗುಜರಾತಿನಲ್ಲಿ ಕೋಮು ದಂಗೆ ಹಬ್ಬಿಸಿ ಸಣ್ಣ ಪುಟ್ಟ ಮಕ್ಕಳನ್ನೂ ತ್ರಿಶೂಲದಿಂದ ಹೊಟ್ಟೆ ಬಗೆದು ಕೊಂದಿದ್ದು, ಗರ್ಭಿಣಿ ಮಹಿಳೆಯರ ಹೊಟ್ಟೆ ಸೀಳಿ ಭ್ರೂಣ ಹೊರತೆಗೆದು ರಸ್ತೆಯಲ್ಲಿ ಚೆಲ್ಲಿದ್ದು, ಪೊಲೀಸ್ ಅಧಿಕಾರಿ ಬಂಜಾರಾ ಮೂಲಕ ಇಸ್ರತ್ ಜಾನ್ ಸಹಿತ ಅನೇಕರ ನಕಲಿ ಎಂಕೌಂಟರ್ ಮಾಡಿಸಿದ್ದು, ತನ್ನದೇ ಪಕ್ಷದ ಪ್ರತಿಸ್ಪರ್ಧಿ ಹರೇನ್ ಪಾಂಡ್ಯಾರನ್ನು ತುಳಸಿರಾಮ್ ಪ್ರಜಾಪತಿಯಿಂದ ಸುಪಾರಿ ಕೊಲೆ ಮಾಡಿಸಿದ್ದು, ಕೊನೆಗೆ ತನ್ನನ್ನು ಮೇಲೆ ತಂದ ಪಿತೃಸಮಾನ ಅಡ್ವಾಣಿಯ ಬೆನ್ನಿಗೆ ನಿರ್ದಯವಾಗಿ ಚೂರಿ ಹಾಕಿದ್ದು, ಇವೆಲ್ಲವನ್ನೂ ಕಥೆಯಲ್ಲಿ ಸೇರಿಸಿ ತೆಲುಗು ಸಿನೆಮಾಗಳಿಗಿಂತಲೂ ಹೆಚ್ಚು ಕ್ರೂರ ಹಸಿಹಸಿ ಹಿಂಸೆಯ ದೃಶ್ಯಗಳುಳ್ಳ ಸಿನೆಮಾ ಮಾಡಿದರೆ ನಿರ್ಮಾಪಕರಿಗೆ ಹಣದ ಸುರಿಮಳೆ ಆಗುವುದು ಖಂಡಿತ.

ಚಿಕ್ಕಂದಿನಲ್ಲಿಯೇ ತಂದೆಯೊಂದಿಗೆ ಸಂಬಂಧ ಹಾಳು ಮಾಡಿಕೊಂಡಿದ್ದ ಮೋದಿ ತನ್ನ ತಂದೆ ತೀರಿಕೊಂಡ ಸಂದರ್ಭದಲ್ಲೂ ತನ್ನ ಹಗೆತನ ಬಿಡಲಿಲ್ಲ. ಮೋದಿ ಅದೇ ಊರಲ್ಲಿ ತನ್ನ ಸ್ನೇಹಿತನ ಮನೆಯಲ್ಲಿದ್ದರೂ ಅವನು ತನ್ನ ತಂದೆಯ ಪಾರ್ಥೀವ ಶರೀರದ ಕೊನೆಯ ದರ್ಶನಕ್ಕೂ ಬರಲಿಲ್ಲ, ಹುಟ್ಟಿಸಿದ ತಂದೆಯ ಶವದ ಬಾಯಿಗೆ ತುಳಸಿ ನೀರು ಬಿಡುವ ಹಿಂದೂ ಮಗನ ಕರ್ತವ್ಯವನ್ನೂ ನಿರ್ವಹಿಸಲಿಲ್ಲ. ಆದರೂ ಈ ಮೋದಿ ಹಿಂದೂ ಸಂಸ್ಕೃತಿಯ ರಕ್ಷಕನಂತೆ!  ಮೋದಿ ತನ್ನ ಸ್ವಂತ ಊರಾದ ವಡ್ನಗರದ ಬಸ್ ಸ್ಟಾಂಡ್ ನಲ್ಲಿಯೇ ಲಾಭಕರ ಕ್ಯಾಂಟೀನ್ ನಡೆಸುತ್ತಿದ್ದರೂ ತನ್ನ ಒಡಹುಟ್ಟಿದ ತಂಗಿಯ ಮದುವೆಗೆ ಮೋದಿ ಒಂದು ಪೈಸೆ ಸಹಾಯ ಮಾಡಲಿಲ್ಲ. ಮೋದಿಯ ಜೀವನದ ಇಂತಹಾ ಎಲ್ಲಾ ರೋಚಕ ಸಂಗತಿಗಳನ್ನು ಸೇರಿಸಿ ಸಿನೆಮಾ ಮಾಡಿದರೆ ಮೋದಿಯ ಮೂಲಗುಣವಾದ ಹೃದಯಹೀನತೆ ಮತ್ತು ಸಮಯಸಾಧಕ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿದಂತಾಗಬಹುದು. 

1975 ರ ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿಗಿಂತ ಈಗಿನ ಮೋದಿಯ ಆಘೋಷಿತ ತುರ್ತುಪರಿಸ್ಥಿತಿ ಹೆಚ್ಚು ಕರಾಳವಾಗಿದೆ ಎಂದು ಸ್ವತಃ ಬಿ‌ಜೆ‌ಪಿಯ ಅಡ್ವಾಣಿಯವರೇ ಹೇಳಿರುವರು.

ಈಗಿನ ಆಘೋಷಿತ ತುರ್ತು ಪರಿಸ್ಥಿತಿಯ ಬಗ್ಗೆ ಮತ್ತು ಮೋದಿಯ ನೋಟು ರದ್ದತಿಯಿಂದ ದೇಶದ ಜನರು ಪಟ್ಟ ಅಪಾರ ಬವಣೆ, ಬ್ಯಾಂಕ್ ಸರತಿಯಲ್ಲಿ ಸತ್ತ ಜನಗಳು, ಕೆಲಸ ಕಳೆದುಕೊಂಡು ಬೀದಿಗೆ ಬಿದ್ದ 15 ಲಕ್ಷ ಬಡವರ ಕಂಬನಿ, ಕೇಸರಿ ಗೋ-ರಾಕ್ಷಸರು ನಡು ಬೀದಿಯಲ್ಲಿ ಮಾಡಿದ ಅಮಾನವೀಯ ಕೊಲೆಗಳು, ಇವೆಲ್ಲವನ್ನೂ ಸೇರಿಸಿ ಒಂದು ಅತ್ಯುತ್ತಮ ಟ್ರ್ಯಾಜಿಕ್ ಸಿನಿಮಾ ನಿರ್ಮಿಸಿದರೆ ಅದಕ್ಕೆ ಆಸ್ಕರ್ ಪ್ರಶಸ್ತಿ ಸಿಗುವುದು ಖಚಿತ.  ನಿರ್ದೇಶಕ ಮಧುರ್ ಭಂಡಾರ್ಕರ್ ತನ್ನ ಭಂಢತನ ಮೋದಿಯ ಸಿನಿಮಾದಲ್ಲಿ ತೋರಿಸುವಷ್ಟು ಧೈರ್ಯವಿದೆಯೇ?
 
-ಆರ್. ಬಿ. ಶೇಣವ

 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ