ಇನ್ನೆಂದೂ ಆಸ್ಟ್ರೇಲಿಯಾ ಪರ ಆಡುವುದಿಲ್ಲ: ಕಣ್ಣೀರು ಹಾಕುತ್ತಲೇ ಕ್ಷಮೆ ಕೇಳಿದ ವಾರ್ನರ್

ಕರಾವಳಿ ಕರ್ನಾಟಕ ವರದಿ

ಸಿಡ್ನಿ:
ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವರ್ಷಗಳ ಕಾಲ ನಿಷೇಧಕ್ಕೊಳಗಾಗಿರುವ ಕ್ರಿಕೆಟಿಗ ಡೇವಿಡ್ ವಾರ್ನರ್ ಇನ್ನೆಂದೂ ಆಸ್ಟ್ರೇಲಿಯಾ ಪರ ಕ್ರಿಕೆಟ್​ ಆಡುವುದಿಲ್ಲ ಎಂದು ಕಣ್ಣೀರು ಹಾಕುತ್ತಲೇ ಅಭಿಮಾನಿಗಳ ಕ್ಷಮೆ ಕೋರಿದರು.

ಇಂದು ಸಿಡ್ನಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಾರ್ನರ್, ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್​ನಲ್ಲಿ ಕ್ಯಾಮರೂನ್ ಬ್ಯಾಂಕ್ರಾಫ್ಟ್​ ಸ್ಯಾಂಡ್​ಪೇಪರ್​ ಬಳಸಿ ಚೆಂಡು ವಿರೂಪಗೊಳಿಸಿ ಮೋಸವೆಸಗಿದ್ದರ ಸಂಪೂರ್ಣ ಹೊಣೆಯನ್ನು ನಾನೇ ತೆಗೆದುಕೊಳ್ಳುತ್ತೇನೆ.

ಈ ಬಗ್ಗೆ ನನ್ನ ಜೀವವಿರುವವರೆಗೂ ಕೊರಗು ಕಾಡುತ್ತದೆ. ಪ್ರಕರಣದಲ್ಲಿ ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ. ಪ್ರಕರಣದಲ್ಲಿ ನಾನು ಬಲಿಪಶುವಾದೆನು ಎಂದೆನಿಸುತ್ತಿದೆ ಎಂದರು.

ಈ ಪ್ರಕರಣ ನನ್ನ ಜೀವನದುದ್ದಕ್ಕೂ ನನ್ನನ್ನು ಕಾಡಲಿದೆ. ನನ್ನ ದೇಶಕ್ಕೆ ಜಯ ದೊರಕಿಸಿಕೊಡಬೇಕು ಎಂಬುದಷ್ಟೇ ನನ್ನ ಉದ್ದೇಶವಾಗಿತ್ತು. ಆದರೂ ಇಡೀ ಪ್ರಕರಣದ ಹೊಣೆಯನ್ನು ನಾನೇ ಹೊತ್ತುಕೊಳ್ಳುತ್ತೇನೆ ಎಂದು ವಾರ್ನರ್ ಹೇಳಿದ್ದಾರೆ.

ಸುದ್ದಿಗೋಷ್ಠಿಯದ್ದಕ್ಕೂ ತೀವ್ರ ಭಾವುಕರಾಗಿದ್ದ ಡೇವಿಡ್ ವಾರ್ನರ್ ಅಳುತ್ತಲೇ ತಮ್ಮ ಅಭಿಮಾನಿಗಳು, ಸಹ ಆಟಗಾರರು, ತಮ್ಮ ಕುಟುಂಬ ಹಾಗೂ ಆಸ್ಟ್ರೇಲಿಯಾ ಪ್ರಜೆಗಳ ಕ್ಷಮೆ ಕೋರಿದರು.

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಬಾಲ್‌ ಟ್ಯಾಂಪರಿಂಗ್‌ ಮಾಡಿದ್ದ ಆರೋಪದಲ್ಲಿ ನಾಯಕ ಸ್ಟಿವನ್‌ ಸ್ಮಿತ್‌ ಮತ್ತು ವಾರ್ನರ್‌ಗೆ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ತಲಾ 1 ವರ್ಷಗಳ ಕಾಲ ನಿಷೇಧ ಹೇರಲಾಗಿತ್ತು. ಪ್ರಕರಣದಲ್ಲಿ ಇನ್ನೋರ್ವ ಆಟಗಾರ ಬ್ಯಾನ್‌ಕ್ರಾಫ್ಟ್‌ಗೆ 9 ತಿಂಗಳ ಕಾಲ ನಿಷೇಧ ಹೇರಲಾಗಿತ್ತು.

ಇಂದು ಹೆಚ್ಚು ಓದಿದ ಸುದ್ದಿಗಳು
►►ಬಸ್-ಕಾರು ಮುಖಾಮುಖಿ ಢಿಕ್ಕಿ: ಲೆಕ್ಕಪರಿಶೋಧಕ ದಾರುಣ ಸಾವು:
http://bit.ly/2GHK6HX
►►ಅನಂತ ಹೆಗಡೆಯನ್ನು ಬಿಜೆಪಿಯಲ್ಲಿ ಏಕೆ ಇಟ್ಟುಕೊಂಡಿದ್ದೀರಿ? ಅಮಿತ್ ಶಾ ಬೆವರಿಳಿಸಿದ ದಲಿತರು: http://bit.ly/2GKqbbC
►►ಒಪ್ಪಿಗೆ ಪಡೆಯದೆ ಕಾರ್ಟೂನ್ ಬಳಕೆ: 'ನೇಶನ್ ವಿತ್ ನಮೋ' ಪೇಜ್ ವಿರುದ್ದ ಸತೀಶ್ ಆಚಾರ್ಯ ಕಿಡಿ: http://bit.ly/2J3peJs
►►ಮಧ್ಯಪ್ರದೇಶ: ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 62ಕ್ಕೆ ಏರಿಕೆ: http://bit.ly/2GHMJcT
►►ಕೊಲೆಗಡುಕರು ಪಾತಾಳದಲ್ಲಿ ಅಡಗಿದ್ದರೂ ಜೈಲಿಗೆ ಕಳುಹಿಸುತ್ತೇವೆ: ಅಮಿತ್ ಶಾ: http://bit.ly/2E6Wzj2
►►ಬೇಟೆಗೆ ಹೋದ ಇಬ್ಬರ ಸಾವು ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ: http://bit.ly/2E6mGqy
►►ಯಡಿಯೂರಪ್ಪನೊಡನೆ ಜಗಳ ಗಂಡ-ಹೆಂಡತಿ ಮುನಿಸಿನಂತೆ: ಈಶ್ವರಪ್ಪ: http://bit.ly/2E6uHM6

Related Tags: Australia Cricket Team, Ball-Tampering, David Warner, Resigned, Never Play For Australia Again, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ