ದೋಷಯುಕ್ತ ಎಂಜಿನ್: 47 ವಿಮಾನಗಳ ಹಾರಾಟ ರದ್ದುಗೊಳಿಸಿದ ಇಂಡಿಗೊ

ಕರಾವಳಿ ಕರ್ನಾಟಕ ವರದಿ

ನವದೆಹಲಿ:
ಇಂಡಿಗೊ ವಿಮಾನ ಯಾನ ಸಂಸ್ಥೆಯ ಎಂಟು ‘ಎ320ನಿಯೊ’ ವಿಮಾನಗಳ ಎಂಜಿನ್‌ಗಳು ದೋಷಯುಕ್ತವಾಗಿರುವ ಕಾರಣ ಅವುಗಳ ಹಾರಾಟಕ್ಕೆ ಡಿಜಿಸಿಎ ತಡೆಯೊಡ್ಡಿರುವ ಬೆನ್ನಲ್ಲೇ, ಇಂಡಿಗೊ ವಿಮಾನಯಾನ ಸಂಸ್ಥೆ 47 ವಿಮಾನಗಳ ಹಾರಾಟ ರದ್ದುಗೊಳಿಸಿದೆ.

ಹಾರಾಟ ರದ್ದಾದ ವಿಮಾನಗಳಲ್ಲಿ ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತ, ಹೈದರಾಬಾದ್, ಪಟ್ನಾ, ಶ್ರೀನಗರ, ಭುವನೇಶ್ವರ, ಅಮೃತಸರ, ಗುವಾಹಟಿ ಮತ್ತಿತರ ಕಡೆಗಳಿಂದ ಸಂಚರಿಸಬೇಕಿದ್ದ ವಿಮಾನಗಳೂ ಒಳಗೊಂಡಿವೆ.

ಸೋಮವಾರದಂದು ಇಂಡಿಗೋ ಏರ್‌‌ಲೈನ್ಸ್‌‌ನ ಲಕ್ನೋಗೆ ಹೋಗಲಿದ್ದ ವಿಮಾನ ಕೇವಲ 40 ನಿಮಿಷಗಳ ಒಳಗೆ ಆಗಸದಲ್ಲಿ ಇಂಜಿನ್‌ ವೈಫ‌ಲ್ಯಕ್ಕೆ ಗುರಿಯಾಗಿ ಅಹ್ಮದಾಬಾದ್‌ಗೆ ಮರಳಿತ್ತು.

ಈ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯ (ಡಿಜಿಸಿಎ) ಕೈಗೊಂಡ ತೀವ್ರ ತಪಾಸಣೆಯಲ್ಲಿ ಇಂಡಿಗೋ ಏರ್‌‌ಲೈನ್ಸ್‌ನ ಎಂಟು ವಿಮಾನಗಳ ಇಂಜಿನ್‌ಗಳು ದೋಷಯುಕ್ತವಾಗಿರುವುದು ಕಂಡುಬಂದಿತ್ತು. ಇದರ ಪರಿಣಾಮವಾಗಿಯೇ ಇಂಡಿಗೋ ಇಂದು ತನ್ನ 47 ವಿಮಾನ ಹಾರಾಟಗಳನ್ನು ರದ್ದು ಪಡಿಸಿದೆ.

ಇಂಡಿಗೋ ದಿನಕ್ಕೆ 1,000 ಹಾರಾಟಗಳನ್ನು ದೇಶೀಯವಾಗಿ ಕೈಗೊಳ್ಳುತ್ತದೆ. ನಿನ್ನೆ ಸೋಮವಾರ ಇಂಡಿಗೋ ಮತ್ತು ಗೋ ಏರ್‌ ವಿಮಾನ ಹಾರಾಟಗಳು ರದ್ದಾದ ಕಾರಣ ನೂರಾರು ಪ್ರಯಾಣಿಕರು ಭಾರೀ ಪರದಾಟ ಅನುಭವಿಸಿದರು.

ಇಂದು ಓದಿದ ಹೆಚ್ಚು ಸುದ್ದಿಗಳು
►►ಪಕ್ಷ ಹೇಳಿದರೆ ವಿಷ ಕುಡಿಯಲೂ ಸಿದ್ಧ. ಬಿಜೆಪಿ ಮೇಲೆ ಅಸಮಾಧಾನವಿಲ್ಲ: ವಿಜಯ್‌ ಸಂಕೇಶ್ವರ:
http://bit.ly/2HsPyLE
►►ತಮಿಳುನಾಡಿನಲ್ಲಿ ಭೀಕರ ಸರಣಿ ಅಪಘಾತ: ಕರ್ನಾಟಕದ ಐವರು ಮೃತ್ಯು: http://bit.ly/2p8Pt8Y
►►ರಾಜ್ಯದ ಮೊದಲ ಸ್ಕೂಬಾ ಡೈವಿಂಗ್ ತರಬೇತಿ ಕೇಂದ್ರಕ್ಕೆ ನಟಿಯರಿಂದ ಚಾಲನೆ: http://bit.ly/2Do6aBH
►►ಮುಖ್ಯ ಕಾರ್ಯದರ್ಶಿಗೆ ಎಜಿಡಿಪಿ ಪತ್ರ: ಶಿಸ್ತು ಕ್ರಮಕ್ಕೆ ಸಿದ್ದರಾಮಯ್ಯ ಸೂಚನೆ?: http://bit.ly/2p4OSFg
►►ಪಬ್ ದಾಳಿ ತೇಜೋವಧೆ. ಬಿಜೆಪಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಪ್ರಮೋದ್ ಮುತಾಲಿಕ್: http://bit.ly/2HqxGky
►►ಟಿಪ್ಪರ್‌ಗೆ ಢಿಕ್ಕಿಯಾದ ಹಣ ಸಾಗಾಟ ವಾಹನ: ಇಬ್ಬರಿಗೆ ಗಾಯ: http://bit.ly/2tDa5ee
►►ಮಂಗಳೂರು ಪಬ್ ದಾಳಿ- ಸಾಕ್ಷಾಧಾರಗಳ ಕೊತೆಯಿಂದ ಎಲ್ಲರೂ ಖುಲಾಸೆ http://bit.ly/2DmoU4p

Related Tags: 47 IndiGo Flights Cancelled, DGCA, 320 Neo Planes, Directorate General of Civil Aviation, Kannada News, Karavalikaranataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ