ಪಕ್ಷ ಹೇಳಿದರೆ ವಿಷ ಕುಡಿಯಲೂ ಸಿದ್ಧ. ಬಿಜೆಪಿ ಮೇಲೆ ಅಸಮಾಧಾನವಿಲ್ಲ: ವಿಜಯ್‌ ಸಂಕೇಶ್ವರ

ಕರಾವಳಿ ಕರ್ನಾಟಕ ವರದಿ

ಹುಬ್ಬಳ್ಳಿ:
ನಾನು ಬಿಜೆಪಿಯನ್ನು ಮದುವೆಯಾಗಿದ್ದೇನೆ. ಪಕ್ಷ ಹೇಳಿದರೆ ವಿಷ ಕುಡಿಯಲೂ ಸಿದ್ಧ. ಟಿಕೆಟ್ ತಪ್ಪಿದ್ದಕ್ಕೆ ಅಸಮಾಧಾನಗೊಂಡಿದ್ದೇನೆ ಎಂಬ ಸುಳ್ಳು ಸುದ್ದಿ ಹರಿದಾಡುತ್ತಿದೆ. ಬಿಜೆಪಿಯ ಮೇಲೆ ನನಗೆ ಯಾವುದೇ ಅಸಮಾಧಾನ ಇಲ್ಲ ಎನ್ನುವ ಮೂಲಕ ಡಾ.ವಿಜಯ್‌ ಸಂಕೇಶ್ವರ್ ಗೊಂದಲಗಳಿಗೆ ತೆರೆ ಎಳೆದಿದ್ದು, ತಾನು ಬಿಜೆಪಿ ತೊರೆಯುವ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ.

ಈ ಬಗ್ಗೆ ಅವರು ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದು, ರಾಜ್ಯಸಭಾ ಟಿಕೆಟ್‌ ದೊರಕದ ಹಿನ್ನಲೆಯಲ್ಲಿ ಸಂಕೇಶ್ವರ್ ಬಿಜೆಪಿ ತೊರೆಯುತ್ತಿದ್ದಾರೆ ಎನ್ನುವ ಸುದ್ದಿಯನ್ನು ಸಾರಸಗಟಾಗಿ ತಳ್ಳಿ ಹಾಕಿದ್ದಾರೆ.

ಇದುವರೆಗೂ ನಾನು ಯಾವುದೇ ಟಿಕೆಟ್‌ಗೆ ಅರ್ಜಿ ಹಾಕಿಲ್ಲ. 12 ನೇ ವಯಸ್ಸಿನಿಂದ ಆರ್‌ಎಸ್‌ಎಸ್‌ನಲ್ಲಿದ್ದೆ. ನನಗೆ ವಾಜಪೇಯಿ, ಅಡ್ವಾಣಿ ಅವರು 3 ಬಾರಿ ಅರ್ಜಿ ಹಾಕದೆ ಟಿಕೆಟ್‌ ನೀಡಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ನನಗೆ ಎಂಎಲ್‌ಸಿ ಟಿಕೆಟ್‌ ಕೇಳದೆ ನೀಡಿದ್ದರು. ಮೊನ್ನೆಯೂ ನಿಮ್ಮ ಹೆಸರನ್ನು ಅಂತಿಮಗೊಳಿಸಿದ್ದೇವೆ ಎಂದಿದ್ದರು. ಜಗದೀಶ್‌ ಶೆಟ್ಟರ್‌ ಅವರೂ ನನ್ನ ಮತ್ತು ರಾಜೀವ್‌ ಚಂದ್ರಶೇಖರ್‌ ಅವರ ಹೆಸರನ್ನು ಅಂತಿಮಗೊಳಿಸಿರುವುದಾಗಿ ದೂರವಾಣಿ ಕರೆ ಮಾಡಿದ್ದರು.

ಈಗ ಆಯ್ಕೆಯಾಗಿರುವ ರಾಜೀವ್‌ ಚಂದ್ರಶೇಖರ್‌ ಅವರು ನನ್ನ ಆತ್ಮೀಯ ಸ್ನೇಹಿತ. 2 ಬಾರಿ ಪಕ್ಷೇತರರಾಗಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದವರು. ಇದು ಸುಲಭದ ಮಾತಲ್ಲ. ಅವರು ನನಗಿಂತ ಹೆಚ್ಚು ಶೈಕ್ಷಣಿಕ ಅರ್ಹತೆ ಹೊಂದಿದ್ದಾರೆ. ಅವರಿಗೆ ಅನುಭವವೂ ಇದೆ. ಕೇರಳದಲ್ಲಿ ಬಿಜೆಪಿ ಕಟ್ಟಲು ಅವರ ಕೊಡುಗೆಯೂ ಸಿಗಲಿದೆ ಎಂದರು.

ರಾಜ್ಯಸಭೆಯಲ್ಲಿ ಕನ್ನಡ, ಕನ್ನಡಿಗ ಎಂಬ ವಾದಕ್ಕೆ ಅರ್ಥವಿಲ್ಲ. ರಾಜೀವ ಚಂದ್ರಶೇಖರ್ ಮಂಗಳೂರಿನಲ್ಲಿಯೇ ಓದಿದ್ದಾರೆ. ಅವರೂ ಕನ್ನಡಿಗರು. ಅಲ್ಲದೆ ಅವರ ತಂದೆ ಬಿಜೆಪಿ, ಜನಸಂಘವನ್ನು ಕಟ್ಟಿದವರಲ್ಲಿ ಒಬ್ಬರಾಗಿದ್ದರು. ಕನ್ನಡಿಗರಲ್ಲ ಎಂಬ ಕಾರಣ ನೀಡಿ ವೆಂಕಯ್ಯ ನಾಯ್ಡು ಅವರಿಗೆ ಮೂರನೇ ಅವಧಿಗೆ ರಾಜ್ಯಸಭೆ ಟಿಕೆಟ್ ನೀಡಲಿಲ್ಲ. ಅವರು ರಾಜಸ್ಥಾನದಿಂದ ರಾಜ್ಯಸಭೆಗೆ ಆಯ್ಕೆಯಾಗಿ ನಗರಾಭಿವೃದ್ಧಿ ಸಚಿವರಾದರು.

ನಮ್ಮ ರಾಜ್ಯದಿಂದ ಆಯ್ಕೆಯಾಗಿದ್ದರೆ ರಾಜ್ಯಕ್ಕೆ ಇನ್ನೂ ಹೆಚ್ಚಿನ ಪ್ರಯೋಜನ ಸಿಗುತ್ತಿತ್ತು ಎಂದೂ ಸಂಕೇಶ್ವರ ಹೇಳಿದರು.

ಇಂದು ಓದಿದ ಹೆಚ್ಚು ಸುದ್ದಿಗಳು
►►ತಮಿಳುನಾಡಿನಲ್ಲಿ ಭೀಕರ ಸರಣಿ ಅಪಘಾತ: ಕರ್ನಾಟಕದ ಐವರು ಮೃತ್ಯು:
http://bit.ly/2p8Pt8Y
►►ರಾಜ್ಯದ ಮೊದಲ ಸ್ಕೂಬಾ ಡೈವಿಂಗ್ ತರಬೇತಿ ಕೇಂದ್ರಕ್ಕೆ ನಟಿಯರಿಂದ ಚಾಲನೆ: http://bit.ly/2Do6aBH
►►ಮುಖ್ಯ ಕಾರ್ಯದರ್ಶಿಗೆ ಎಜಿಡಿಪಿ ಪತ್ರ: ಶಿಸ್ತು ಕ್ರಮಕ್ಕೆ ಸಿದ್ದರಾಮಯ್ಯ ಸೂಚನೆ?: http://bit.ly/2p4OSFg
►►ಪಬ್ ದಾಳಿ ತೇಜೋವಧೆ. ಬಿಜೆಪಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಪ್ರಮೋದ್ ಮುತಾಲಿಕ್: http://bit.ly/2HqxGky
►►ಟಿಪ್ಪರ್‌ಗೆ ಢಿಕ್ಕಿಯಾದ ಹಣ ಸಾಗಾಟ ವಾಹನ: ಇಬ್ಬರಿಗೆ ಗಾಯ: http://bit.ly/2tDa5ee
►►ಮಂಗಳೂರು ಪಬ್ ದಾಳಿ- ಸಾಕ್ಷಾಧಾರಗಳ ಕೊತೆಯಿಂದ ಎಲ್ಲರೂ ಖುಲಾಸೆ http://bit.ly/2DmoU4p

Related Tags: Karnataka Rajya Sabha, Vijay Sankeshwar, BJP, Hubli, Pressmeet, Rajeev Chandrashekhar, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ