ತಮಿಳುನಾಡಿನಲ್ಲಿ ಭೀಕರ ಸರಣಿ ಅಪಘಾತ: ಕರ್ನಾಟಕದ ಐವರು ಮೃತ್ಯು

ಕರಾವಳಿ ಕರ್ನಾಟಕ ವರದಿ

ತಮಿಳುನಾಡು:
ಇಲ್ಲಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ಬಳಿ ಇಂದು ನಸುಕಿನ ಜಾವ ನಡೆದ ಭೀಕರ ಸರಣಿ ಅಪಘಾತದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಐವರು ಸಾವನ್ನಪ್ಪಿರುವ ದಾರುಣ ಘಟನೆ ವರದಿಯಾಗಿದೆ.

ಮೃತರಲ್ಲಿ ಸುಮತಿ (45) ಶಂಕರ್ (50) ಸುಮತಿ, ಮಣಿ ಮತ್ತು ಕುಬೇರನ್ ಇವರೆಲ್ಲರೂ ಬೆಂಗಳೂರಿನ ಲಕ್ಷ್ಮೀನಾರಾಯಣಪುರ ನಿವಾಸಿಗಳೆಂದು ತಿಳಿದುಬಂದಿದೆ. ಗಾಯಗೊಂಡಿರುವ ಆನಂದ್ ಸ್ಥಿತಿ ಗಂಭೀರವಾಗಿದ್ದು ಅವರನ್ನು ಕೃಷ್ಣಗಿರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಕೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರಿನ ಪ್ರಯಾಣಿಕರು ಚೆನ್ನೈ ನಲ್ಲಿ ತಮ್ಮ ಸಂಬಂಧಿಕರ ಮನೆಯಿಂದ ವಾಪಸು ಬರುತಿದ್ದ ವೇಳೆ ಎದುಗಡೆಯಿಂದ ಹೋಗುತಿದ್ದ ಲಾರಿಯೊಂದು ರಸ್ತೆಯ ಡಿವೈಡರಿಗೆ ಢಿಕ್ಕಿ ಹೊಡೆದಿತ್ತು.

ಈ ವೇಳೆಯಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಲಾರಿಗೆ ಢಿಕ್ಕಿ ಹೊಡೆದಿತ್ತು. ಈ ಸಂದರ್ಭ ಕಾರಿನ ಹಿಂಬದಿಯಲ್ಲಿದ್ದ KSRTC ಬಸ್ಸು ಕಾರಿಗೆ ಹಿಂದಿನಿಂದ ಢಿಕ್ಕಿ ಹೊಡೆದಿದ್ದು, ಲಾರಿ ಮತ್ತು ಬಸ್ಸಿನ ನಡುವೆ ಸಿಲುಕಿಕೊಂಡ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಬಸ್ ನಲ್ಲಿದ್ದ 15 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಶೂಳಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

ಇಂದು ಓದಿದ ಹೆಚ್ಚು ಸುದ್ದಿಗಳು
►►ರಾಜ್ಯದ ಮೊದಲ ಸ್ಕೂಬಾ ಡೈವಿಂಗ್ ತರಬೇತಿ ಕೇಂದ್ರಕ್ಕೆ ನಟಿಯರಿಂದ ಚಾಲನೆ:
http://bit.ly/2Do6aBH
►►ಮುಖ್ಯ ಕಾರ್ಯದರ್ಶಿಗೆ ಎಜಿಡಿಪಿ ಪತ್ರ: ಶಿಸ್ತು ಕ್ರಮಕ್ಕೆ ಸಿದ್ದರಾಮಯ್ಯ ಸೂಚನೆ?: http://bit.ly/2p4OSFg
►►ಪಬ್ ದಾಳಿ ತೇಜೋವಧೆ. ಬಿಜೆಪಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಪ್ರಮೋದ್ ಮುತಾಲಿಕ್: http://bit.ly/2HqxGky
►►ಟಿಪ್ಪರ್‌ಗೆ ಢಿಕ್ಕಿಯಾದ ಹಣ ಸಾಗಾಟ ವಾಹನ: ಇಬ್ಬರಿಗೆ ಗಾಯ: http://bit.ly/2tDa5ee
►►ಮಂಗಳೂರು ಪಬ್ ದಾಳಿ- ಸಾಕ್ಷಾಧಾರಗಳ ಕೊತೆಯಿಂದ ಎಲ್ಲರೂ ಖುಲಾಸೆ http://bit.ly/2DmoU4p
►►ಪತ್ರಕರ್ತೆ ಗೌರಿ ಲಂಕೇಶ್ ಬರ್ಬರ ಹತ್ಯೆ ಪ್ರಕರಣ, ಹೊಟ್ಟೆಮಂಜನ ಮಂಪರು ಪರೀಕ್ಷೆಗೆ ಕೋರ್ಟ್ ಅನುಮತಿ http://bit.ly/2Gk0prX
►►71 ಮಂದಿ ಇದ್ದ ಬಾಂಗ್ಲಾ ವಿಮಾನ ನೇಪಾಳದಲ್ಲಿ ಪತನ: ಹಲವರ ಸಾವಿನ ಶಂಕೆ: http://bit.ly/2p8OZPH
►►ಹಿಂದೂ-ಮುಸ್ಲಿಂ ಸಹಪಾಠಿಯರ ಫೋಟೊ ದುರ್ಬಳಕೆ ಮಾಡಿ ಲವ್ ಜಿಹಾದ್ ಪುಕಾರು: ಓರ್ವನ ಬಂಧನ: http://bit.ly/2p9pYnd

Related Tags: Series Accident, Krishnagiri Accident, Shoolagiri Police, Five Death, Bangalore, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ