ರಾಜ್ಯದ ಮೊದಲ ಸ್ಕೂಬಾ ಡೈವಿಂಗ್ ತರಬೇತಿ ಕೇಂದ್ರಕ್ಕೆ ನಟಿಯರಿಂದ ಚಾಲನೆ

ರವಿತೇಜ ಕಾರವಾರ/ಕರಾವಳಿ ಕರ್ನಾಟಕ ವರದಿ

ಕಾರವಾರ:
ದೇಶದಲ್ಲಿಯೇ ಅತಿ ವಿರಳವಾಗಿರುವ ಸ್ಕೂಬಾ ಡೈವಿಂಗ್ ತರಬೇತಿಯನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿನ ಅರಬ್ಬೀ ಸಮುದ್ರದಲ್ಲಿರುವ ದೇವಗಡ ಗುಡ್ಡದ ಬಳಿ ಆರಂಭಿಸಲಾಗುತ್ತಿದ್ದು, ಸೋಮವಾರ ನಗರದ ಸದಾಶಿವಗಡದಲ್ಲಿ ಇದರ ತರಬೇತಿ ಕೇಂದ್ರದ ನೂತನ ಕಚೇರಿಯನ್ನು ಸ್ಯಾಂಡಲ್‌ವುಡ್ ನಟಿಯರಾದ ಶುಭಾ ಪೂಂಜಾ ಹಾಗೂ ಸುಕೃತಾ (ಅಂಜನಾ)ದೇಶಪಾಂಡೆ ಉದ್ಘಾಟಿಸಿದರು.

ಬಳಿಕ ಮಾತನಾಡಿದ ನಟಿ ಶುಭಾ ಪೂಂಜಾ, 2008ರಲ್ಲಿ ಮೊಗ್ಗಿನ ಮನಸ್ಸು ಸಿನೆಮಾ ಚಿತ್ರೀಕರಣದ ವೇಳೆ ಕಾರವಾರಕ್ಕೆ ಆಗಮಿಸಿದಾಗ ಇಲ್ಲಿನ ಕಡಲತೀರ, ಪರಿಸರವನ್ನು ನೋಡಲು ಅವಕಾಶ ದೊರೆತಿತ್ತು. ಆದರೆ ಇದೀಗ ಸ್ಕೂಬಾ ಡೈವಿಂಗ್ ಕೇಂದ್ರದ ಉದ್ಘಾಟನೆ ಜತೆಗೆ ಮತ್ತೊಮ್ಮೆ ಇಲ್ಲಿನ ಸೌಂದರ್ಯ ಸವೆಯಲು ಅವಕಾಶ ಸಿಕ್ಕಿರುವುದು ಅದೃಷ್ಟ. ಪ್ರವಾಸೋದ್ಯಮಕ್ಕೆ ಪೂರಕವಾಗಿರುವ ಸ್ಕೂಬಾ ಡೈವಿಂಗನನ್ನು ಈ ಹಿಂದೆ ನ್ಯೂಯಾರ್ಕ್, ಶ್ರೀಲಂಕಾ ಸೇರಿದಂತೆ ಇನ್ನಿತರ ವಿದೇಶಿ ಸ್ಥಳಗಳಿಗೆ ತೆರಳಬೇಕಿತ್ತು. ಆದರೆ ಇದೀಗ ನಮ್ಮ ಜಿಲ್ಲೆಯಲ್ಲಿಯೇ ಸ್ಕೂಬಾಗೆ ತೆರಳಿ ಅದ್ಬುತ ಅನುಭವ ದೊರೆತಿದೆ. ಅದರಲ್ಲೂ ಕಾರವಾರದಲ್ಲಿ ಸ್ಕೂಬಾ ನೋಡುವುದರ ಜತೆಗೆ ಅದರ ತರಬೇತಿ ಪಡೆದು ಉದ್ಯೋಗ ಪಡೆಯುವ ಒಂದು ಉತ್ತಮ ಅವಕಾಶ ಕಲ್ಪಿಸಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಅಲ್ಲದೆ ತಾನು ಕೂಡ ಮುಂದಿನ ದಿನಗಳಲ್ಲಿ ಇಲ್ಲಿಗೆ ಬಂದು ಸ್ಕೂಬಾ ಡೈವಿಂಗ್ ನಡೆಸುವುದಾಗಿ ತಿಳಿಸಿದರು.

ನಟಿ ಸುಕೃತಾ ದೇಶಪಾಂಡೆ ಮಾತನಾಡಿ, ಕಾರವಾರಕ್ಕೆ ಆಗಮಿಸುತ್ತಿರುವುದು ಇದೇ ಮೊದಲ ಭಾರಿ. ಆದರೆ ಇಲ್ಲಿನ ಸ್ವಚ್ಛತೆ ನೋಡಿ ಖುಷಿಯಾಗಿದೆ. ಯುವ ಜನತೆಯನ್ನು ಆಕರ್ಷಿಸುವ ಈ ಸ್ಕೂಬಾ ಡೈವಿಂಗ್ ಇದೀಗ ನಮ್ಮ ರಾಜ್ಯದ ಕಾರವಾರದಲ್ಲಿ ಆರಂಭಗೊಂಡಿರುವುದು ಹೆಮ್ಮೆಯ ಸಂಗತಿ. ಇದರ ಸದುಪಯೋಗವನ್ನು ಎಲ್ಲರೂ ಪಡೆಯಬೇಕು. ನಾನು ಕೂಡ ಇಲ್ಲಿಗೆ ಬಂದು ಸ್ಕೂಬಾ ಡೈವಿಂಗ್ ತರಬೇತಿ ಪಡೆಯುತ್ತೇನೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಮಾತನಾಡಿ, ಪ್ರವಾಸೋದ್ಯಮಕ್ಕೆ ಪೂರಕವಾಗಿರುವ ಸ್ಕೂಬಾ ಡೈವಿಂಗ್‌ ಅನ್ನು ಈಗಾಗಲೇ ಭಟ್ಕಳದ ನೇತ್ರಾಣಿ ದ್ವೀಪದ ಬಳಿ ನಡೆಸಲಾಗುತ್ತಿದೆ. ಆದರೆ ಇದೀಗ ಕಾರವಾರದಲ್ಲಿ ಸ್ಕೂಬಾ ಡೈವಿಂಗ್ ಜತೆಗೆ ಇಲ್ಲಿನ ಆಸಕ್ತರಿಗೆ ತರಬೇತಿಯನ್ನು ನೀಡಿ ಆ ಮೂಲಕ ಇದರಲ್ಲಿ ಉದ್ಯೋಗವಕಾಶವನ್ನು ಪಡೆದುಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತಿದೆ. ಇದಕ್ಕೆ ಸದಾಶಿವಗಡದ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ(ಜೇತ್ನಾ)ಗೆ ಸೇರಿದ ಕಟ್ಟಡವನ್ನು ಜಿಲ್ಲಾಡಳಿತ ತನ್ನ ಸುಪರ್ದಿಗೆ ಪಡೆದು, ದೇವಬಾಗ್ ಬೀಚ್ ರೆಸಾರ್ಟ್‌ನವರಿಗೆ ಹಸ್ತಾಂತರಿಸಿದೆ.ಅಲ್ಲಿ ನೂತನವಾಗಿ ಇದರ ತರಬೇತಿ ಕೇಂದ್ರ ಸ್ಥಾಪಿಸಲಾಗಿದೆ. ಇದರಿಂದ ಪ್ರವಾಸಿಗರಿಗೆ ಹೆಚ್ಚು ಅನುಕೂಲವಾಗಲಿದೆ. ಜತೆಗೆ ಸದಾಶಿವಗಡದಲ್ಲಿ ಪ್ಯಾರಾ ಪವರ್ ಗ್ಲೈಡಿಂಗ್ ಕೂಡ ಆರಂಭಿಸುತಿದ್ದು, ಇದು ಸಾಹಸಿಗರಿಗೆ ರೊಮಾಂಚನಕಾರಿ ಅನುಭವ ನೀಡಲಿದೆ ಎಂದು ಹೇಳಿದರು.

ಕಾರ್ಯಕ್ರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ್. ವಿ. ಪಾಟೀಲ್, ಅಪರ ಜಿಲ್ಲಾಧಿಕಾರಿ ಎಚ್ ಪ್ರಸನ್ನ, ಪ್ರವಾಸೋದ್ಯಮ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಯೋಗೇಶ್ವರ ಉಪಸ್ಥಿತರಿದ್ದರು.

ಬಾರ್ನ್‌ವೈಲ್ಡ್ ಅಡ್ವೆಂಚರ್ಸ್ ಸಂಸ್ಥೆಗೆ ಟೆಂಡರ್
ಜಿಲ್ಲಾಡಳಿತವು ಕಳೆದ ಎರಡು ವರ್ಷದ ಹಿಂದೆ ಸಮುದ್ರದಾಳದ ಅಪರೂಪದ ಜೀವರಾಶಿಗಳನ್ನು ಕಣ್ತುಂಬಿಕೊಳ್ಳಲು ಭಟ್ಕಳದ ನೇತ್ರಾಣಿ ದ್ವೀಪದ ಬಳಿ ಅವಕಾಶ ಕಲ್ಪಿಸಿದೆ. ಆದರೆ ಇದೀಗ ಜಿಲ್ಲಾಡಳಿತ ಒಂದು ಹೆಜ್ಜೆ ಮುಂದೆ ಸಾಗಿದ್ದು, ಇನ್ನಷ್ಟು ಜನರಿಗೆ ಅನುಕೂಲವಾಗುವಂತೆ ದೇವಗಡದ ಲೈಟ್‌ಹೌಸ್ ಬಳಿ ಸ್ಕೂಬಾಗೆ ಪ್ರಸಕ್ತ ಜಾಗವನ್ನು ಹುಡುಕಿದೆ. ಅಲ್ಲದೆ ಇಲ್ಲಿ ಸ್ಕೂಬಾ ಡೈವಿಂಗ್ ಜತೆಗೆ ತರಬೇತಿ ನೀಡಲು ಮುಂದಾಗಿದ್ದು, ಮುಂಬೈ ಮೂಲದ ಬಾರ್ನ್ ವೈಲ್ಡ್ ಅಡ್ವೆಂಚರ್ಸ್ ಸಂಸ್ಥೆ ಟೆಂಡರ್ ಪಡೆದುಕೊಂಡಿದೆ. ಇದರಿಂದ ವಿಶ್ವದ ವಿವಿಧೆಡೆಯಿಂದ ಪ್ರವಾಸಿಗರು ಇಲ್ಲಿಗೆ ಬಂದು ಸಾಗರದಡಿಯ ಅಪರೂಪದ ಜೀವರಾಶಿಯನ್ನು ಕಣ್ತುಂಬಿಕೊಂಡು ಸ್ಕೂಬಾ ತರಬೇತಿಯನ್ನು ಪಡೆಯಬಹುದಾಗಿದೆ.

ದೇಶದಲ್ಲಿ ಸ್ಕೂಬಾ ತರಬೇತಿ ಸ್ಥಳಗಳು ವಿರಳ
ಬಾರ್ನ್ ವೈಲ್ಡ್ ಅಡ್ವೆಂಚರ್ಸ್ ಸಂಸ್ಥೆಯ ತರಬೇತುದಾರ ರಂಜಿತ್ ಪೂಂಜಾ ಮಾಹಿತಿ ನಿಡಿ ಸ್ಕೂಬಾ ಡೈವಿಂಗ್ ಮಾಡಲು ಅಗತ್ಯವಿರುವ ತರಬೇತಿಗಳನ್ನು ನೀಡುವ ಕೇಂದ್ರಗಳು ದೇಶದಲ್ಲಿ ಅತಿ ವಿರಳವಾಗಿವೆ. ಪಾಂಡಿಚೇರಿ, ಗೋವಾ ಬಿಟ್ಟರೆ, ಬಹುತೇಕ ಆಸಕ್ತರು ಹೊರ ದೇಶಗಳನ್ನೇ ಅವಲಂಬಿಸಿದ್ದಾರೆ.

ಇಲ್ಲಿಯ ಹೆಚ್ಚಿನವರು ಥೈಲ್ಯಾಂಡ್, ಮಲೇಷಿಯಾ, ದುಬೈ, ಆಸ್ಪ್ರೇಲಿಯಾ ಮೊದಲಾದೆಡೆ ಇರುವ ಕೇಂದ್ರಗಳಲ್ಲಿ ದ್ವಿಗುಣ ಶುಲ್ಕ ನೀಡಿ ಸ್ಕೂಬಾ ಡೈವಿಂಗ್ ಕಲಿಯುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಇಲ್ಲಿ ತರಬೇತಿ ಕೇಂದ್ರ ಸ್ಥಾಪನೆ ಮಾಡಿರುವುದರಿಂದ ಇದೀಗ ಸಾಕಷ್ಟು ಸ್ಕೂಬಾ ಪ್ರಿಯರಿಗೆ ಸಹಾಯವಾಗಲಿದೆ. ಅಲ್ಲದೆ ಸ್ಕೂಬಾ ಡೈವಿಂಗ್ ತರಬೇತಿ ನೀಡಲು ಪ್ಯಾಡಿ ಸಂಸ್ಥೆಯ ಪ್ರಮಾಣಪತ್ರ ಅಗತ್ಯ. ಪ್ಯಾಡಿ ಅಡಿ ಬರುವ ಎಲ್ಲ ಕೋರ್ಸುಗಳ ತರಬೇತಿಯನ್ನು ಇಲ್ಲಿ ನೀಡಲಾಗುತ್ತದೆ. ತರಬೇತಿ ಪೂರ್ಣಗೊಳಿಸಿದವರಿಗೆ ಆಸ್ಪ್ರೇಲಿಯಾದಲ್ಲಿರುವ ಸಂಸ್ಥೆಯಿಂದಲೇ ನೇರವಾಗಿ ಪ್ರಮಾಣ ಪತ್ರ ನೀಡಲಾಗುತ್ತದೆ ಎಂದರು.

ಇದನ್ನೂ ಓದಿ:
►►ಸಾಗರದಾಳದಲ್ಲಿ ಸ್ಕೂಬಾ ಡೈವಿಂಗ್ ಮೂಲಕ ದಂಪತಿಯ 'ಹ್ಯಾಪಿ ಆನಿವರ್ಸರಿ':
http://bit.ly/2HaKrQJ

ಇಂದು ಓದಿದ ಹೆಚ್ಚು ಸುದ್ದಿಗಳು
►►ಮುಖ್ಯ ಕಾರ್ಯದರ್ಶಿಗೆ ಎಜಿಡಿಪಿ ಪತ್ರ: ಶಿಸ್ತು ಕ್ರಮಕ್ಕೆ ಸಿದ್ದರಾಮಯ್ಯ ಸೂಚನೆ?:
http://bit.ly/2p4OSFg
►►ಪಬ್ ದಾಳಿ ತೇಜೋವಧೆ. ಬಿಜೆಪಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಪ್ರಮೋದ್ ಮುತಾಲಿಕ್: http://bit.ly/2HqxGky
►►ಟಿಪ್ಪರ್‌ಗೆ ಢಿಕ್ಕಿಯಾದ ಹಣ ಸಾಗಾಟ ವಾಹನ: ಇಬ್ಬರಿಗೆ ಗಾಯ: http://bit.ly/2tDa5ee
►►ಮಂಗಳೂರು ಪಬ್ ದಾಳಿ- ಸಾಕ್ಷಾಧಾರಗಳ ಕೊತೆಯಿಂದ ಎಲ್ಲರೂ ಖುಲಾಸೆ http://bit.ly/2DmoU4p
►►ಪತ್ರಕರ್ತೆ ಗೌರಿ ಲಂಕೇಶ್ ಬರ್ಬರ ಹತ್ಯೆ ಪ್ರಕರಣ, ಹೊಟ್ಟೆಮಂಜನ ಮಂಪರು ಪರೀಕ್ಷೆಗೆ ಕೋರ್ಟ್ ಅನುಮತಿ http://bit.ly/2Gk0prX
►►71 ಮಂದಿ ಇದ್ದ ಬಾಂಗ್ಲಾ ವಿಮಾನ ನೇಪಾಳದಲ್ಲಿ ಪತನ: ಹಲವರ ಸಾವಿನ ಶಂಕೆ: http://bit.ly/2p8OZPH
►►ಹಿಂದೂ-ಮುಸ್ಲಿಂ ಸಹಪಾಠಿಯರ ಫೋಟೊ ದುರ್ಬಳಕೆ ಮಾಡಿ ಲವ್ ಜಿಹಾದ್ ಪುಕಾರು: ಓರ್ವನ ಬಂಧನ: http://bit.ly/2p9pYnd

Related Tags: Scuba Diving, Inauguration, Actress Shubha Punja, Sukritha,Karwar, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ