ಮುಖ್ಯ ಕಾರ್ಯದರ್ಶಿಗೆ ಎಜಿಡಿಪಿ ಪತ್ರ: ಶಿಸ್ತು ಕ್ರಮಕ್ಕೆ ಸಿದ್ದರಾಮಯ್ಯ ಸೂಚನೆ?

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ರಾಜಕೀಯ ಹಸ್ತಕ್ಷೇಪದಿಂದಾಗಿ ಪೊಲೀಸ್‌ ವ್ಯವಸ್ಥೆಯೇ ಸರಿ ಇಲ್ಲ ಎಂಬ ಭಾವನೆ ಮೂಡುವಂತಾಗಿದೆ ಎಂದು ಎಡಿಜಿಪಿ ಆರ್‌.ಪಿ. ಶರ್ಮಾ ಬರೆದ ಪತ್ರದ ಕುರಿತು ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ವಿವರಣೆ ಕೇಳಿದ್ದಾರೆ.

ಪೊಲೀಸ್‌ ಇಲಾಖೆಯಲ್ಲಿ ರಾಜಕೀಯ ಹಸ್ತಕ್ಷೇಪವಿದೆ ಎಂಬ ಆರೋಪ ಕುರಿತು ಐಪಿಎಸ್ ಅಧಿಕಾರಿಗಳ ಸಂಘ ನಿರ್ಣಯ ಕೈಗೊಂಡಿದೆಯೇ, ಕೈಗೊಂಡಿದ್ದಾದರೆ ಎಷ್ಟು ಸದಸ್ಯರು ಸಹಿ ಮಾಡಿದ್ದಾರೆ, ಒಂದು ವೇಳೆ ನಿರ್ಣಯ ಆಗಿದ್ದರೆ ನಡಾವಳಿ ಪ್ರತಿಯನ್ನು ಸಲ್ಲಿಸಿ, ಅದರ ಆಧಾರದಲ್ಲಿ ನೀವು ಪತ್ರ ಬರೆದಿದ್ದೀರಾ ಎಂದು ಸಂಘದ ಅಧ್ಯಕ್ಷ ಎಡಿಜಿಪಿ ಆರ್.ಪಿ. ಶರ್ಮಾಗೆ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಪ್ರಶ್ನಿಸಿದ್ದಾರೆ.

ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭಾಗೆ ಅವರಿಗೆ ಶರ್ಮಾ ಬರೆದಿರುವ ಪತ್ರದಲ್ಲಿ, ರಾಜ್ಯ ಪೊಲೀಸರಿಗೆ ಇದ್ದ ಘನತೆಯನ್ನು ಮರಳಿ ತರಲು ಶೀಘ್ರದಲ್ಲೆ ಐಪಿಎಸ್‌ ಅಧಿಕಾರಿಗಳ ಸಭೆ ಆಯೋಜಿಸಬೇಕು ಎಂದು ಮನವಿ ಮಾಡಿದ್ದರು. ಐಪಿಎಸ್ ಅಸೋಷಿಯೇಷನ್​ನ ಅನೇಕ ಸದಸ್ಯರು ತಮಗೂ ಈ ಪತ್ರಕ್ಕೂ ಸಂಬಂಧ ಇಲ್ಲವೆಂದು ಹೇಳಿದ್ದು, ಅಸೋಷಿಯೇಷನ್​ನ ಈ ಪತ್ರ ಸರಕಾರಕ್ಕೂ ಇರಿಸುಮುರಿಸು ತಂದಿದೆ.

ಈ ಬೆಳವಣಿಗೆ ಬೆನ್ನಲ್ಲೆ ಗೃಹ ಸಚಿವ ರಾಮಲಿಂಗಾರೆಡ್ಡಿ ಹಾಗೂ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಭಾಷ್‌ಚಂದ್ರ ಜೊತೆ ಚರ್ಚೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಶರ್ಮಾ ಪತ್ರ ಕುರಿತಂತೆ ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಿದ್ದರು.

ಅಲ್ಲದೇ ಹದ್ದು ಮೀರಿ ವರ್ತಿಸುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವಂತೆ ರತ್ನಪ್ರಭಾ ಮತ್ತು ನೀಲಮಣಿ ಅವರಿಗೆ ಮುಖ್ಯಮಂತ್ರಿ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

ನಿಮ್ಮ ಸಮಸ್ಯೆಗಳು ಏನೇ ಇದ್ದರೂ ನನ್ನ ಬಳಿ ಹೇಳಿ. ಈ ರೀತಿ ಪತ್ರ ಬರೆದು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ನಿಮ್ಮ ಉದ್ದೇಶವಾದರೂ ಏನು. ಚುನಾವಣೆ ಸಂದರ್ಭದಲ್ಲಿ ಈ ರೀತಿಯ ವರ್ತನೆಯನ್ನು ಏನೆಂದು ಅರ್ಥ ಮಾಡಿಕೊಳ್ಳಬೇಕು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಇಂದು ಓದಿದ ಹೆಚ್ಚು ಸುದ್ದಿಗಳು
►►ಪಬ್ ದಾಳಿ ತೇಜೋವಧೆ. ಬಿಜೆಪಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಪ್ರಮೋದ್ ಮುತಾಲಿಕ್:
http://bit.ly/2HqxGky
►►ಟಿಪ್ಪರ್‌ಗೆ ಢಿಕ್ಕಿಯಾದ ಹಣ ಸಾಗಾಟ ವಾಹನ: ಇಬ್ಬರಿಗೆ ಗಾಯ: http://bit.ly/2tDa5ee
►►ಮಂಗಳೂರು ಪಬ್ ದಾಳಿ- ಸಾಕ್ಷಾಧಾರಗಳ ಕೊತೆಯಿಂದ ಎಲ್ಲರೂ ಖುಲಾಸೆ http://bit.ly/2DmoU4p
►►ಪತ್ರಕರ್ತೆ ಗೌರಿ ಲಂಕೇಶ್ ಬರ್ಬರ ಹತ್ಯೆ ಪ್ರಕರಣ, ಹೊಟ್ಟೆಮಂಜನ ಮಂಪರು ಪರೀಕ್ಷೆಗೆ ಕೋರ್ಟ್ ಅನುಮತಿ http://bit.ly/2Gk0prX
►►71 ಮಂದಿ ಇದ್ದ ಬಾಂಗ್ಲಾ ವಿಮಾನ ನೇಪಾಳದಲ್ಲಿ ಪತನ: ಹಲವರ ಸಾವಿನ ಶಂಕೆ: http://bit.ly/2p8OZPH
►►ಹಿಂದೂ-ಮುಸ್ಲಿಂ ಸಹಪಾಠಿಯರ ಫೋಟೊ ದುರ್ಬಳಕೆ ಮಾಡಿ ಲವ್ ಜಿಹಾದ್ ಪುಕಾರು: ಓರ್ವನ ಬಂಧನ: http://bit.ly/2p9pYnd

Related Tags: Police Force, Political, Siddaramaiah, ADGP, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ