ಪಬ್ ದಾಳಿ ತೇಜೋವಧೆ. ಬಿಜೆಪಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಪ್ರಮೋದ್ ಮುತಾಲಿಕ್
ಯಾರೋ ಬಿಜೆಪಿ ಕಾರ್ಯಕರ್ತರು ಯಾರ ಮೇಲೋ ದಾಳಿಗೈದರೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನನ್ನು ನೀವು ಬಂಧಿಸುತ್ತೀರಾ?: ಮುತಾಲಿಕ್ ಪ್ರಶ್ನೆ

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ಸಾಕ್ಷ್ಯಾಧಾರಗಳ ಕೊರತೆಯಿಂದ ರಾಷ್ಟ್ರಮಟ್ಟದಲ್ಲಿ ಭಾರೀ ಸುದ್ದಿಯಾಗಿದ್ದ ಪಬ್ ದಾಳಿ ಪ್ರಕರಣದಿಂದ ದೋಷಮುಕ್ತಗೊಂಡ ಬೆನ್ನಲ್ಲೇ ಪತ್ರಿಕಾಗೋಷ್ಠಿ ನಡೆಸಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಈ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿ ಅಂದು ಆಡಳಿತದಲ್ಲಿದ್ದ ಬಿಜೆಪಿಯು ತನ್ನನ್ನು ಸಿಲುಕಿಸಿತು ಎಂದು ಆರೋಪಿಸಿದ್ದು, ನನ್ನ ತೇಜೋವಧೆ ಮಾಡುವ ಉದ್ದೇಶದಿಂದ ತನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಯಿತು. ಈ ಬಗ್ಗೆ ತಾನು ವಕೀಲರ ಸಲಹೆ ಪಡೆದು ಬಿಜೆಪಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾರೋ ಬಿಜೆಪಿ ಕಾರ್ಯಕರ್ತರು ಯಾರ ಮೇಲೋ ದಾಳಿಗೈದರೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನನ್ನು ನೀವು ಬಂಧಿಸುತ್ತೀರಾ? ಕಾಂಗ್ರೆಸ್ ಕಾರ್ಯಕರ್ತರು ದಾಳಿಗೈದರೆ ನೀವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜೈಲಿಗೆ ಕಳಿಸುತ್ತೀರಾ? ನನ್ನನ್ನು ಮಾತ್ರ ಯಾಕೆ ಜೈಲಿಗೆ ಕಳಿಸಿದಿರಿ ಎಂದು ಮುತಾಲಿಕ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಈ ಪ್ರಕರಣದಲ್ಲಿ ನನ್ನನ್ನು ಬಂಧಿಸುವಂತೆ ಬಿಜೆಪಿಯು ಪೊಲೀಸರಿಗೆ ನಿರ್ದೇಶನ ನೀಡಿತು. ಪಬ್ ದಾಳಿ ಸಂದರ್ಭ ನಾನು ಮಹಾರಾಷ್ಟ್ರದಲ್ಲಿದ್ದೆ. ಎರಡು ದಿನಗಳ ಬಳಿಕ ಮರಳಿದ್ದೆ. ಬಿಜೆಪಿ ಸರಕಾರದ ಅಧೀನದಲ್ಲಿದ್ದ ಪೊಲೀಸರು ನನ್ನನ್ನು ಬಂಧಿಸಿ ಹದಿನಾರು ದಿನ ನನ್ನನ್ನು ಜೈಲಿಗೆ ಅಟ್ಟಿದ್ದರು.

ಈ ಪ್ರಕರಣದಿಂದ ನಾನು ಭಾರೀ ಹಣ ಕಳೆದುಕೊಂಡೆ. ನನ್ನ ಸಮಯವೂ ಪೋಲಾಯಿತು ಮತ್ತು ಮಾನಸಿಕವಾಗಿಯೂ ನೊಂದೆ ಎಂದು ಮುತಾಲಿಕ್ ಅಂದಿನ ಘಟನಾವಳಿಗಳನ್ನು ಸ್ಮರಿಸಿದರು.

ಇದೇ ಸಂದರ್ಭದಲ್ಲಿ ಅವರು ಯುವತಿಯರ ಮೇಲೆ ಕಾರ್ಯಕರ್ತರು ಹಲ್ಲೆಗೈದುದು ತಪ್ಪು ಎಂದು ಹೇಳಿದರು. ನಾವು ಈ ಘಟನೆಯ ಬಗ್ಗೆ ನೊಂದೆವು ಮತ್ತು ಘಟನೆ ನಡೆದ ಕೆಲವೇ ದಿನಗಳಲ್ಲಿ ಯುವತಿಯರ ಕ್ಷಮೆ ಕೋರಿದೆವು. ಯುವತಿಯರಿಗೆ ಹಲ್ಲೆಗೈಯುವುದು ನಮ್ಮ ಉದ್ದೇಶವಾಗಿರಲಿಲ್ಲ.

ನಾವು ಮಹಿಳೆಯರನ್ನು ಮತ್ತು ಯುವತಿಯರನ್ನು ಗೌರವಿಸುತ್ತೇವೆ ಅವರಿಗೆ ಹಲ್ಲೆಗೈಯುವುದು ನಮ್ಮ ಉದ್ದೇಶ ಅಲ್ಲವೇ ಅಲ್ಲ. ಮದ್ಯ ಕುಡಿಯುವುದು ಪಬ್‌ಗಳಿಗೆ ಹೋಗುವುದು ನಮ್ಮ ಸಂಸ್ಕೃತಿಯಲ್ಲ ಎಂದು ಅವರಿಗೆ ತಿಳಿಸುವ ಉದ್ದೇಶದಿಂದ ಮಾತ್ರ ನಮ್ಮ ಕಾರ್ಯಕರ್ತರು ಅಮ್ನೇಶಿಯಾ ಪಬ್‌ಗೆ ಹೋಗಿದ್ದರು ಎಂದು ಮುತಾಲಿಕ್ ಹೇಳಿದರು.

ಇನ್ನೂ ಮುಂದೆಯೂ ವಿದೇಶಿ ಸಂಸ್ಕೃತಿ ವಿರುದ್ಧ ನಮ್ಮ ಅಭಿಯಾನ ಮುಂದುವರಿಯುತ್ತದೆ. ಆದರೆ ಯಾರ ಮೇಲೂ ಹಲ್ಲೆಗೈಯದೇ ಕಾನೂನು ಚೌಕಟ್ಟಿನಲ್ಲೇ ಅಭಿಯಾನ ನಡೆಸಲಾಗುವುದು ಎಂದು ಮುತಾಲಿಕ್ ನುಡಿದರು.

ಪಬ್‌ಗಳ ವಿರುದ್ಧ ಸರಕಾರ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮುತಾಲಿಕ್ ಇದೇ ಸಂದರ್ಭದಲ್ಲಿ ಪ್ರಶ್ನಿಸಿದರು. ಪಬ್ ದಾಳಿ ಬಳಿಕ ಅಮ್ನೇಶಿಯಾ ಪಬ್ ಕೆಲ ಸಮಯ ಮುಚ್ಚಲ್ಪಟ್ಟಿತ್ತು. ಈಗ ಅದೇ ಸ್ಥಳದಲ್ಲಿ ‘ರೊಲೆಕ್ಸ್’ ಎಂಬ ಇನ್ನೊಂದು ಪಬ್ ಅನ್ನು ಎಲ್ಲ ಪಕ್ಷಗಳ ಬೆಂಬಲದಿಂದ ಪಾಲಿಕೆ ಸದಸ್ಯರೋರ್ವರು ಒಬ್ಬರು ನಡೆಸುತ್ತಿದ್ದು, ರಾತ್ರಿ ಎರಡು ಗಂಟೆ ತನಕವೂ ಮದ್ಯ ನೀಡುತ್ತಾರೆ ಎಂಬುದು ನನಗೆ ತಿಳಿದಿದೆ. ಯಾಕೆ ಸರಕಾರ ಇಂಥ ಪಬ್ ವಿರುದ್ಧ ಕ್ರಮ ಜರುಗಿಸುತ್ತಿಲ್ಲ ಎಂದು ಮುತಾಲಿಕ್ ಅಸಮಾಧಾನ ವ್ಯಕ್ತಪಡಿಸಿದರು.

ನ್ಯಾಯಾಲಯದ ತೀರ್ಪು ಸತ್ಯ ಮತ್ತು ನ್ಯಾಯಕ್ಕೆ ಸಂದ ಜಯ ಎಂದು ವ್ಯಾಖ್ಯಾನಿಸಿದ ಮುತಾಲಿಕ್, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಹಿಂದೂ ಕಾರ್ಯಕರ್ತ ಕೆ.ಟಿ. ನವೀನ್ ಕುಮಾರ್ ಅವರನ್ನು ಅನ್ಯಾಯವಾಗಿ ಸಿಲುಕಿಸಲಾಗಿದೆ ಎಂದು ರಾಜ್ಯ ಸರಕಾರವನ್ನು ದೂರಿದರು.

ಮೂಡುಬಿದಿರೆಯ ಸಮಿತ್ ರಾಜ್ ವಿರುದ್ಧ ಗೂಂಡಾ ಕಾಯ್ದೆ ಬಳಸಿ ಆತನನ್ನು ಬೆಂಗಳೂರು ಜೈಲಿಗೆ ಅಟ್ಟಿರುವುದನ್ನೂ ಖಂಡಿಸುವೆ ಎಂದರು. ಸಮಿತ್ ರಾಜ್ ಅಕ್ರಮ ಜಾನುವಾರು ಸಾಗಾಟ ಮತ್ತು ಲವ್ ಜಿಹಾದ್ ವಿರುದ್ಧ ಹೋರಾಟ ನಡೆಸಿದ್ದ. ಆತ ಹಿಂದೂ ಸಂಸ್ಕೃತಿಯ ಉಳಿವಿಗಾಗಿ ಹೋರಾಡಿದ್ದ ಎಂದು ಮುತಾಲಿಕ್ ಹೇಳಿಕೊಂಡರು.


ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಜೀವನ್ ನೀರ್ಮಾರ್ಗ, ಪ್ರದೀಪ್ ಮೂಡುಶೆಡ್ಡೆ ಮತ್ತಿತರರು ಉಪಸ್ಥಿತರಿದ್ದರು. ಪತ್ರಿಕಾಗೋಷ್ಠಿ ಬಳಿಕ ಮುತಾಲಿಕ್ ಮತ್ತು ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಇಂದು ಓದಿದ ಹೆಚ್ಚು ಸುದ್ದಿಗಳು
►►ಟಿಪ್ಪರ್‌ಗೆ ಢಿಕ್ಕಿಯಾದ ಹಣ ಸಾಗಾಟ ವಾಹನ: ಇಬ್ಬರಿಗೆ ಗಾಯ:
http://bit.ly/2tDa5ee
►►ಮಂಗಳೂರು ಪಬ್ ದಾಳಿ- ಸಾಕ್ಷಾಧಾರಗಳ ಕೊತೆಯಿಂದ ಎಲ್ಲರೂ ಖುಲಾಸೆ http://bit.ly/2DmoU4p
►►ಪತ್ರಕರ್ತೆ ಗೌರಿ ಲಂಕೇಶ್ ಬರ್ಬರ ಹತ್ಯೆ ಪ್ರಕರಣ, ಹೊಟ್ಟೆಮಂಜನ ಮಂಪರು ಪರೀಕ್ಷೆಗೆ ಕೋರ್ಟ್ ಅನುಮತಿ http://bit.ly/2Gk0prX
►►71 ಮಂದಿ ಇದ್ದ ಬಾಂಗ್ಲಾ ವಿಮಾನ ನೇಪಾಳದಲ್ಲಿ ಪತನ: ಹಲವರ ಸಾವಿನ ಶಂಕೆ: http://bit.ly/2p8OZPH
►►ಹಿಂದೂ-ಮುಸ್ಲಿಂ ಸಹಪಾಠಿಯರ ಫೋಟೊ ದುರ್ಬಳಕೆ ಮಾಡಿ ಲವ್ ಜಿಹಾದ್ ಪುಕಾರು: ಓರ್ವನ ಬಂಧನ: http://bit.ly/2p9pYnd
►►ಸಮುದ್ರದಲ್ಲಿ ಒತ್ತಡ: ಮೀನುಗಾರಿಕೆಗೆ ತೆರಳದಂತೆ ಎಚ್ಚರಿಕೆ: http://bit.ly/2Ik8bTb
►►ಕಾರವಾರದಲ್ಲೊಂದು ವಿಶೇಷ ಜಾತ್ರೆ: ಇಲ್ಲಿ ದೇವರಿಗೆ ಹೆಂಡವೇ ನೈವೇದ್ಯ: http://bit.ly/2FBYrSI
►►ಮಧುಮೇಹ, ಬಿಪಿ ಇದ್ದರೆ ಇನ್ನು ಕುವೈಟ್ನಲ್ಲಿ ಕೆಲಸವಿಲ್ಲ: http://bit.ly/2HoNBQg
►►ರೈತನ ಉತ್ಸಾಹದ ನೃತ್ಯವನ್ನು ಸಿದ್ದರಾಮಯ್ಯ ನೃತ್ಯ ಎಂದು ಗೇಲಿ ಮಾಡಿದ ಹೆಗಡೆ ಅಭಿಮಾನಿಗಳು!: http://bit.ly/2Hq5Kx0
►►ಗೋಮಾಂಸ ತಿಂದಿಲ್ಲ, ತಿನ್ನಬೇಕು ಅನಿಸಿದರೆ ತಿನ್ನುತ್ತೇನೆ: ಸಿಎಂ ಸಿದ್ದರಾಮಯ್ಯ: http://bit.ly/2tFRkam

Related Tags: Pub Attack Case, Defamation Suit, Pramod Muthalik, Press Meet, Pub Attack, Pub Attack Case, All Acquitted, Lack Of Evidence, Kannada News, ಪಬ್ ದಾಳಿ, ಅಮ್ನೇಶಿಯಾ ಪಬ್ ಅಟ್ಯಾಕ್, ಶ್ರೀರಾಮ ಸೇನೆ, ಪ್ರಮೋದ ಮುತಾಲಿಕ್, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ