ಟಿಪ್ಪರ್‌ಗೆ ಢಿಕ್ಕಿಯಾದ ಹಣ ಸಾಗಾಟ ವಾಹನ: ಇಬ್ಬರಿಗೆ ಗಾಯ

ಕರಾವಳಿ ಕರ್ನಾಟಕ ವರದಿ

ಕುಂದಾಪುರ:
ಹೆದ್ದಾರಿಯಲ್ಲಿ ನಿಂತಿದ್ದ ಟಿಪ್ಪರ್ ಒಂದಕ್ಕೆ ಹಣ ಸಾಗಾಟದ ವಾಹನ ಢಿಕ್ಕಿ ಹೊಡೆದ ಪರಿಣಾಮ ಈರ್ವರು ಗಾಯಗೊಂಡ ಘಟನೆ ಇಲ್ಲಿನ ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.

ಹಣ ಸಾಗಾಟದ ವಾಹನದಲ್ಲಿದ್ದ ಕುಂದಾಪುರದ ಬಸ್ರೂರು ಮೂಲದವರಾದ ರಾಘವೇಂದ್ರ ಹಾಗೂ ರಾಜೇಶ್ ಎನ್ನುವವರಿಗೆ ಗಾಯಾಳುಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜೇಶ್‌ಗೆ ಕೈ ಕಾಲು, ಹೊಟ್ಟೆ ಹಾಗೂ ತಲೆ ಭಾಗಕ್ಕೆ ಗಂಭೀರ ಗಾಯಗಳಾಗಿವೆ.
 
ಮರಳು ತುಂಬಿದ್ದ ಟಿಪ್ಪರ್ ವಾಹನ ತೆಕ್ಕಟ್ಟೆ ಹೆದ್ದಾರಿಯಲ್ಲಿ ನಿಂತಿದ್ದು, ಈ ಸಂದರ್ಭ ಕೋಟ ಕಡೆಯಿಂದ ಸಾಗಿ ಬಂದ ಹಣ ಸಾಗಾಟದ ವಾಹನ ಟಿಪ್ಪರ್‌ಗೆ  ಡಿಕ್ಕಿಯಾಗಿತ್ತು.

ಢಿಕ್ಕಿಯ ತೀವ್ರತೆಗೆ ಹಣ ಸಾಗಾಟದ ವಾಹನ ಮುಂಭಾಗ ನಜ್ಜುಗುಜ್ಜಾದ ಪರಿಣಾಮ ಚಾಲಕ ರಾಘವೇಂದ್ರ ಹಾಗೂ ಸಿಬ್ಬಂದಿ ರಾಜೇಶ್ ವಾಹನದೊಳಗೆ ಸಿಲುಕಿದ್ದರು.

ಸ್ಥಳೀಯ ಯುವಕರ ಸತತ ಪರಿಶ್ರಮದಿಂದಾಗಿ ಇಬ್ಬರನ್ನೂ ವಾಹನದಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ. ಇನ್ನು ವಾಹನ ಚಲಾಯಿಸುತ್ತಿದ್ದ ರಾಘವೇಂದ್ರ ಅವರಿಗೂ ಗಾಯಗಳಾಗಿವೆ. ಟಿಪ್ಪರ್ ಚಾಲಕ ಪಾಂಡು ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ

ಘಟನೆ ಸಂಭವಿಸುತ್ತಲೇ ಸ್ಥಳಕ್ಕೆ ದೌಡಾಯಿಸಿದ ಮಾಜಿ ಜಿ.ಪಂ ಸದಸ್ಯ ಗಣಪತಿ ಟಿ. ಶ್ರೀಯಾನ್ ಸ್ಥಳೀಯ ಯುವಕರೊಂದಿಗೆ ಗಾಯಾಳುಗಳನ್ನು ವಾಹನದಿಂದ ಹೊರತೆಗೆಯಲು ಶ್ರಮವಹಿಸಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಕೋಟ ಪಿಎಸ್ಐ ಸಂತೋಷ್ ಕಾಯ್ಕಿಣಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. 
 
ಇಂದು ಓದಿದ ಹೆಚ್ಚು ಸುದ್ದಿಗಳು
►►ಗೌರಿ ಲಂಕೇಶ್ ಹತ್ಯೆ: ಹೊಟ್ಟೆ ಮಂಜನ ಮಂಪರು ಪರೀಕ್ಷೆಗೆ ಕೋರ್ಟ್ ಅನುಮತಿ:
http://bit.ly/2Gk0prX
►►ಮಂಗಳೂರು ಪಬ್ ದಾಳಿ: ಸಾಕ್ಷಿ ಕೊರತೆಯಿಂದ ಎಲ್ಲ ಆರೋಪಿಗಳೂ ದೋಷಮುಕ್ತ: http://bit.ly/2DmoU4p
►►71 ಮಂದಿ ಇದ್ದ ಬಾಂಗ್ಲಾ ವಿಮಾನ ನೇಪಾಳದಲ್ಲಿ ಪತನ: ಹಲವರ ಸಾವಿನ ಶಂಕೆ: http://bit.ly/2p8OZPH
►►ಹಿಂದೂ-ಮುಸ್ಲಿಂ ಸಹಪಾಠಿಯರ ಫೋಟೊ ದುರ್ಬಳಕೆ ಮಾಡಿ ಲವ್ ಜಿಹಾದ್ ಪುಕಾರು: ಓರ್ವನ ಬಂಧನ: http://bit.ly/2p9pYnd
►►ಸಮುದ್ರದಲ್ಲಿ ಒತ್ತಡ: ಮೀನುಗಾರಿಕೆಗೆ ತೆರಳದಂತೆ ಎಚ್ಚರಿಕೆ: http://bit.ly/2Ik8bTb
►►ಕಾರವಾರದಲ್ಲೊಂದು ವಿಶೇಷ ಜಾತ್ರೆ: ಇಲ್ಲಿ ದೇವರಿಗೆ ಹೆಂಡವೇ ನೈವೇದ್ಯ: http://bit.ly/2FBYrSI
►►ಮಧುಮೇಹ, ಬಿಪಿ ಇದ್ದರೆ ಇನ್ನು ಕುವೈಟ್‌ನಲ್ಲಿ ಕೆಲಸವಿಲ್ಲ: http://bit.ly/2HoNBQg
►►ರೈತನ ಉತ್ಸಾಹದ ನೃತ್ಯವನ್ನು ಸಿದ್ದರಾಮಯ್ಯ ನೃತ್ಯ ಎಂದು ಗೇಲಿ ಮಾಡಿದ ಹೆಗಡೆ ಅಭಿಮಾನಿಗಳು!: http://bit.ly/2Hq5Kx0
►►ಗೋಮಾಂಸ ತಿಂದಿಲ್ಲ, ತಿನ್ನಬೇಕು ಅನಿಸಿದರೆ ತಿನ್ನುತ್ತೇನೆ: ಸಿಎಂ ಸಿದ್ದರಾಮಯ್ಯ: http://bit.ly/2tFRkam

Related Tags: Tekkatte Accident, Tipper, Kota Police, Ganapathi T Shriyan, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ