ಗೌರಿ ಲಂಕೇಶ್ ಹತ್ಯೆ: ಹೊಟ್ಟೆ ಮಂಜನ ಮಂಪರು ಪರೀಕ್ಷೆಗೆ ಕೋರ್ಟ್ ಅನುಮತಿ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಂಡ್ಯ ಮೂಲದ ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜನನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ವಿಶೇಷ ತನಿಖಾ ತಂಡಕ್ಕೆ ನ್ಯಾಯಾಲಯ ಇಂದು ಅನುಮತಿ ನೀಡಿದೆ.

ನವೀನನನ್ನು ಅಹಮದಾಬಾದ್ ಮತ್ತು ಹೈದರಾಬಾದ್‌ಗಳಲ್ಲಿ ಮಂಪರು ಪರೀಕ್ಷೆ ಒಳಪಡಿಸುವ ಸಾಧ್ಯತೆ ಇದೆ. ಯಾವಾಗ ಒಳಪಡಿಸುತ್ತಾರೆ ಎಂಬುದು ನಿರ್ಧರಿತವಾಗಿಲ್ಲ.

ಮಾರ್ಚ್ 9ರಂದು ನವೀನ್ ಅಲಿಯಾಸ್ ಹೊಟ್ಟೆ ಮಂಜನನ್ನು ಮಂಪರು ಪರೀಕ್ಷೆಗೊಳಪಡಿಸಲು ಎಸ್ಐಟಿ ನ್ಯಾಯಾಲಯದ ಅನುಮತಿ ಕೋರಿತ್ತು.

ಇಂದು ಬೆಂಗಳೂರಿನ 3ನೇ ಎಸಿಎಂಎಂ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರುಪಡಿಸಿದ ಸಂದರ್ಭದಲ್ಲಿ ಆರೋಪಿಯನ್ನು ಮಂಪರು ಪರೀಕ್ಷೆಗೊಳಪಡಿಸಿದರೆ ಸತ್ಯ ಹೊರಬರಲಿದೆ ಎಂದು ಎಸ್‌ಐಟಿ ತಂಡದ ಅಧಿಕಾರಿಗಳು ಕೇಳಿಕೊಂಡ ಹಿನ್ನೆಲೆಯಲ್ಲಿ ಕೋರ್ಟ್ ಅಸ್ತು ಎಂದಿದೆ.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಕೆ.ಟಿ. ನವೀನ್ ಕುಮಾರನನ್ನು ತೀವ್ರ ತನಿಖೆಗೆ ಒಳಪಡಿಸಲಾಗಿತ್ತು. ತನಿಖೆ ವೇಳೆ ಆರೋಪಿ ಗೌರಿ ಲಂಕೇಶ್ ಹತ್ಯೆಗೆ ಕೆಲ ಗಂಟೆಗಳು ಬಾಕಿ ಇರುವಾಗಲೇ ಆಕೆಯ ಮನೆಯ ಸುತ್ತಲಿನ ಪ್ರದೇಶಗಳಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದ ಎಂಬುದು ತಿಳಿದುಬಂದಿದೆ.

ಎಸ್ಐಟಿ ತನ್ನ ತನಿಖಾ ವರದಿಗಳನ್ನು ಮೊಹರು ಮಾಡಿದ್ದ ಕವರ್‌ನಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿತ್ತು.

ಇಂದು ಓದಿದ ಹೆಚ್ಚು ಸುದ್ದಿಗಳು
►►ಮಂಗಳೂರು ಪಬ್ ದಾಳಿ: ಸಾಕ್ಷಿ ಕೊರತೆಯಿಂದ ಎಲ್ಲ ಆರೋಪಿಗಳೂ ದೋಷಮುಕ್ತ:
http://bit.ly/2DmoU4p
►►71 ಮಂದಿ ಇದ್ದ ಬಾಂಗ್ಲಾ ವಿಮಾನ ನೇಪಾಳದಲ್ಲಿ ಪತನ: ಹಲವರ ಸಾವಿನ ಶಂಕೆ: http://bit.ly/2p8OZPH
►►ಹಿಂದೂ-ಮುಸ್ಲಿಂ ಸಹಪಾಠಿಯರ ಫೋಟೊ ದುರ್ಬಳಕೆ ಮಾಡಿ ಲವ್ ಜಿಹಾದ್ ಪುಕಾರು: ಓರ್ವನ ಬಂಧನ: http://bit.ly/2p9pYnd
►►ಸಮುದ್ರದಲ್ಲಿ ಒತ್ತಡ: ಮೀನುಗಾರಿಕೆಗೆ ತೆರಳದಂತೆ ಎಚ್ಚರಿಕೆ: http://bit.ly/2Ik8bTb
►►ಕಾರವಾರದಲ್ಲೊಂದು ವಿಶೇಷ ಜಾತ್ರೆ: ಇಲ್ಲಿ ದೇವರಿಗೆ ಹೆಂಡವೇ ನೈವೇದ್ಯ: http://bit.ly/2FBYrSI
►►ಮಧುಮೇಹ, ಬಿಪಿ ಇದ್ದರೆ ಇನ್ನು ಕುವೈಟ್‌ನಲ್ಲಿ ಕೆಲಸವಿಲ್ಲ: http://bit.ly/2HoNBQg
►►ರೈತನ ಉತ್ಸಾಹದ ನೃತ್ಯವನ್ನು ಸಿದ್ದರಾಮಯ್ಯ ನೃತ್ಯ ಎಂದು ಗೇಲಿ ಮಾಡಿದ ಹೆಗಡೆ ಅಭಿಮಾನಿಗಳು!: http://bit.ly/2Hq5Kx0
►►ಗೋಮಾಂಸ ತಿಂದಿಲ್ಲ, ತಿನ್ನಬೇಕು ಅನಿಸಿದರೆ ತಿನ್ನುತ್ತೇನೆ: ಸಿಎಂ ಸಿದ್ದರಾಮಯ್ಯ: http://bit.ly/2tFRkam

Related Tags: Gauri Lankesh Murder, SIT Probe, Navin Kumar Arrested, First Accused, Sanatan Samstha, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ