ಮಂಗಳೂರು ಪಬ್ ದಾಳಿ: ಸಾಕ್ಷಿ ಕೊರತೆಯಿಂದ ಎಲ್ಲ ಆರೋಪಿಗಳೂ ದೋಷಮುಕ್ತ

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ರಾಷ್ಟ್ರ ಮಟ್ಟದಲ್ಲಿ ಭಾರಿ ಸುದ್ದಿಯಾಗಿದ್ದ ಪಬ್ ದಾಳಿ ಪ್ರಕರಣ ಸಂಬಂಧಿಸಿ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿ ನಗರದ ಜೆಎಂಎಫ್‌ಸಿ ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ.

ಮೂರನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಮಂಜುನಾಥ ಅವರು ಈ ತೀರ್ಪಿತ್ತಿದ್ದಾರೆ.

ತೀರ್ಪು ನ್ಯಾಯ ಮತ್ತು ಸತ್ಯಕ್ಕೆ ಸಂದ ಜಯ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ತೀರ್ಪಿನಿಂದ ತಮಗೆ ಸಂತಸವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಸೇರಿ 30 ಮಂದಿ ಆರೋಪಿಗಳನ್ನು ಸೂಕ್ತ ಸಾಕ್ಷಾಧಾರಗಳಿಲ್ಲದ ಕಾರಣಕ್ಕಾಗಿ ಆರೋಪ ಮುಕ್ತಗೊಳಿಸಿದೆ. ಆರೋಪಿಗಳ ಪರ ವಕೀಲರಾದ ಆಶಾ ನಾಯಕ್ ಮತ್ತು ವಿನೋದ್ ಅವರು ವಾದ ಮಂಡಿಸಿದ್ದರು.

2009 ರಲ್ಲಿ ಬಲ್ಮಠದ ಆಮ್ನೇಷಿಯಾ ಪಬ್ ಮೇಲೆ ಶ್ರೀರಾಮ ಸೇನೆಯ ಕಾರ್ಯಕರ್ತರು ದಾಳಿ ನಡೆಸಿ ಅಲ್ಲಿದ್ದ ಯುವಕ-ಯುವತಿಯರಿಗೆ ಥಳಿಸಿದ ವಿಚಾರ ರಾಷ್ಟ್ರಮಟ್ಟದಲ್ಲಿ ಭಾರೀ ಚರ್ಚೆಯಾಗಿತ್ತು.  ಹಲ್ಲೆಗೈದವರು ಬಹುತೇಕ ಸಂಘಪರಿವಾರ ಸಂಘಟನೆಗೆ ಸೇರಿದವರು ಎನ್ನಲಾಗಿತ್ತು.


ಇಂದು ಓದಿದ ಹೆಚ್ಚು ಸುದ್ದಿಗಳು
►►71 ಮಂದಿ ಇದ್ದ ಬಾಂಗ್ಲಾ ವಿಮಾನ ನೇಪಾಳದಲ್ಲಿ ಪತನ: ಹಲವರ ಸಾವಿನ ಶಂಕೆ:
http://bit.ly/2p8OZPH
►►ಹಿಂದೂ-ಮುಸ್ಲಿಂ ಸಹಪಾಠಿಯರ ಫೋಟೊ ದುರ್ಬಳಕೆ ಮಾಡಿ ಲವ್ ಜಿಹಾದ್ ಪುಕಾರು: ಓರ್ವನ ಬಂಧನ: http://bit.ly/2p9pYnd
►►ಸಮುದ್ರದಲ್ಲಿ ಒತ್ತಡ: ಮೀನುಗಾರಿಕೆಗೆ ತೆರಳದಂತೆ ಎಚ್ಚರಿಕೆ: http://bit.ly/2Ik8bTb
►►ಕಾರವಾರದಲ್ಲೊಂದು ವಿಶೇಷ ಜಾತ್ರೆ: ಇಲ್ಲಿ ದೇವರಿಗೆ ಹೆಂಡವೇ ನೈವೇದ್ಯ: http://bit.ly/2FBYrSI
►►ಮಧುಮೇಹ, ಬಿಪಿ ಇದ್ದರೆ ಇನ್ನು ಕುವೈಟ್‌ನಲ್ಲಿ ಕೆಲಸವಿಲ್ಲ: http://bit.ly/2HoNBQg
►►ರೈತನ ಉತ್ಸಾಹದ ನೃತ್ಯವನ್ನು ಸಿದ್ದರಾಮಯ್ಯ ನೃತ್ಯ ಎಂದು ಗೇಲಿ ಮಾಡಿದ ಹೆಗಡೆ ಅಭಿಮಾನಿಗಳು!: http://bit.ly/2Hq5Kx0
►►ಗೋಮಾಂಸ ತಿಂದಿಲ್ಲ, ತಿನ್ನಬೇಕು ಅನಿಸಿದರೆ ತಿನ್ನುತ್ತೇನೆ: ಸಿಎಂ ಸಿದ್ದರಾಮಯ್ಯ: http://bit.ly/2tFRkam

Related Tags: Pub Attack, Pub Attack Case, All Acquitted, Lack Of Evidence, Kannada News, ಪಬ್ ದಾಳಿ, ಅಮ್ನೇಶಿಯಾ ಪಬ್ ಅಟ್ಯಾಕ್, ಶ್ರೀರಾಮ ಸೇನೆ, ಪ್ರಮೋದ ಮುತಾಲಿಕ್, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ