ಹಿಂದೂ-ಮುಸ್ಲಿಂ ಸಹಪಾಠಿಯರ ಫೋಟೊ ದುರ್ಬಳಕೆ ಮಾಡಿ ಲವ್ ಜಿಹಾದ್ ಪುಕಾರು: ಓರ್ವನ ಬಂಧನ

ಕರಾವಳಿ ಕರ್ನಾಟಕ ವರದಿ

ಭಟ್ಕಳ:
ಕಾಲೇಜೊಂದರ ಹಿಂದೂ-ಮುಸ್ಲಿಂ ಸಹಪಾಠಿಗಳ ಸೆಲ್ಫಿ ಫೋಟೊಗಳನ್ನು ಬಳಸಿಕೊಂಡು ಕಾಮುಕ ಭಂಗಿಯಲ್ಲಿ ಫೋಟೊಗಳನ್ನು ಜೋಡಿಸಿದ್ದಲ್ಲದೆ ಲವ್ ಜಿಹಾದ್ ಎಂದು ಬಿಂಬಿಸಿ ಕೋಮು ಗಲಭೆಗೆ ಸಂಚು ರೂಪಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಯೋಗೇಶ್ ಎಂಬಾತ ಪೊಲೀಸ್ ಬಂಧನದಲ್ಲಿರುವ ಆರೋಪಿ. ತಿರು, ಹೇಮಂತ್ ಹಾಗೂ ಇನ್ನಿತರರ ವಿರುದ್ದ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಮುಸ್ಲಿಂ ಸಹಪಾಠಿಗಳೊಂದಿಗಿರುವ ಹಿಂದೂ ಯುವತಿಯರ ಸೆಲ್ಫಿ ಫೋಟೊವನ್ನು ಬಳಸಿಕೊಂಡಿರುವ ವಿಕೃತರು ಆ ಫೋಟೊ ಜೊತೆಗೆ ಅರೆನಗ್ನ ಫೋಟೊಗಳನ್ನು ಜೋಡಿಸಿದ್ದಲ್ಲದೆ ಫೇಸ್‌ಬುಕ್ ವಾಟ್ಸಾಪ್‌ಗಳಲ್ಲಿ ಹರಿಯಬಿಟ್ಟಿದ್ದರು.

ಅಲ್ಲದೇ ತಾಲೂಕಿನ ಪ್ರತಿಷ್ಠಿತ ಕಾಲೇಜೊಂದರ ಹೆಸರನ್ನು ಬಳಸಿಕೊಂಡಿರುವ ಆರೋಪಿಗಳು ಆ ಕಾಲೇಜಿನ ಹೆಸರನ್ನು ಬರೆದು "ಹಿಂದೂ ವಿದ್ಯಾರ್ಥಿನಿಯರೊಂದಿಗೆ ಮುಸ್ಲಿಂ ವಿದ್ಯಾರ್ಥಿಗಳು ಲವ್ ಜಿಹಾದ್ ನಡೆಸುತ್ತಿದ್ದಾರೆ. ಇದರಿಂದಾಗಿ ಹಿಂದೂ ಧರ್ಮ ಅಪಾಯದಲ್ಲಿದೆ" ಎನ್ನುವ ಉದ್ರೇಕಕಾರಿ ಶೀರ್ಷಿಕೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಿಟ್ಟಿದ್ದರು.

ಫೋಟೊ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ವಿದ್ಯಾರ್ಥಿಗಳ ಪೋಷಕರು ಹಾಗೂ ಕಾಲೇಜಿನ ಪ್ರಾಚಾರ್ಯರು ಪೊಲೀಸರಿಗೆ ದೂರು ನೀಡಿದ್ದರು. ಕೂಡಲೇ ಕಾರ್ಯಾಚರಣೆಗಿಳಿದ ಜಿಲ್ಲಾ ಪೊಲೀಸ್ ವಿಶೇಷ ತಂಡ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಯುವಕರು ತಮ್ಮದೇ ಧರ್ಮದ, ತಮ್ಮದೇ ಊರಿನ ಹೆಣ್ಣುಮಕ್ಕಳ ಮಾನ ಹರಾಜಿಗೆ ಮುಂದಾಗಿದ್ದು, ಪ್ರಜ್ಞಾವಂತ ನಾಗರಿಕರಲ್ಲಿ ಆತಂಕ ಮೂಡಿಸಿದೆ. ಆರೋಪಿಗಳು ಕೋಮು ಸೂಕ್ಷ್ಮ ಪ್ರದೇಶವೆಂದೆ ಬಿಂಬಿತವಾಗಿರುವ ಭಟ್ಕಳದಲ್ಲಿ ಕೋಮು ಗಲಭೆಯನ್ನು ಸೃಷ್ಟಿಸುವ ವ್ಯವಸ್ಥಿತ ಸಂಚು ರೂಪಿಸಿದ್ದರು ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಗಳಿಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್, ಇಂಹತ ಕುಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ. ಎಲ್ಲರನ್ನೂ ಬಂಧಿಸಿ ಜೈಲಿಗಟ್ಟಲಾಗುವುದು. ಯಾರು ಕೂಡ ಇಂತಹ ಸಂದೇಶಗಳನ್ನು ಲೈಕ್ ಮಾಡುವುದಾಗಲಿ, ಫಾರ್ವರ್ಡ್ ಮಾಡುವುದಾಗಲಿ ಮಾಡಕೂಡದು ಎಂದು ಎಚ್ಚರಿಸಿದ್ದಾರೆ.

ಈ ಕುರಿತಂತೆ ಉತ್ತರಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆಯೊಂದನ್ನು ನೀಡಿದ್ದು ಅದರ ಯಥಾ ಪ್ರತಿ ಇಲ್ಲಿದೆ
ಕಳೆದ 2 ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಯ ವಿದ್ಯಾರ್ಥಿಗಳಿಗೆ ಸಂಬಂದ ಪಡದ ಬೇರೆ ಯಾವುದೋ ಅಪರಿಚಿತ ಯುವಕ ಯುವತಿಯರ ಅಶ್ಲೀಲ ಚಿತ್ರಗಳನ್ನು ಆ ಶೈಕ್ಷಣಿಕ ಸಂಸ್ಥೆಯ ವಿದ್ಯಾರ್ಥಿಗಳಿಗೆ ಸಂಬಂಧ ಪಟ್ಟಿದ್ದೆಂದು ಸುಳ್ಳು ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಕಿಡಿಗೇಡಿಗಳು ಭಿತ್ತರಿಸುತ್ತಿದ್ದಾರೆ.

ಈ ಸಂಸ್ಥೆಯ ವಿದ್ಯಾರ್ಥಿಗಳ ನೈಜ ಚಿತ್ರಗಳೊಂದಿಗೆ ಅವರಿಗೆ ಸಂಬಂಧಪಡದ ಅಶ್ಲೀಲ ಚಿತ್ರಗಳನ್ನು ಸೇರಿಸಿ, ಆ ಅಶ್ಲೀಲ ಚಿತ್ರಗಳು ಈ ವಿದ್ಯಾರ್ಥಿಗಳಿಗೆ ಸಂಬಂಧ ಪಟ್ಟಿದ್ದೆಂದು ಸುಳ್ಳು ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿ ಜಿಲ್ಲೆಯಾದ್ಯಂತ ಕೋಮು ಪ್ರಚೋದಕ ಭಾವನೆಯನ್ನು ಕೆಲವು ಕಿಡಿಗೇಡಿಗಳು ಸೃಷ್ಟಿಸುತ್ತಿರುವುದಾಗಿ ಪೊಲೀಸ್ ಇಲಾಖೆಯ ಗಮನಕ್ಕೆ ಬಂದಿರುತ್ತದೆ.

ಈಗಾಗಲೇ ಕಳೆದ 4 ತಿಂಗಳಿನಿಂದ ಜಿಲ್ಲೆಯಲ್ಲಿ ಅಪರಾಧ ಪ್ರವೃತ್ತಿಯ ಕಿಡಿಗೇಡಿಗಳು ಕೋಮು ದ್ವೇಷವನ್ನು ಉಲ್ಬಣಗೊಳಿಸುವ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಭಿತ್ತಿರಿಸಿದ್ದು ಇದರಿಂದ ಕಾನೂನು ಸುವ್ಯಸ್ಥೆಗೆ ತೊಂದರೆ ಉಂಟಾಗಿದ್ದು ಈ ನಿಟ್ಟಿನಲ್ಲಿ ಈ ರೀತಿ ಸಾಮಾಜಿಕ ಜಾಲತಾಣಗಳನ್ನು ದುರುಪಯೋಗ ಪಡಿಸಿಕೊಂಡು ಸುಳ್ಳು ಸಂದೇಶಗಳನ್ನು ಭಿತ್ತರಿಸಿದ ಅಪರಾಧಿಗಳ ವಿರುದ್ದ ಕಳೆದ 4 ತಿಂಗಳಿನಲ್ಲಿ 80ಕ್ಕಿಂತಲೂ ಹೆಚ್ಚಿನ ಅಪರಾಧ ಪ್ರಕರಣಗಳನ್ನು ದಾಖಲಾಗಿರುತ್ತದೆ.

ಹೀಗೆ ದಾಖಲಿಸಿದ ಪ್ರಕರಣಗಳಲ್ಲಿ ಆರೋಪಿತರನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು ಕೆಲವು ಅಪರಾಧಿಗಳು ಈಗಲೂ ಸಹ ನ್ಯಾಯಾಂಗ ಬಂಧನದಲ್ಲಿಯೇ ಇರುತ್ತಾರೆ.

ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಚಿತ್ರಗಳನ್ನು ಭಿತ್ತರುವುದು, ಶೇರ್ ಮಾಡುವುದು, ಅಥವಾ ಒಪ್ಪಿಗೆ ಸೂಚಿಸುವುದು ಕಾನೂನಿನ ಪ್ರಕಾರ ಅಪರಾಧವಾಗುತ್ತಿದ್ದು ಮುಖ್ಯವಾಗಿ ಮಹಿಳೆಯರ ಅಶ್ಲೀಲ ಚಿತ್ರಗಳನ್ನು ಭಿತ್ತರಿಸುವುದು ಭಾರೀ ಪ್ರಮಾಣದ ಅಪರಾಧವಾಗಿರುತ್ತದೆ. ಹಾಗೂ ವಿವಿಧ ಕೋಮುಗಳ ಮಧ್ಯೆ ದ್ವೇಷಮಯ ವಾತಾವರಣ ಸೃಷ್ಟಿ ಆಗುವಂತಹ ಯಾವುದೇ ವರ್ತಮಾನವನ್ನು ಪ್ರಚಾರ ಮಾಡುವುದು ಸಹ ಅಪರಾಧವಾಗಿರುತ್ತದೆ. ಈ ಕುರಿತಾಗಿ ಕೆಳಕಂಡ ಕಾನೂನಿನ ಅಡಿಯಲ್ಲಿ ಅಪರಾಧವಾಗಿರುತ್ತದೆ.

1) ಭಾರತೀಯ ದಂಡ ಸಂಹಿತೆ (Indian Penal Code-1860)
2) ಮಹಿಳೆಯರನ್ನು ಅಶ್ಲೀಲವಾಗಿ ಭಿತ್ತರಿಸುವುದನ್ನು ನಿರ್ಭಂಧಿಸುವ ಅಧಿನಿಯಮ-1986 (Indecent Representation of Women (Prohibition) Act-1986,
3) ಮಾಹಿತಿ ತಂತ್ರಜ್ಞಾನ ಕಾಯ್ದೆ (Information Technology Act-2000)

ಇನ್ನು ಮುಂದೆ ಯಾರೇ ವಿವಿಧ ಮತ, ಧರ್ಮಗಳ ಮಧ್ಯೆ ಕೋಮು ಸಂಘರ್ಷ ಏರ್ಪಡಬಹುದಾದ ವರ್ತಮಾನವನ್ನು ಅಥವಾ ಮಹಿಳೆಯರ ಅಶ್ಲೀಲ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಭಿತ್ತರಿಸುವವರ ವಿರುದ್ದ ಕಟ್ಟುನಿಟ್ಟಿನ ಕಾನೂನಿನ ಕ್ರಮವನ್ನು ಜರುಗಿಸಲಾಗುವುದು ಎಂಬುದಾಗಿ ಪೊಲೀಸ್ ಇಲಾಖೆಯಿಂದ ಎಚ್ಚರಿಕೆ ನೀಡಲಾಗಿದೆ.

ಒಂದೊಮ್ಮೆ ಯಾರಾದರೂ ಈ ರೀತಿ ಪ್ರಸರಣ ಮಾಡಿದ್ದಲ್ಲಿ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮ್ ವಾಟ್ಸಾಪ್ ನಂ. 9480805200 ಗೆ ಸಾರ್ವಜನಿಕರು ಮಾಹಿತಿಯನ್ನು ನೀಡಬೇಕಾಗಿ ವಿನಂತಿ.

ಇಂದು ಓದಿದ ಹೆಚ್ಚು ಸುದ್ದಿಗಳು
►►ಸಮುದ್ರದಲ್ಲಿ ಒತ್ತಡ: ಮೀನುಗಾರಿಕೆಗೆ ತೆರಳದಂತೆ ಎಚ್ಚರಿಕೆ:
http://bit.ly/2Ik8bTb
►►ಕಾರವಾರದಲ್ಲೊಂದು ವಿಶೇಷ ಜಾತ್ರೆ: ಇಲ್ಲಿ ದೇವರಿಗೆ ಹೆಂಡವೇ ನೈವೇದ್ಯ: http://bit.ly/2FBYrSI
►►ಮಧುಮೇಹ, ಬಿಪಿ ಇದ್ದರೆ ಇನ್ನು ಕುವೈಟ್‌ನಲ್ಲಿ ಕೆಲಸವಿಲ್ಲ: http://bit.ly/2HoNBQg
►►ರೈತನ ಉತ್ಸಾಹದ ನೃತ್ಯವನ್ನು ಸಿದ್ದರಾಮಯ್ಯ ನೃತ್ಯ ಎಂದು ಗೇಲಿ ಮಾಡಿದ ಹೆಗಡೆ ಅಭಿಮಾನಿಗಳು!: http://bit.ly/2Hq5Kx0
►►ಗೋಮಾಂಸ ತಿಂದಿಲ್ಲ, ತಿನ್ನಬೇಕು ಅನಿಸಿದರೆ ತಿನ್ನುತ್ತೇನೆ: ಸಿಎಂ ಸಿದ್ದರಾಮಯ್ಯ: http://bit.ly/2tFRkam
►►ರವಿ ಬೆಳಗೆರೆ ಪುತ್ರಿ ಭಾವನಾ ಬೆಳಗೆರೆಗೆ ಫೇಸ್​ಬುಕ್​ನಲ್ಲಿ ಕಿರುಕುಳ: http://bit.ly/2tHATub

Related Tags: Love Johad, Fake Photos, Bhatkal College, Hindu Girls, Muslim Boys, Uttara Kannada Police, Communal Tension, Viral Photo, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ