ಕಾರವಾರದಲ್ಲೊಂದು ವಿಶೇಷ ಜಾತ್ರೆ: ಇಲ್ಲಿ ದೇವರಿಗೆ ಹೆಂಡವೇ ನೈವೇದ್ಯ

ರವಿತೇಜ ಕಾರವಾರ/ ಕರಾವಳಿ ಕರ್ನಾಟಕ ವರದಿ

ಕಾರವಾರ:
ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ನಡೆಯುವ ಜಾತ್ರೆ ಸಂದರ್ಭದಲ್ಲಿ ದೇವರಿಗೆ ಹಣ್ಣು-ಕಾಯಿ ನೈವೇದ್ಯ ಮಾಡಲಾಗುತ್ತದೆ. ಆದರೆ ಇಲ್ಲೊಂದು ಜಾತ್ರೆ ಇದೆ. ಈ ಜಾತ್ರೆಯಲ್ಲಿ ದೇವರಿಗೆ ಹೆಂಡ, ಸಿಗರೇಟುಗಳೇ ನೈವೇದ್ಯ. ಆಶ್ಚರ್ಯ ಆಗುತ್ತಿದೆಯೇ? ಆದರೂ ಇದು ನಿಜ. ಇಂತಹ ವಿಭಿನ್ನ ಆಚರಣೆ ಇರುವ ದೇವಸ್ಥಾನ ಯಾವುದು ಎನ್ನುತ್ತೀರಾ? ಹಾಗಾದರೆ ಈ ವರದಿ ಓದಿ.

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೋಡಿಭಾಗದಲ್ಲಿರುವ ಖಾಫ್ರಿ ದೇವರ ಜಾತ್ರಾ ಮಹೋತ್ಸವವನ್ನು ವಿಶೇಷವಾಗಿ ರವಿವಾರ ಆಚರಿಸಲಾಯಿತು.

ಈ ಜಾತ್ರೆ ಎಲ್ಲ ಜಾತ್ರೆಗಿಂತ ಭಿನ್ನತೆ ಹೊಂದಿದ್ದು ದೇವರಿಗೆ ಹರಕೆ ರೂಪದಲ್ಲಿ ಮದ್ಯದ ಬಾಟಲಿ, ಸಿಗರೇಟ್ ಸಲ್ಲಿಸುವುದು ವಾಡಿಕೆಯಾಗಿ ನಡೆದುಕೊಂಡು ಬಂದಿದೆ.

ಇಲ್ಲಿಯ ದೇವರಿಗೆ ಸಾರಾಯಿ ಅಭಿಷೇಕ, ಸಿಗರೇಟಿನಿಂದ ಪೂಜಿಸುವ ಅಪರೂಪದ ಜಾತ್ರೆ ಒಂದು ಶತಮಾನಗಳಿಂದ ನಡೆದುಕೊಂಡು ಬಂದಿದೆ. ದೇವನಿಗೆ ಸಾರಾಯಿ, ಸಿಗರೇಟುಗಳನ್ನು ಭಕ್ತರು ಅಷ್ಟೇ ಭಕ್ತಿಯಿಂದ ಅರ್ಪಿಸುತ್ತಾರೆ.

ಈ ದೇವನಿಗೆ ಸಾರಾಯಿ ಮತ್ತು ಸಿಗರೇಟು ಎಂದರೆ ಪಂಚಪ್ರಾಣ. ಕಾಳಿ ನದಿಯ ತಟಕ್ಕೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಖಾಫ್ರಿ ದೇವರ ಜಾತ್ರೆ ವರ್ಷದ ಮಾರ್ಚ್ ತಿಂಗಳಲ್ಲಿ ನಡೆಯುತ್ತದೆ. ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳು ಹಣ್ಣು-ಕಾಯಿಗಳ ಜೊತೆಗೆ ಮದ್ಯದ ಬಾಟಲಿ, ಸಿಗರೇಟುಗಳನ್ನು ತಂದು ನೀಡುತ್ತಾರೆ. 

ದೇವರ ಇತಿಹಾಸ
ಸುಮಾರು ಒಂದು ಶತಮಾನದ ಹಿಂದೆ ದಕ್ಷಿಣ ಆಫ್ರಿಕಾ ದೇಶದ ಖಾಫ್ರಿ ಹೆಸರಿನ ಪ್ರಜೆ ಇಲ್ಲಿ ಗುಡಿಸಲೊಂದರಲ್ಲಿ ವಾಸವಾಗಿದ್ದನಂತೆ. ಆತ ಪರೋಪಕಾರಿ ವ್ಯಕ್ತಿಯಾಗಿದ್ದ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದನಂತೆ. ಹಾಗಾಗಿ ಅವನಿಗೆ ಬಡವರ ರಕ್ಷಕ ಎಂದು ಕರೆಯಲಾಗುತ್ತಿತ್ತು. ಕೆಲವರ ಪಾಲಿಗೆ ಆತನೆ ದೇವಮಾನವ. ಹೀಗಿರುವಾಗ ಆತ ಇದ್ದಕ್ಕಿದ್ದಂತೆ ಕಣ್ಮರೆಯಾದ. ಎಲ್ಲೆಡೆ ಹುಡುಕಿದರೂ ಪತ್ತೆಯಾಗಿಲ್ಲ. ಆದರೂ ಜನಗಳಿಗೆ ಆತನ ಮೇಲೆ ಅಪಾರವಾದ ಭಯ -ಭಕ್ತಿ ಹೊಂದಿದ್ದರು.

ಒಂದು ದಿನ ಗ್ರಾಮದ ಪರಸಪ್ಪ ಎಂಬಾತನಿಗೆ ಕಣ್ಮರೆಯಾದ ಖಾಫ್ರಿ ಕನಸಿನಲ್ಲಿ ಬಂದು ತನಗೊಂದು ಗುಡಿಯನ್ನು ಕಟ್ಟುವಂತೆ ಹಾಗೂ ತನಗೆ ಇಷ್ಟವಾದ ಸಾರಾಯಿ, ಸಿಗರೇಟು ಮಾಂಸದ ಭಕ್ಷಾದಿಗಳನ್ನು ನೀಡುವಂತೆ ಸೂಚಿಸಿದನಂತೆ ಎನ್ನಲಾಗುತ್ತದೆ.

ಇದರಿಂದ ಪರಸಪ್ಪ ಖಾಫ್ರಿಯ ಒಂದು ಕಲ್ಲಿನ ಮೂರ್ತಿಯನ್ನು ತಂದು ಪ್ರತಿಷ್ಟಾಪಿಸಿ ಪೂಜಿಸಲು ಪ್ರಾರಂಭಿಸಿದ. ಖಾಫ್ರಿಯ ಮೇಲೆ ಭಯ-ಭಕ್ತಿಯಿದ್ದವರು ಆಗಾಗ ಬಂದು ಆತನ ಕಲ್ಲಿನ ಮೂರ್ತಿಗೆ ಸೇವೆಯನ್ನು ಸಲ್ಲಿಸಲು ಪ್ರಾರಂಭಿಸಿದರು. ಅಂದಿನಿಂದ ಇಂದಿನವರೆಗೂ ಖಾಫ್ರಿ ಭಕ್ತರು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ಬರುವಾಗ ಇದನ್ನು ಕಡ್ಡಾಯವಾಗಿ ಸಾರಾಯಿ, ಸಿಗರೇಟು ತಂದು ದೇವರಿಗೆ ಸಲ್ಲಿಸುತ್ತಾರೆ. 

ಸ್ಥಳೀಯರ ಪ್ರಕಾರ ಖಾಪ್ರಿ ಎನ್ನುವ ಸಂತ ಇಂದು ನಮಗೆ ನಮ್ಮ ಕಷ್ಟ -ಕಾರ್ಪಣ್ಯಗಳನ್ನು ನಿವಾರಿಸುವ, ಇಷ್ಟಾರ್ಥ ಬೇಡಿಕೆಗಳನ್ನು ಈಡೇರಿಸುವ ಸಾಕ್ಷಾತ ದೇವನಾಗಿ ಇಲ್ಲಿಯ ನೆಲೆ ನಿಂತಿದ್ದಾನೆ. ಭಕ್ತಾದಿಗಳು ಅವನ ಮೇಲೆ ಭಕ್ತಿ ಇರಿಸಿಕೊಂಡು ಬಂದು ತಮ್ಮ ಯತಾರ್ಥವಾದ ಸೇವೆಯನ್ನು ಸಲ್ಲಿಸುತ್ತೇವೆ ಎನ್ನುತ್ತಾರೆ.

ವಿವಿಧ ಧಾರ್ಮಿಕ ಕೈಂಕರ್ಯಗಳು
ಖಾಫ್ರಿ ದೇವರಿಗೆ ದೀಪದೆಣ್ಣೆ, ಹೂ-ಹಣ್ಣು ಕಾಯಿಯನ್ನು ಸಲ್ಲಿಸುವುದು, ತರಕಾರಿ ಮೊದಲಾದ ವಸ್ತುಗಳ ತುಲಾಭಾರ ನಡೆಸುವದು ಮಾಮೂಲು ಸಂಪ್ರದಾಯದ ಭಾಗವಾಗಿದೆ. ಜೊತೆಗೆ ಭಕ್ತಾದಿಗಳು ವೈವಿಧ್ಯಮಯವಾದ ಮದ್ಯಗಳನ್ನು ತಂದು ದೇವನಿಗೆ ಸಲ್ಲಿಸುತ್ತಾರೆ. ಅಲ್ಲದೇ ಅದನ್ನೆ ದೇವರ ಪ್ರಸಾದ ಎಂದು ಸ್ವೀಕರಿಸುವವರು ಇದ್ದಾರೆ. ಸಿಗರೇಟನ್ನು ತಂದು, ಅಗರಬತ್ತಿಯ ರೂಪದಲ್ಲಿ ಆರತಿಯನ್ನು ಮಾಡುತ್ತಾರೆ.
ಜಾತ್ರೆಯ ಸಂದರ್ಭದಲ್ಲಿ ಕಾರವಾರವಷ್ಟೇ ಅಲ್ಲದೇ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರೆಗೆ ಬಂದು ತಮ್ಮ ಸೇವೆಯನ್ನು ಸಲ್ಲಿಸುತ್ತಾರೆ. ಹರಕೆ ಈಡೇರಿದ ನಂತರದಲ್ಲಿ ತಮ್ಮ ಮನಸ್ಸಿಗೆ ತೋಚಿದಂತೆ ಹಣದ ರೂಪದಲ್ಲಿ ವಸ್ತುರೂಪದಲ್ಲಿ ಸೇವೆಯನ್ನು ಸಲ್ಲಿಸುತ್ತಾರೆ.

ಒಟ್ಟಾರೆಯಾಗಿ ರಾಜ್ಯದ ಹಲವು ದೇವ ದೇವತೆಗಳ ಜಾತ್ರೆಗಳಿಗಿಂತ ಖಾಫ್ರಿ ದೇವರ ಜಾತ್ರೆ ಅತ್ಯಂತ ವಿಶಿಷ್ಟವಾದ ಆಚರಣೆಯಾಗಿದೆ. ಆಶ್ಚರ್ಯಗಳನ್ನು ತರುವ ವಿವಿಧ ಆಚರಣೆಗಳು ಈ ಖಾಫ್ರಿ ದೇವ ಹೊಂದಿದ್ದಾನೆ.

ಇಂದು ಓದಿದ ಹೆಚ್ಚು ಸುದ್ದಿಗಳು
►►ಮಧುಮೇಹ, ಬಿಪಿ ಇದ್ದರೆ ಇನ್ನು ಕುವೈಟ್‌ನಲ್ಲಿ ಕೆಲಸವಿಲ್ಲ:
http://bit.ly/2HoNBQg
►►ರೈತನ ಉತ್ಸಾಹದ ನೃತ್ಯವನ್ನು ಸಿದ್ದರಾಮಯ್ಯ ನೃತ್ಯ ಎಂದು ಗೇಲಿ ಮಾಡಿದ ಹೆಗಡೆ ಅಭಿಮಾನಿಗಳು!: http://bit.ly/2Hq5Kx0
►►ಗೋಮಾಂಸ ತಿಂದಿಲ್ಲ, ತಿನ್ನಬೇಕು ಅನಿಸಿದರೆ ತಿನ್ನುತ್ತೇನೆ: ಸಿಎಂ ಸಿದ್ದರಾಮಯ್ಯ: http://bit.ly/2tFRkam
►►ರವಿ ಬೆಳಗೆರೆ ಪುತ್ರಿ ಭಾವನಾ ಬೆಳಗೆರೆಗೆ ಫೇಸ್​ಬುಕ್​ನಲ್ಲಿ ಕಿರುಕುಳ: http://bit.ly/2tHATub
►►ನೀವು ನನ್ನನ್ನು ಪ್ರಶ್ನಿಸುವಂತೆ ನರೇಂದ್ರ ಮೋದಿಯವರನ್ನು ಪ್ರಶ್ನಿಸಲಾರಿರಿ: ರಾಹುಲ್ ಗಾಂಧಿ: http://bit.ly/2oXCRli
►►ಆಂಧ್ರಪ್ರದೇಶದಲ್ಲಿ ಭೀಕರ ಅಪಘಾತ: ಕಾಸರಗೋಡು ಮೂಲದ ನಾಲ್ವರು ಮೃತ್ಯು: http://bit.ly/2p5zCaE
►►ತಂದೆ-ತಾಯಿ ಹೊರಗೆ ಕಳಿಸಿ ಬಾಲಕಿ ಅತ್ಯಾಚಾರ: ಜ್ಯೋತಿಷಿ ಸೆರೆ: http://bit.ly/2Div59G

Related Tags: Karwar Special Festival, Liquor Naivedya, Liquor Bottles, Khafri Festival, Jaatre, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ