ಮಧುಮೇಹ, ಬಿಪಿ ಇದ್ದರೆ ಇನ್ನು ಕುವೈಟ್‌ನಲ್ಲಿ ಕೆಲಸವಿಲ್ಲ
ಇನ್ನು ಮುಂದೆ ಅಧಿಕ ರಕ್ತದೊತ್ತಡ, ಡಯಾಬಿಟೀಸ್ ಇದ್ದರೆ ಕುವೈಟ್ ದೇಶಕ್ಕೆ ಪ್ರವೇಶ ನಿರ್ಬಂಧ. ಈಗ ಕಾಯಿಲೆಗಳಿಂದ ಬಳಲುತ್ತಿರುವವರ ಭವಿಷ್ಯವೂ ಆತಂಕಿತ.

ಕರಾವಳಿ ಕರ್ನಾಟಕ ವರದಿ

ಕುವೈಟ್:
ಮಧುಮೇಹ, ಕ್ಯಾನ್ಸರ್, ಅಧಿಕ ರಕ್ತದೊತ್ತಡ ಮುಂತಾದ ಇಪ್ಪತ್ತೆರಡು ಕಾಯಿಲೆಗಳಿಂದ ಬಳಲುವವರು ಇನ್ನು ಮುಂದೆ ವಾಸ್ತವ್ಯ ಪರ್ಮಿಟ್‌ಗೆ ಅರ್ಜಿ ಹಾಕುವುದನ್ನು ಕುವೈಟ್ ನಿಷೇಧಿಸಿದೆ.

ಕುವೈಟ್ ದೇಶದಲ್ಲಿ ಕೆಲಸಕ್ಕೆ ಬರುವ ವಿದೇಶಿಯರು ದೈಹಿಕ ಕ್ಷಮತೆ ಹೊಂದಿರುವುದನ್ನು ಖಾತ್ರಿ ಪಡಿಸಲು ಈ ಹೊಸ ಕಾನೂನು ಜಾರಿ ಮಾಡಲಾಗಿದೆ. ವಿದೇಶಿಯರ ಆರೋಗ್ಯ ವೆಚ್ಚ ಕಡಿಮೆ ಮಾಡುವ ದೃಷ್ಠಿಯಿಂದ ಹೊಸ ಕಾನೂನು ಜಾರಿಗೆ ತರಲಾಗಿದೆ ಎಂದು ಆರೋಗ್ಯ ಸಚಿವಾಲಯದಲ್ಲಿ ಸಾಮಾನ್ಯ ಆರೋಗ್ಯ ವ್ಯವಹಾರಗಳ ಸಹಾಯಕ ಅಧೀನ ಕಾರ್ಯದರ್ಶಿ ಮಜೀದ್ ಅಲ್ ಕತನ್ ಹೇಳಿದ್ದಾರೆ.

2001ರ ಜಿಸಿಸಿ ಆಯೋಗದ ಸಲಹೆಯಂತೆ ಈ ನಿರ್ಧಾರ ಎಂದು ಕುವೈಟ್ ತಿಳಿಸಿದೆ.

ಈ ಹೊಸ ಕಾನೂನಿನಂತೆ ಕುವೈಟ್ ಪಟ್ಟಿ ಮಾಡಿದ ಇಪ್ಪತ್ತೆರಡು ಕಾಯಿಲೆಗಳುಲ್ಲವರು ದೇಶವನ್ನು ಪ್ರವೇಶಿಸುವುದನ್ನೇ ನಿರ್ಬಂಧಿಸಲಾಗುವುದು. ಇನ್ನಷ್ಟೇ ಈ ಕಾನೂನನ್ನು ಜಾರಿಗೆ ತರುವ ಪ್ರಕ್ರಿಯೆ ಆರಂಭಗೊಳ್ಳಲಿದೆ.

ಆದರೆ ಕುವೈಟ್ ದೇಶದ ಈ ಹೊಸ ಕಾನೂನಿಗೆ ಅಂತರಾಷ್ಟ್ರೀಯ ಮಾನವ ಹಕ್ಕು ಸಂಘಟನೆಗಳಿಂದ ಭಾರೀ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ. ಇದುವರೆಗೆ ಕಾಯಿಲೆಗಳು ಹರಡುವಂತಿದ್ದರೆ ಮಾತ್ರ ಅಂಥ ಕಾಯಿಲೆ ಉಳ್ಳವರನ್ನು ನಿಷೇಧಿಸುವುದು ಸಾಮಾನ್ಯವಾಗಿ ಎಲ್ಲ ದೇಶಗಳಲ್ಲಿ ಅನುಸರಿಸುತ್ತಿದ್ದ ಕ್ರಮ.ಹೊಸ ಕಾನೂನಿನಂತೆ ಈಗಾಗಲೇ ಕಾಯಿಲೆಗಳಿಂದ ಬಳಲುತ್ತಿರುವವರನ್ನೂ ಕುವೈಟ್‌ನಿಂದ ಕಳಿಸಲಾಗುವುದೇ ಎಂದು ಇಲ್ಲಿರುವ ವಿದೇಶಿಗರು ಭಾರೀ ಆತಂಕದಲ್ಲಿದ್ದಾರೆ.

ಕುವೈಟ್ ಆರೋಗ್ಯ ಸಚಿವಾಲಯವು ತೈಲ ಬೆಲೆ ಇಳಿಯುತ್ತಿರುವುದರಿಂದ ವಿದೇಶಿಗರ ಆರೋಗ್ಯ ವೆಚ್ಚ ಕುವೈಟ್ ದೇಶಕ್ಕೆ ಹೊರೆ ಎಂದು ವಾದಿಸುತ್ತಿದೆ.

ಇಂದು ಓದಿದ ಹೆಚ್ಚು ಸುದ್ದಿಗಳು
►►ರೈತನ ಉತ್ಸಾಹದ ನೃತ್ಯವನ್ನು ಸಿದ್ದರಾಮಯ್ಯ ನೃತ್ಯ ಎಂದು ಗೇಲಿ ಮಾಡಿದ ಹೆಗಡೆ ಅಭಿಮಾನಿಗಳು!:
http://bit.ly/2Hq5Kx0
►►ಗೋಮಾಂಸ ತಿಂದಿಲ್ಲ, ತಿನ್ನಬೇಕು ಅನಿಸಿದರೆ ತಿನ್ನುತ್ತೇನೆ: ಸಿಎಂ ಸಿದ್ದರಾಮಯ್ಯ: http://bit.ly/2tFRkam
►►ರವಿ ಬೆಳಗೆರೆ ಪುತ್ರಿ ಭಾವನಾ ಬೆಳಗೆರೆಗೆ ಫೇಸ್​ಬುಕ್​ನಲ್ಲಿ ಕಿರುಕುಳ: http://bit.ly/2tHATub
►►ನೀವು ನನ್ನನ್ನು ಪ್ರಶ್ನಿಸುವಂತೆ ನರೇಂದ್ರ ಮೋದಿಯವರನ್ನು ಪ್ರಶ್ನಿಸಲಾರಿರಿ: ರಾಹುಲ್ ಗಾಂಧಿ: http://bit.ly/2oXCRli
►►ಆಂಧ್ರಪ್ರದೇಶದಲ್ಲಿ ಭೀಕರ ಅಪಘಾತ: ಕಾಸರಗೋಡು ಮೂಲದ ನಾಲ್ವರು ಮೃತ್ಯು: http://bit.ly/2p5zCaE
►►ತಂದೆ-ತಾಯಿ ಹೊರಗೆ ಕಳಿಸಿ ಬಾಲಕಿ ಅತ್ಯಾಚಾರ: ಜ್ಯೋತಿಷಿ ಸೆರೆ: http://bit.ly/2Div59G

Related Tags: Kuwait, Residency Permits, Expats With Diabetes, High BP, Majida Al Qattan, General Health Affairs Kuwait, Ministry of Health Kuwait, AIDS, Herpes, Hepatitis B and G, Malaria, Leprosy, Syphilis, Tuberculosis, Gonorrhea, Kuwait’s Health Minister Sheikh Dr Basel Al-Sabah, Gulf News, Kannada News, Kara
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ