ರೈತನ ಉತ್ಸಾಹದ ನೃತ್ಯವನ್ನು ಸಿದ್ದರಾಮಯ್ಯ ನೃತ್ಯ ಎಂದು ಗೇಲಿ ಮಾಡಿದ ಹೆಗಡೆ ಅಭಿಮಾನಿಗಳು!
ರೈತರೋರ್ವರು ಉತ್ಸಾಹದಿಂದ ಮಾಡಿದ ನೃತ್ಯವನ್ನು ಗೇಲಿ ಮಾಡಿ ಅದನ್ನು ಸಿದ್ದರಾಮಯ್ಯ ಮಾಡಿದ ನೃತ್ಯ ಎಂದು ಅನಂತ ಕುಮಾರ ಹೆಗಡೆ ಅಭಿಮಾನಿಗಳು ವಿಕೃತಿ ಮೆರೆದಿದ್ದಾರೆ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ರೈತರೊಬ್ಬರ ಉತ್ಸಾಹದ ನೃತ್ಯವನ್ನು ಗೇಲಿ ಮಾಡಿ ಅದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ ನೃತ್ಯ ಎಂದು ಸಾಮಾಜಿಕ ಜಾಲತಾಣದಲ್ಲಿ ಅನಂತ ಕುಮಾರ ಹೆಗಡೆ ಅಭಿಮಾನಿಗಳು ಅಪಪ್ರಚಾರ ಮಾಡಿದ್ದಾರೆ. ಈ ಮೂಲಕ ಕೇವಲ ಸಿದ್ದರಾಮಯ್ಯ ಮಾತ್ರವಲ್ಲದೆ ನೃತ್ಯ ಮಾಡಿದ ರೈತರಿಗೂ ಅನಂತ ಕುಮಾರ ಹೆಗಡೆ ಅಭಿಮಾನಿಗಳು ಅವಮಾನ ಮಾಡಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಸಿನಿಮಾ ಹಾಡಿಗೆ ಸಿಎಂ ಸಿದ್ದರಾಮಯ್ಯ ಡಾನ್ಸ್ ಮಾಡಿದ್ದಾರೆ ಎಂದು ರೈತರೋರ್ವರು ನೃತ್ಯ ಮಾಡುತ್ತಿದ್ದ ವಿಡಿಯೋವನ್ನು ಅನಂತ ಕುಮಾರ ಹೆಗಡೆ ಅಭಿಮಾನಿಗಳು ಎನ್ನಲಾದ ಪುಟದಲ್ಲಿ ವೈರಲ್ ಮಾಡಲಾಗಿತ್ತು.

ಆದರೆ ಈ ವಿಡಿಯೋದಲ್ಲಿ ನಿಜವಾಗಿ ಸಿಎಂ ಸಿದ್ದರಾಮಯ್ಯ ಡ್ಯಾನ್ಸ್ ಮಾಡಿಲ್ಲ. ಕಾರ್ಯಕ್ರಮ ಒಂದರಲ್ಲಿ ಸಿದ್ದರಾಮಯ್ಯನವರನ್ನು ಹೋಲುವ ವ್ಯಕ್ತಿಯೊಬ್ಬರು ಈ ರೀತಿ ಡ್ಯಾನ್ಸ್ ಮಾಡಿದ್ದರು.

ಅದನ್ನು ಫೇಸ್‌ಬುಕ್‌ನಲ್ಲಿ ಅಣೆಕಟ್ಟೆ ವಿಶ್ವನಾಥ್ ಎಂಬವರು ಲೈವ್ ಮಾಡಿದ್ದರು. ಆದರೆ ಈ ವಿಚಾರವನ್ನು ತಿಳಿಯದ ಜನ ಸಿದ್ದರಾಮಯ್ಯನವರೇ ಡ್ಯಾನ್ಸ್ ಮಾಡಿದ್ದಾರೆ ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ವಿಡಿಯೋ ಕುರಿತು ಅಣೆಕಟ್ಟೆ ವಿಶ್ವನಾಥ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

“ಬಿಜೆಪಿ ಭಕ್ತರು ಹಸಿ ಸುಳ್ಳಿಗೆ ಇದೊಂದು ಸ್ಪಷ್ಟ ಉದಾಹರಣೆ, ನಾನು ಭಾಗವಹಿಸಿದ್ದ ಸಿರಿಧಾನ್ಯ ಕುರಿತಾದ ಕಾರ್ಯಾಗಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೋಲುವ ರೈತರೊಬ್ಬರು ನೃತ್ಯ ಮಾಡಿದ್ದರು. ಅದನ್ನು ನಾನು ಲೈವ್ ಮಾಡಿದ್ದೆ. ಇದನ್ನು ಕದ್ದು ಶಿರಸಿಯ ಅನಂತರ ಭಕ್ತರು ತಮ್ಮ ಪೇಜ್ ನಲ್ಲಿ ಸಿದ್ದರಾಮಯ್ಯನವರು ನೃತ್ಯ ಮಾಡಿದ್ದಾರೆ ಎಂದು ಅಪಪ್ರಚಾರ ಮಾಡಿದ್ದಾರೆ. ಆ ರೈತರ ಜೀವನೋತ್ಸಾಹ ನೋಡಿ ನಾನು ಇದಕ್ಕೆ ಕುಣಿದಿದ್ದೆ. ಬಿಜೆಪಿ ಅಂದರೆ ಸುಳ್ಳು ಎಂದು ಮತ್ತೊಮ್ಮೆ ಸಾಬೀತಾಗಿದೆ” ಎಂದು ಬರೆದು ಕೊಂಡಿದ್ದಾರೆ.

ಇಂದು ಓದಿದ ಹೆಚ್ಚು ಸುದ್ದಿಗಳು
►►ಗೋಮಾಂಸ ತಿಂದಿಲ್ಲ, ತಿನ್ನಬೇಕು ಅನಿಸಿದರೆ ತಿನ್ನುತ್ತೇನೆ: ಸಿಎಂ ಸಿದ್ದರಾಮಯ್ಯ:
http://bit.ly/2tFRkam
►►ರವಿ ಬೆಳಗೆರೆ ಪುತ್ರಿ ಭಾವನಾ ಬೆಳಗೆರೆಗೆ ಫೇಸ್​ಬುಕ್​ನಲ್ಲಿ ಕಿರುಕುಳ: http://bit.ly/2tHATub
►►ನೀವು ನನ್ನನ್ನು ಪ್ರಶ್ನಿಸುವಂತೆ ನರೇಂದ್ರ ಮೋದಿಯವರನ್ನು ಪ್ರಶ್ನಿಸಲಾರಿರಿ: ರಾಹುಲ್ ಗಾಂಧಿ: http://bit.ly/2oXCRli
►►ಆಂಧ್ರಪ್ರದೇಶದಲ್ಲಿ ಭೀಕರ ಅಪಘಾತ: ಕಾಸರಗೋಡು ಮೂಲದ ನಾಲ್ವರು ಮೃತ್ಯು: http://bit.ly/2p5zCaE
►►ತಂದೆ-ತಾಯಿ ಹೊರಗೆ ಕಳಿಸಿ ಬಾಲಕಿ ಅತ್ಯಾಚಾರ: ಜ್ಯೋತಿಷಿ ಸೆರೆ: http://bit.ly/2Div59G

Related Tags: Siddaramiah Dance, Viral Video, Ananth Kumar Hegde, Social Media, Farmer''s Dance, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ