ಗೋಮಾಂಸ ತಿಂದಿಲ್ಲ, ತಿನ್ನಬೇಕು ಅನಿಸಿದರೆ ತಿನ್ನುತ್ತೇನೆ: ಸಿಎಂ ಸಿದ್ದರಾಮಯ್ಯ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಗೋಮಾಂಸವನ್ನು ನಾನು ಈವರೆಗೂ ತಿಂದಿಲ್ಲ. ತಿನ್ನಬೇಕು ಅನ್ನಿಸಿದರೆ ತಿನ್ನುತ್ತೇನೆ. ಅದರಲ್ಲೇನು ತಪ್ಪು. ನಾನು ಏನು ತಿನ್ನಬೇಕು, ಏನು ತಿನ್ನಬಾರದು ಎಂದು ಹೇಳಲು ಇವರಾರ‍ಯರು. ನನ್ನ ಆಹಾರ, ನನ್ನ ಹಕ್ಕು. ಸಿದ್ದರಾಮಯ್ಯನವರು ಗೋಮಾಂಸ ತಿಂದರಂತೆ, ಅವರ ಮೈನಲ್ಲಿ ಟಿಪ್ಪು ರಕ್ತ ಹರಿಯುತ್ತಿದೆ ಎಂದು ಹೇಳಿಕೆ ನೀಡುವುದು ಅವರ ಕೋಮುವಾದಿತನ ತೋರುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಗೋಮಾಂಸ ಸೇವನೆ ವಿರೋಧಿಸುವವರಿಗೆ ತಿರುಗೇಟು ನೀಡಿದರು.

'ಎತ್ತ ಸಾಗುತ್ತಿದೆ ಭಾರತ'? ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪದಲ್ಲಿ ಮಾತನಾಡಿದ ಅವರು, ಗೋವಾದಲ್ಲಿ ಬಿಜೆಪಿಯವರದೇ ಸರಕಾರವಿದೆ. ಅಲ್ಲಿ ಯಥೇಚ್ಛವಾಗಿ ಗೋಮಾಂಸ ಬಳಕೆಯಾಗುತ್ತಿದೆ. ಅಲ್ಲಿ ನಿಷೇಧಿಸಲಾಗದ ಬಿಜೆಪಿಗೆ ಕರ್ನಾಟಕವೇನಾ ಕಾಣುವುದು? ದೇಶದಲ್ಲಿ ಕೋಟ್ಯಾಂತರ ರೂ. ಮೌಲ್ಯದ ಗೋಮಾಂಸ ರಫ್ತಾಗುತ್ತಿದೆ. ಅದನ್ನೇಕೆ ನಿಷೇಧಿಸಲಾಗುತ್ತಿಲ್ಲ ಎಂದು ಸಿಎಂ ಪ್ರಶ್ನಿಸಿದರು.

ಸಂವಿಧಾನದ ಪುನಾರಚನೆಯ ಕೂಗು ಎಬ್ಬಿಸಿದ ಶಕ್ತಿಗಳೇ ಸಂವಿಧಾನದ ಬದಲಾವಣೆ ಆಗಬೇಕು ಎನ್ನುತ್ತಿವೆ. ಸಾಮಾಜಿಕ ಬದಲಾವಣೆಗಾಗಿ ಸಂವಿಧಾನಕ್ಕೆ ತಿದ್ದುಪಡಿ ತರುವುದರಲ್ಲಿ ಅರ್ಥವಿದೆ. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದಿರುವುದೇ ಸಂವಿಧಾನವನ್ನು ಬದಲಾಯಿಸಲು ಎಂದು ಕೇಂದ್ರ ಸಚಿವರೊಬ್ಬರು ಹೇಳಿಕೆ ನೀಡಿದ್ದಾರೆ. ಇದನ್ನು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಕೋಮುವಾದಿ ವ್ಯಕ್ತಿ ಹಾಗೂ ಪಕ್ಷಗಳನ್ನು ಸೋಲಿಸಬೇಕು. ಜಾತ್ಯತೀತ, ಪ್ರಜಾಸತ್ತಾತ್ಮಕ ಹಾಗೂ ಪ್ರಗತಿಪರರೆಲ್ಲ ಒಗ್ಗಟ್ಟಾಗಿ ಬಿಜೆಪಿ ವಿರುದ್ಧ ಜಾಗೃತಿ ಮೂಡಿಸಬೇಕು.

ಜಾತ್ಯತೀತ ಹೆಸರು ಹೇಳಿಕೊಂಡು ಬಿಜೆಪಿಗೆ ಬೆಂಬಲ ನೀಡುವವರ ವಿರುದ್ಧ ಜನಜಾಗೃತಿ ಮೂಡಿಸಬೇಕು ಎಂದವರು ಇದೇ ಸಂದರ್ಭದಲ್ಲಿ ಹೇಳಿದರು.

ಇಂದು ಓದಿದ ಹೆಚ್ಚು ಸುದ್ದಿಗಳು
►►ರವಿ ಬೆಳಗೆರೆ ಪುತ್ರಿ ಭಾವನಾ ಬೆಳಗೆರೆಗೆ ಫೇಸ್​ಬುಕ್​ನಲ್ಲಿ ಕಿರುಕುಳ:
http://bit.ly/2tHATub
►►ನೀವು ನನ್ನನ್ನು ಪ್ರಶ್ನಿಸುವಂತೆ ನರೇಂದ್ರ ಮೋದಿಯವರನ್ನು ಪ್ರಶ್ನಿಸಲಾರಿರಿ: ರಾಹುಲ್ ಗಾಂಧಿ: http://bit.ly/2oXCRli
►►ಆಂಧ್ರಪ್ರದೇಶದಲ್ಲಿ ಭೀಕರ ಅಪಘಾತ: ಕಾಸರಗೋಡು ಮೂಲದ ನಾಲ್ವರು ಮೃತ್ಯು: http://bit.ly/2p5zCaE
►►ತಂದೆ-ತಾಯಿ ಹೊರಗೆ ಕಳಿಸಿ ಬಾಲಕಿ ಅತ್ಯಾಚಾರ: ಜ್ಯೋತಿಷಿ ಸೆರೆ: http://bit.ly/2Div59G

Related Tags: Siddaramiah, Beef Politics, BJP, Cow, Gomathe, Ettha Saguthide Baratha, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ