ರವಿ ಬೆಳಗೆರೆ ಪುತ್ರಿ ಭಾವನಾ ಬೆಳಗೆರೆಗೆ ಫೇಸ್​ಬುಕ್​ನಲ್ಲಿ ಕಿರುಕುಳ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಹಿರಿಯ ಪತ್ರಕರ್ತ ರವಿ ಬೆಳಗೆರೆ ಪುತ್ರಿ, ಬಿಗ್‍ಬಾಸ್ ಸ್ಫರ್ಧಿ ಭಾವನಾ ಬೆಳಗೆರೆ ಅವರಿಗೆ ಫೇಸ್​ಬುಕ್​ನಲ್ಲಿ ಅಶ್ಲೀಲ ಸಂದೇಶ ಕಳುಹಿಸಿ ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ವಿರುದ್ದ ಭಾವನಾ ಪೊಲೀಸ್ ದೂರು ನೀಡಲು ಮುಂದಾಗಿದ್ದಾರೆ.

ಪ್ರದೀಪ್​ ಕುಮಾರ್​ ಪಾಯಲ್​ ಎಂಬ ಖಾತೆಯಿಂದ ಸಾಕಷ್ಟು ಹಿಂದೆಯೇ ಅಶ್ಲೀಲ ಸಂದೇಶಗಳು, ಚಿತ್ರಗಳು ಬಂದಿದ್ದವು. ತಾನು ಬ್ಯುಸಿ ಆಗಿದ್ದರಿಂದ ಮೆಸೆಂಜರ್​ ಅನ್ನು ಅಷ್ಟಾಗಿ ಗಮನಿಸುತ್ತಿರಲಿಲ್ಲ. ಆದರೆ ಆ ವ್ಯಕ್ತಿಯಿಂದ ತನಗೆ ವಿಡಿಯೋ ಕರೆಗಳು ಬಂದ ಬಳಿಕ ಈ ವಿಷಯ ತಿಳಿಯಿತು ಎಂದು ಭಾವನಾ ಬೆಳಗೆರೆ ತಿಳಿಸಿದ್ದಾರೆ.

ನನ್ನ ಪರ್ಸನಲ್ ಅಕೌಂಟ್‌ಗೆ ಪ್ರದೀಪ್ ಕುಮಾರ್ ಪಾಯಲ್ ಎಂಬಾತ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ. ಅದನ್ನ ನಾನು ಅಕ್ಸೆಪ್ಟ್ ಮಾಡಿದ್ದೆ. ಅದನ್ನೇ ದುರುಪಯೋಗ ಪಡಿಸಿಕೊಂಡು ಮೊನ್ನೆಯಿಂದ ನನಗೆ ವಿಡಿಯೋ ಕಾಲ್ ಮಾಡುತ್ತಿದ್ದು ಅಶ್ಲೀಲ, ಮೆಸೇಜ್ ಕಳುಹಿಸುತ್ತಿದ್ದಾನೆ.

ಆತನನ್ನು ಬ್ಲಾಕ್ ಮಾಡೋದು ದೊಡ್ಡ ವಿಷಯ ಅಲ್ಲ. ಆದರೆ ನಾಳೆ ಇನ್ನೊಬ್ಬರಿಗೆ ಇದೇ ತರಹ ಆಗಬಾರದು. ಹೀಗಾಗಿ ನಾನು ಸೈಬರ್ ಕ್ರೈಂಗೆ ದೂರು ಕೊಡಲು ನಿರ್ಧಾರ ಮಾಡಿದ್ದೇನೆ ಎಂದು ಭಾವನಾ ಬೆಳಗೆರೆ ತಿಳಿಸಿದ್ದಾರೆ.

ಈ ಕುರಿತು ಭಾವನಾ ಬೆಳಗೆರೆ ಸೈಬರ್​ ಕ್ರೈಂಗೆ ದೂರು ನೀಡಲು ಮುಂದಾಗಿದ್ದಾರೆ.

ಇಂದು ಓದಿದ ಹೆಚ್ಚು ಸುದ್ದಿಗಳು
►►ನೀವು ನನ್ನನ್ನು ಪ್ರಶ್ನಿಸುವಂತೆ ನರೇಂದ್ರ ಮೋದಿಯವರನ್ನು ಪ್ರಶ್ನಿಸಲಾರಿರಿ: ರಾಹುಲ್ ಗಾಂಧಿ:
http://bit.ly/2oXCRli
►►ಆಂಧ್ರಪ್ರದೇಶದಲ್ಲಿ ಭೀಕರ ಅಪಘಾತ: ಕಾಸರಗೋಡು ಮೂಲದ ನಾಲ್ವರು ಮೃತ್ಯು: http://bit.ly/2p5zCaE
►►ತಂದೆ-ತಾಯಿ ಹೊರಗೆ ಕಳಿಸಿ ಬಾಲಕಿ ಅತ್ಯಾಚಾರ: ಜ್ಯೋತಿಷಿ ಸೆರೆ: http://bit.ly/2Div59G
►►ವಿದ್ವತ್ ಚಿಕಿತ್ಸೆಯ ವರದಿ ಬಹಿರಂಗ: ಮಲ್ಯ ಆಸ್ಪತ್ರೆ ವೈದ್ಯರಿಗೆ ಸಿಸಿಬಿ ನೋಟೀಸ್: http://bit.ly/2FstBjl
►►ಗೌರಿ ಲಂಕೇಶ್ ಹತ್ಯೆ: ಗೋವಾ ಸೇರಿದಂತೆ ಹಲವೆಡೆ ಆರೋಪಿ ನವೀನ್ ಕುಮಾರ್ ವಿಚಾರಣೆ: http://bit.ly/2FyZMtl
►►'ಪಳ್ಳಿಕಟ್ಟು ಶಬರಿಮಲೈಕ್ಕು' ಭಕ್ತಿಗೀತೆ ಧಾಟಿಯಲ್ಲಿ ಮೊಯ್ದಿನ್ ಬಾವಾ ಪ್ರಚಾರ: ದೂರು ದಾಖಲು: http://bit.ly/2Dg8drH
►►ಉಡುಪಿಗೆ ಬಿಜೆಪಿ ಏನೂ ಮಾಡಿಲ್ಲ. ಚುನಾವಣೆಯಲ್ಲಿ ಈ ಬಾರಿ ಸ್ಪರ್ಧಿಸುವೆ: ಶಿರೂರು ಸ್ವಾಮಿ: http://bit.ly/2GeLZJK

Related Tags: Bhavana Belagere, Facebook, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ