ನೀವು ನನ್ನನ್ನು ಪ್ರಶ್ನಿಸುವಂತೆ ನರೇಂದ್ರ ಮೋದಿಯವರನ್ನು ಪ್ರಶ್ನಿಸಲಾರಿರಿ: ರಾಹುಲ್ ಗಾಂಧಿ
ಭಾರತದ ಯಶಸ್ಸು ಕಾಂಗ್ರೆಸ್‌ನಿಂದ ಆಗಿದ್ದಲ್ಲ, ಭಾರತೀಯರಿಂದ ಆಗಿದ್ದು. ಆದರೆ ಈ ಯಶಸ್ಸಿನಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆಗಳು ಬೇಕಾದಷ್ಟಿವೆ.

ಕರಾವಳಿ ಕರ್ನಾಟಕ ವರದಿ

ಹೊಸದಿಲ್ಲಿ:
ದೇಶದ ಆರ್ಥಿಕತೆಗೆ ನಿಮ್ಮ ಕುಟುಂಬದ ಕೊಡುಗೆ ಏನು ಎಂಬ ಪ್ರಶ್ನೆಗೆ ರಾಹುಲ್ ಗಾಂಧಿಯವರು 'ಭಾರತದ ಯಶಸ್ಸು ಕಾಂಗ್ರೆಸ್‌ನಿಂದ ಆಗಿದ್ದಲ್ಲ, ಭಾರತೀಯರಿಂದ ಆಗಿದ್ದು. ಆದರೆ ಈ ಯಶಸ್ಸಿನಲ್ಲಿ ಕಾಂಗ್ರೆಸ್ ಪಕ್ಷದ ಮಹತ್ವಪೂರ್ಣ ಕೊಡುಗೆಗಳು ಬೇಕಾದಷ್ಟಿವೆ' ಎಂದು ಒಂದೊಂದಾಗಿ ಪಟ್ಟಿ ಮಾಡಿದ್ದು, ಪ್ರೇಕ್ಷಕರ ಭಾರೀ ಮೆಚ್ಚುಗೆಗೆ ಪಾತ್ರವಾದ ಘಟನೆ ವರದಿಯಾಗಿದೆ.

ಸಿಂಗಾಪುರದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಹಳೆ ವಿದ್ಯಾರ್ಥಿಗಳ ಜೊತೆ ಸಂವಾದದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಮುಜುಗರಕ್ಕೀಡು ಮಾಡಲು ಪ್ರಯತ್ನಿಸಲಾಯಿತು. ಆದರೆ ಅಂಥ ಪ್ರಶ್ನೆಯನ್ನು ರಾಹುಲ್ ಅತ್ಯಂತ ಸಮರ್ಥವಾಗಿ ಎಲ್ಲರೂ ಅವರ ಉತ್ತರ ಮೆಚ್ಚಿ ಕರತಾಡನಗೈದು ಸ್ವಾಗತಿಸುವಂತೆ ನಿರಾಳವಾಗಿ ಎದುರಿಸಿದರು.

ಭಾರತದ ಯಶಸ್ಸಿಗೆ ಕಾಂಗ್ರೆಸ್ ಪಕ್ಷ ಏನನ್ನೂ ಮಾಡಿಲ್ಲ ಎಂಬವರನ್ನೂ ನಾನು ದ್ವೇಷಿಸಲಾರೆ. ನಾನು ಅಂಥವರನ್ನೂ ಅಪ್ಪಿಕೊಳ್ಳಬಲ್ಲೆ. ಅವರಿಗೆ ಒಪ್ಪಿಗೆಯಾಗುವಂತೆ ಅವರೊಡನೆ ಚರ್ಚಿಸಬಲ್ಲೆ. ನಾನು ಅವರನ್ನು ಒಪ್ಪಿಸಲು ಸಾಧ್ಯವಾಗದಿದ್ದರೂ ಚಿಂತಿಸಲಾರೆ.

ಯಾಕೆಂದರೆ ನಾನು ಇನ್ನೊಬ್ಬರನ್ನು ಪ್ರೀತಿಸಲು ಬಯಸುವ ವ್ಯಕ್ತಿ. ನನ್ನ ವಿರೋಧಿಗಳನ್ನೂ ಪ್ರೀತಿಸುವೆ. ಆದರೆ ನೀವು ನನ್ನನ್ನು ಪ್ರಶ್ನಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸಲಾರಿರಿ. ಯಾಕೆಂದರೆ ಅವರು ಪ್ರಶ್ನೆಗಳನ್ನೇ ಇಷ್ಟಪಡುವುದಿಲ್ಲ. ಭಿನ್ನಾಭಿಪ್ರಾಯವನ್ನೂ ಸಹಿಸುವುದಿಲ್ಲ ಎಂದು ರಾಹುಲ್ ನುಡಿದರು.

ತಂದೆಯ ಹಂತಕರನ್ನೂ ಕ್ಷಮಿಸಿದ್ದೇವೆ
ನಮ್ಮ ತಂದೆಯ ಹಂತಕರನ್ನು ನಾವು ಕ್ಷಮಿಸಿದ್ದೇವೆ. ಕಾರಣ ಯಾವುದೇ ಇರಲಿ, ನಾನು ಯಾವುದೇ ರೀತಿಯ ಹಿಂಸೆಯನ್ನು ಸಮರ್ಥಿಸುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.

ರಾಜಕೀಯದಲ್ಲಿ ಕೆಲ ಸಂಘಟನೆಗಳ ವಿರುದ್ಧ ನಿಂತಾಗ, ಒಂದು ವಿಚಾರದ ಪರವಾಗಿ ನಿಂತಾಗ ಒಂದಲ್ಲಾ ಒಂದು ದಿನ ನಾವು ಸಾವನ್ನಪ್ಪುತ್ತೇವೆಂಬುದು ಖಚಿತವಾಗಿರುತ್ತದೆ. ನನ್ನ ತಂದೆ ಹಾಗೂ ನನ್ನ ಅಜ್ಜಿ ಕೂಡ ಒಂದಲ್ಲಾ ಒಂದು ದಿನ ಸಾವನ್ನಪ್ಪುತ್ತಾರೆಂಬುದು ನಮಗೆ ಗೊತ್ತಿತ್ತು ಎಂದಿದ್ದಾರೆ.

ನನ್ನ ಅಜ್ಜಿಯ ಹತ್ಯೆಯಾದಾಗ ನನಗೆ 14 ವರ್ಷ. ನನ್ನ ತಂದೆಯೂ ಕೊಲೆಯಾಗಿ ಹೋದರು. ಆ ಬಳಿಕ ನನ್ನ ಸುತ್ತ 15 ಅಂಗರಕ್ಷಕರು ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಎನ್ನದೆ ಸದಾ ಕಾಲ ಇರುತ್ತಾರೆ. ಇದೊಂದು ವಿಶೇಷ ಬದುಕು ಎಂದು ನನಗನಿಸುತ್ತಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷರು ನುಡಿದರು.

ಇಂದು ಓದಿದ ಹೆಚ್ಚು ಸುದ್ದಿಗಳು
►►ಆಂಧ್ರಪ್ರದೇಶದಲ್ಲಿ ಭೀಕರ ಅಪಘಾತ: ಕಾಸರಗೋಡು ಮೂಲದ ನಾಲ್ವರು ಮೃತ್ಯು:
http://bit.ly/2p5zCaE
►►ತಂದೆ-ತಾಯಿ ಹೊರಗೆ ಕಳಿಸಿ ಬಾಲಕಿ ಅತ್ಯಾಚಾರ: ಜ್ಯೋತಿಷಿ ಸೆರೆ: http://bit.ly/2Div59G
►►ವಿದ್ವತ್ ಚಿಕಿತ್ಸೆಯ ವರದಿ ಬಹಿರಂಗ: ಮಲ್ಯ ಆಸ್ಪತ್ರೆ ವೈದ್ಯರಿಗೆ ಸಿಸಿಬಿ ನೋಟೀಸ್: http://bit.ly/2FstBjl
►►ಗೌರಿ ಲಂಕೇಶ್ ಹತ್ಯೆ: ಗೋವಾ ಸೇರಿದಂತೆ ಹಲವೆಡೆ ಆರೋಪಿ ನವೀನ್ ಕುಮಾರ್ ವಿಚಾರಣೆ: http://bit.ly/2FyZMtl
►►'ಪಳ್ಳಿಕಟ್ಟು ಶಬರಿಮಲೈಕ್ಕು' ಭಕ್ತಿಗೀತೆ ಧಾಟಿಯಲ್ಲಿ ಮೊಯ್ದಿನ್ ಬಾವಾ ಪ್ರಚಾರ: ದೂರು ದಾಖಲು: http://bit.ly/2Dg8drH
►►ಉಡುಪಿಗೆ ಬಿಜೆಪಿ ಏನೂ ಮಾಡಿಲ್ಲ. ಚುನಾವಣೆಯಲ್ಲಿ ಈ ಬಾರಿ ಸ್ಪರ್ಧಿಸುವೆ: ಶಿರೂರು ಸ್ವಾಮಿ: http://bit.ly/2GeLZJK

Related Tags: Rahul Gandh, Economic Policies, Singapore Event, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ