ಆಂಧ್ರಪ್ರದೇಶದಲ್ಲಿ ಭೀಕರ ಅಪಘಾತ: ಕಾಸರಗೋಡು ಮೂಲದ ನಾಲ್ವರು ಮೃತ್ಯು

ಕರಾವಳಿ ಕರ್ನಾಟಕ ವರದಿ

ಆಂಧ್ರಪ್ರದೇಶ:
ಕಾರು ಹಾಗೂ ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾಸರಗೋಡು ಮೂಲದ ಮಹಿಳೆ ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಇಲ್ಲಿನ ಚಿತ್ತೂರಿನಲ್ಲಿ ಇಂದು ನಸುಕಿನ ಜಾವ ಸಂಭವಿಸಿದೆ. 

ಮೃತರನ್ನು ಕಾಸರಗೋಡು ಮೂಲದ ಕುಂಬಳೆಯ ನಾಯ್ಕಪಿನವರಾದ ಪಕೀರ ಗಟ್ಟಿ, ಸಹೋದರ ಮಂಜಪ್ಪ ಗಟ್ಟಿ, ಮಂಜಪ್ಪ ಗಟ್ಟಿ ಪತ್ನಿ ಸುಂದರಿ ಎಂದು ಗುರುತಿಸಲಾಗಿದೆ.

ಇನ್ನು ಅಪಘಾತದಲ್ಲಿ ನಾಲ್ಕು ಮಂದಿಗೆ ತೀವ್ರವಾಗಿ ಗಾಯಗಳಾಗಿದ್ದು, ಕೂಡಲೇ ಅವರನ್ನು ಬಂಗಾರುಪಾಳ್ಯಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೇರಳದ ಕಾಸರಗೋಡುನಿಂದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಕಾರಿನಲ್ಲಿ ತೆರಳುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ. ಕಾರು ಬಂಗಾರುಪಾಳ್ಯಂ ಸಮೀಪಸುತ್ತಿದ್ದಂತೆ ಖಾಸಗಿ ಬಸ್ಸೊಂದು ಕಂಟೈನರ್ ಅನ್ನು ಓವರ್ ಟೇಕ್ ಮಾಡುವ ಭರದಲ್ಲಿ ಎದುರಿಗೆ ಬರುತ್ತಿದ್ದ ಕಾರಿಗೆ ಢಿಕ್ಕಿ ಹೊಡೆದಿದೆ.

ಈ ಕುರಿತು ಬಂಗಾರುಪಾಳ್ಯಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಂದು ಓದಿದ ಹೆಚ್ಚು ಸುದ್ದಿಗಳು
►►ತಂದೆ-ತಾಯಿ ಹೊರಗೆ ಕಳಿಸಿ ಬಾಲಕಿ ಅತ್ಯಾಚಾರ: ಜ್ಯೋತಿಷಿ ಸೆರೆ:
http://bit.ly/2Div59G
►►ವಿದ್ವತ್ ಚಿಕಿತ್ಸೆಯ ವರದಿ ಬಹಿರಂಗ: ಮಲ್ಯ ಆಸ್ಪತ್ರೆ ವೈದ್ಯರಿಗೆ ಸಿಸಿಬಿ ನೋಟೀಸ್: http://bit.ly/2FstBjl
►►ಗೌರಿ ಲಂಕೇಶ್ ಹತ್ಯೆ: ಗೋವಾ ಸೇರಿದಂತೆ ಹಲವೆಡೆ ಆರೋಪಿ ನವೀನ್ ಕುಮಾರ್ ವಿಚಾರಣೆ: http://bit.ly/2FyZMtl
►►'ಪಳ್ಳಿಕಟ್ಟು ಶಬರಿಮಲೈಕ್ಕು' ಭಕ್ತಿಗೀತೆ ಧಾಟಿಯಲ್ಲಿ ಮೊಯ್ದಿನ್ ಬಾವಾ ಪ್ರಚಾರ: ದೂರು ದಾಖಲು: http://bit.ly/2Dg8drH
►►ಉಡುಪಿಗೆ ಬಿಜೆಪಿ ಏನೂ ಮಾಡಿಲ್ಲ. ಚುನಾವಣೆಯಲ್ಲಿ ಈ ಬಾರಿ ಸ್ಪರ್ಧಿಸುವೆ: ಶಿರೂರು ಸ್ವಾಮಿ: http://bit.ly/2GeLZJK
►►ಬ್ಯಾಂಕ್‌ಗೆ ವಂಚನೆ ಆರೋಪ: ಬಹುಭಾಷಾ ನಟಿ ಸಿಂಧು ಮೆನನ್ ವಿರುದ್ದ ಎಫ್‌ಐಆರ್: http://bit.ly/2FuHwRM

Related Tags: Andhra Pradesh Accident, Four Death, Kasaragod Family, Chittoor Accident, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ