ತಂದೆ-ತಾಯಿ ಹೊರಗೆ ಕಳಿಸಿ ಬಾಲಕಿ ಅತ್ಯಾಚಾರ: ಜ್ಯೋತಿಷಿ ಸೆರೆ

ಕರಾವಳಿ ಕರ್ನಾಟಕ ವರದಿ

ಪುತ್ತೂರು:
ಜ್ಯೋತಿಷ್ಯ ಕೇಳಲು ತಂದೆ-ತಾಯಿಯೊಂದಿಗೆ ಬಂದಿದ್ದ ಬಾಲಕಿಯನ್ನು ಕೋಣೆಗೆ ಕರೆಸಿ ಅತ್ಯಾಚಾರಗೈದ ಪ್ರಕರಣದಲ್ಲಿ ಆರೋಪಿ ಜ್ಯೋತಿಷಿಯನ್ನು ಬಂಧಿಸಲಾಗಿದೆ.

ಬನ್ನೂರು ನೆಕ್ಕಿಲದ ಬಾಲಚಂದ್ರ ಆಚಾರ್ಯ(34) ಬಂಧಿತ ಆರೋಪಿಯಾಗಿದ್ದು, ಈತನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಲಾಗಿದೆ.

ಪುತ್ತೂರು ಕಸಬಾ ವ್ಯಾಪ್ತಿಯ ದಂಪತಿ ಮಾರ್ಚ್ 3ರಂದು ಆಚಾರ್ಯನ ಬಳಿ ಜ್ಯೋತಿಷ್ಯ ಕೇಳಲು ಹೋಗಿದ್ದರು. ಈ ಸಂದರ್ಭ ಈತ ದಂಪತಿಯನ್ನು ಹೊರಗೆ ಕುಳಿತುಕೊಳ್ಳುವಂತೆ ಸೂಚಿಸಿ, ಬಾಲಕಿಯನ್ನು ಕೋಣೆಯ ಒಳಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾಗಿ ಬಾಲಕಿಯ ತಂದೆ-ತಾಯಿ ಮಾರ್ಚ್ 9ರಂದು ಪೊಲೀಸ್ ದೂರು ನೀಡಿದ್ದರು.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಅವಿವಾಹಿತ ಜ್ಯೋತಿಷಿ ಬಾಲಕೃಷ್ಣ ಆಚಾರ್ಯ ಮನೆಯಲ್ಲೇ ಜ್ಯೋತಿಷ್ಯ ಹೇಳುತ್ತಿದ್ದ.

ಇಂದು ಓದಿದ ಹೆಚ್ಚು ಸುದ್ದಿಗಳು
►►ವಿದ್ವತ್ ಚಿಕಿತ್ಸೆಯ ವರದಿ ಬಹಿರಂಗ: ಮಲ್ಯ ಆಸ್ಪತ್ರೆ ವೈದ್ಯರಿಗೆ ಸಿಸಿಬಿ ನೋಟೀಸ್:
http://bit.ly/2FstBjl
►►ಗೌರಿ ಲಂಕೇಶ್ ಹತ್ಯೆ: ಗೋವಾ ಸೇರಿದಂತೆ ಹಲವೆಡೆ ಆರೋಪಿ ನವೀನ್ ಕುಮಾರ್ ವಿಚಾರಣೆ: http://bit.ly/2FyZMtl
►►'ಪಳ್ಳಿಕಟ್ಟು ಶಬರಿಮಲೈಕ್ಕು' ಭಕ್ತಿಗೀತೆ ಧಾಟಿಯಲ್ಲಿ ಮೊಯ್ದಿನ್ ಬಾವಾ ಪ್ರಚಾರ: ದೂರು ದಾಖಲು: http://bit.ly/2Dg8drH
►►ಉಡುಪಿಗೆ ಬಿಜೆಪಿ ಏನೂ ಮಾಡಿಲ್ಲ. ಚುನಾವಣೆಯಲ್ಲಿ ಈ ಬಾರಿ ಸ್ಪರ್ಧಿಸುವೆ: ಶಿರೂರು ಸ್ವಾಮಿ: http://bit.ly/2GeLZJK
►►ಬ್ಯಾಂಕ್‌ಗೆ ವಂಚನೆ ಆರೋಪ: ಬಹುಭಾಷಾ ನಟಿ ಸಿಂಧು ಮೆನನ್ ವಿರುದ್ದ ಎಫ್‌ಐಆರ್: http://bit.ly/2FuHwRM

Related Tags: Puttur Rape, Rape, Astrologer Arrested, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಬಾಲಕಿ ಅತ್ಯಾಚಾರ, ಜ್ಯೋತಿಷಿ ಸೆರೆ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ