ವಿದ್ವತ್ ಚಿಕಿತ್ಸೆಯ ವರದಿ ಬಹಿರಂಗ: ಮಲ್ಯ ಆಸ್ಪತ್ರೆ ವೈದ್ಯರಿಗೆ ಸಿಸಿಬಿ ನೋಟೀಸ್

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಮಲ್ಯ ಆಸ್ಪತ್ರೆ ವೈದ್ಯ ಡಾ. ಆನಂದ್‌ಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ.

ಗಾಯಾಳು ವಿದ್ವತ್‌ಗೆ ಚಿಕಿತ್ಸೆ ನೀಡಿದ್ದ ವೈದ್ಯರು‌, ವೈದ್ಯಕೀಯ ವರದಿಯನ್ನು ಸಿಸಿಬಿಗೆ ನೀಡಬೇಕಿತ್ತು. ಅದಕ್ಕೂ ಮುನ್ನವೇ ವರದಿಯನ್ನು ಮಾಧ್ಯಮಗಳಿಗೆ ನೀಡಿದ್ದಾರೆ. ಇದು ತನಿಖೆಯ ಮೇಲೆ ಪರಿಣಾಮ ಬೀರಿದ್ದು, ಹೀಗಾಗಿ ನೋಟಿಸ್‌ ನೀಡಿದ್ದೇವೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ನೋಟಿಸ್‌ಗೆ ಉತ್ತರಿಸಲು ಕಾಲಾವಕಾಶ ನೀಡಿದ್ದೇವೆ. ನಿಗದಿತ ದಿನದಂದು ಉತ್ತರ ಬಾರದಿದ್ದರೆ ಆಸ್ಪತ್ರೆಗೆ ಹೋಗಿ ವಿಚಾರಣೆಗೆ ಒಳಪಡಿಸಲಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಿಸ್ಚಾರ್ಜ್ ವರದಿಯನ್ನು ಮುಖ್ಯ ವೈದ್ಯಾಧಿಕಾರಿ ಬರೆಯಬೇಕಿದ್ದರೂ ಡಾ. ಆನಂದ್ ಬರೆದಿದ್ದಾರೆ. ಅಲ್ಲದೇ ಆಸ್ಪತ್ರೆಯಲ್ಲಿ ಗಲಾಟೆಯಾಗಿಲ್ಲ, ವಿದ್ವತ್ ನಾಟಕ ಆಡ್ತಿದ್ದಾನೆ ಎಂದು ವೈದ್ಯಕೀಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ರೋಗಿಯ ಅರೋಗ್ಯ ಸ್ಥಿತಿಯನ್ನಷ್ಟೇ ಬರೆಯೋದು ಬಿಟ್ಟು ರೋಗಿಯ ಬೇರೆಲ್ಲಾ ವಿಚಾರ ಬರೆದಿರುವುದರಿಂದ ವೈಯಕ್ತಿಕ ಹಿತಾಸಕ್ತಿ ಸಾಬೀತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ಓದಿದ ಹೆಚ್ಚು ಸುದ್ದಿಗಳು
►►ಗೌರಿ ಲಂಕೇಶ್ ಹತ್ಯೆ: ಗೋವಾ ಸೇರಿದಂತೆ ಹಲವೆಡೆ ಆರೋಪಿ ನವೀನ್ ಕುಮಾರ್ ವಿಚಾರಣೆ:
http://bit.ly/2FyZMtl
►►'ಪಳ್ಳಿಕಟ್ಟು ಶಬರಿಮಲೈಕ್ಕು' ಭಕ್ತಿಗೀತೆ ಧಾಟಿಯಲ್ಲಿ ಮೊಯ್ದಿನ್ ಬಾವಾ ಪ್ರಚಾರ: ದೂರು ದಾಖಲು: http://bit.ly/2Dg8drH
►►ಉಡುಪಿಗೆ ಬಿಜೆಪಿ ಏನೂ ಮಾಡಿಲ್ಲ. ಚುನಾವಣೆಯಲ್ಲಿ ಈ ಬಾರಿ ಸ್ಪರ್ಧಿಸುವೆ: ಶಿರೂರು ಸ್ವಾಮಿ: http://bit.ly/2GeLZJK
►►ಬ್ಯಾಂಕ್‌ಗೆ ವಂಚನೆ ಆರೋಪ: ಬಹುಭಾಷಾ ನಟಿ ಸಿಂಧು ಮೆನನ್ ವಿರುದ್ದ ಎಫ್‌ಐಆರ್: http://bit.ly/2FuHwRM
►►ರೌಡಿಶೀಟರ್ ನವೀನ್ ಡಿ'ಸೋಜಾ ಬರ್ಬರ ಹತ್ಯೆ: ಆರೋಪಿಗಳ ಸೆರೆ: http://bit.ly/2HmnlpA

Related Tags: Attack by Mohammed Napalad, MLA Haris, Vidwath, Congress MLA, Malya Hospital, Dr. Anandh, CCB Notice, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ