'ಪಳ್ಳಿಕಟ್ಟು ಶಬರಿಮಲೈಕ್ಕು' ಭಕ್ತಿಗೀತೆ ಧಾಟಿಯಲ್ಲಿ ಮೊಯ್ದಿನ್ ಬಾವಾ ಪ್ರಚಾರ: ದೂರು ದಾಖಲು

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ಶಾಸಕ ಮೊಯ್ದಿನ್ ಬಾವ ಅವರ ಚುನಾವಣಾ ಪ್ರಚಾರದ ಹಾಡು ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ಪ್ರಸಿದ್ಧ ಭಕ್ತಿಗೀತೆಯಾದ 'ಪಳ್ಳಿಕಟ್ಟು ಶಬರಿಮಲೈಕ್ಕು' ಹಾಡನ್ನು ಅನುಕರಿಸಲಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದ್ದು, ಇದೀಗ ಶಾಸಕ ಬಾವಾ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಾಸಕ ಮೊಯ್ದಿನ್ ಬಾವಾ ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ, ಹಿಂದೂ ದೇವರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಹಿಂದೂ ಸಂಘಟನೆಯ ಮುಖಂಡ ಅರುಣ್ ಕುಮಾರ್ ಪುತ್ತಿಲ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಶಾಸಕ ಮೊಯ್ದಿನ್ ಬಾವಾ ಅಯ್ಯಪ್ಪ ಸ್ವಾಮಿ ಸ್ತುತಿಯನ್ನು ದುರ್ಬಳಕೆ ಮಾಡಿಕೊಂಡು ಸೌಹಾರ್ದ ಕದಡಲು ಯತ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕ ಮೊಯ್ದಿನ್ ಬಾವಾ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ.

ಮೊಯ್ದಿನ್ ಬಾವಾ ಅವರ ಸಾಧನೆಗಳನ್ನು ಕೊಂಡಾಡುವ, ಕ್ಷೇತ್ರ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳನ್ನು ಉಲ್ಲೇಖಿಸಿ ತುಳು ಭಾಷೆಯಲ್ಲಿ ಹಾಡು ರಚಿಸಲಾಗಿದ್ದು, ಅಯ್ಯಪ್ಪ ಭಕ್ತಿಗೀತೆಯ ಧಾಟಿಯ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಷ್ಟೆ ಅಲ್ಲ ಮೊಯ್ದಿನ್ ಬಾವಾ ಹಿಂದೂಗಳ ಭಾವನೆಗೆ ಧಕ್ಕೆ ಉಂಟುಮಾಡಿದ್ದಾರೆ ಎಂದು ಆರೋಪಗಳೂ ಕೇಳಿಬಂದಿತ್ತು.

ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವಂತೆ ಇಂತಹ ಹಾಡುಗಳನ್ನು ಅಭ್ಯರ್ಥಿಗಳನ್ನು ಹಾಡಿ ಹೊಗಳುವುದಕ್ಕಾಗಿ ಬಳಸುವುದು ರೂಢಿ. ಆದರೆ ಇಲ್ಲಿ ಮೊಯ್ದಿನ್ ಬಾವಾ ಜನಪ್ರಿಯ ಭಕ್ತಿಗೀತೆಯೊಂದನ್ನು ತನ್ನ ಪ್ರಚಾರಕ್ಕಾಗಿ ಬಳಸಿಕೊಳ್ಳುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು.

ಇದನ್ನೂ ಓದಿ:
►►ಅಯ್ಯಪ್ಪಸ್ವಾಮಿ ಭಕ್ತಿಗೀತೆ ಧಾಟಿಯಲ್ಲಿ ಮೊಯ್ದಿನ್ ಬಾವಾ ಪ್ರಚಾರ ಗೀತೆ ವಿವಾದ:
http://bit.ly/2IeaLKr

ಇಂದು ಓದಿದ ಹೆಚ್ಚು ಸುದ್ದಿಗಳು
►►ಉಡುಪಿಗೆ ಬಿಜೆಪಿ ಏನೂ ಮಾಡಿಲ್ಲ. ಚುನಾವಣೆಯಲ್ಲಿ ಈ ಬಾರಿ ಸ್ಪರ್ಧಿಸುವೆ: ಶಿರೂರು ಸ್ವಾಮಿ:
http://bit.ly/2GeLZJK
►►ಬ್ಯಾಂಕ್‌ಗೆ ವಂಚನೆ ಆರೋಪ: ಬಹುಭಾಷಾ ನಟಿ ಸಿಂಧು ಮೆನನ್ ವಿರುದ್ದ ಎಫ್‌ಐಆರ್: http://bit.ly/2FuHwRM
►►ರೌಡಿಶೀಟರ್ ನವೀನ್ ಡಿ'ಸೋಜಾ ಬರ್ಬರ ಹತ್ಯೆ: ಆರೋಪಿಗಳ ಸೆರೆ: http://bit.ly/2HmnlpA
►►ಜೆಸಿರೆಟ್ ಮಹಿಳಾ ದಿನಾಚರಣೆ: ಪತ್ರಕರ್ತೆ ಅಶ್ವಿನಿ ಹಕ್ಲಾಡಿ ಸೇರಿ ಐವರಿಗೆ ಪ್ರಶಸ್ತಿ: http://bit.ly/2DgMCiB
►►ಮೋದಿಯ 'ಅಚ್ಛೇ ದಿನ್' ವಾಜಪೇಯಿಯ 'ಇಂಡಿಯಾ ಶೈನಿಂಗ್' ಗತಿ ಕಾಣಲಿದೆ: ಸೋನಿಯಾ ಗಾಂಧಿ: http://bit.ly/2tylyfa
►►2011ರ ಕೆಪಿಎಸ್‌ಸಿ ನೇಮಕಾತಿ ಆದೇಶ ಹೈಕೋರ್ಟ್‌ನಿಂದ ರದ್ದು: http://bit.ly/2tvJ3FT
►►ಗೌರಿ ಲಂಕೇಶ್‌ ಹತ್ಯೆಯಲ್ಲಿ ಮೊದಲ ಬಂಧನ. ಕೆ.ಟಿ. ನವೀನ್‌ ಕುಮಾರ್ ಆರೋಪಿ ನಂಬರ್ 1: http://bit.ly/2p25IUA

Related Tags: Mohiuddin Bava, Mangalore MLA, Ayyappa Swami Song, Elections, Controversy, Police Complaint, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ