ಉಡುಪಿಗೆ ಬಿಜೆಪಿ ಏನೂ ಮಾಡಿಲ್ಲ. ಚುನಾವಣೆಯಲ್ಲಿ ಈ ಬಾರಿ ಸ್ಪರ್ಧಿಸುವೆ: ಶಿರೂರು ಸ್ವಾಮಿ

ಕರಾವಳಿ ಕರ್ನಾಟಕ ವರದಿ

ಉಡುಪಿ:
ಹಿಂದೂ ಸಮುದಾಯಕ್ಕೆ ಜಿಲ್ಲಾ ಬಿಜೆಪಿಯಿಂದ ಯಾವುದೇ ಕೊಡುಗೆಗಳಿಲ್ಲ. ಹೀಗಾಗಿ ಈ ಬಾರಿಯ ವಿಧಾಸಭಾ ಚುನಾವಣೆಯಲ್ಲಿ ಉಡುಪಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳೀಯಲಿದ್ದೇನೆ ಎಂದು ಶಿರೂರು ಮಠ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಅನೇಕ ಜನಪರವಾದ ಕೆಲಸಗಳನ್ನು ಮಾಡುತ್ತಿದೆ. ಉಡುಪಿಯ ಬಿಜೆಪಿ ನಾಯಕರು ಅಧಿಕಾರದಲ್ಲಿರುವಾಗ ಏನೂ ಕೆಲಸ ಮಾಡಿಲ್ಲ. ಹೀಗಾಗಿ ನಾನು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇನೆ ಎಂದರು.

ಬಿಜೆಪಿ ಒಳ್ಳೆಯ ಕೆಲಸ ಮಾಡಿದ್ದರೆ ನಾನು ಈ ನಿರ್ಧಾರಕ್ಕೆ ಬರುತ್ತಿರಲಿಲ್ಲ. ಒಂದು ವೇಳೆ ಬಿಜೆಪಿಯಿಂದ ನನಗೆ ಟಿಕೆಟ್ ನೀಡಿದರೆ ಬಿಜೆಪಿಯಿಂದಲೇ ಸ್ಪರ್ಧೆಗೆ ಇಳಿಯುತ್ತೇನೆ. ಯೋಗಿ ಆದಿತ್ಯನಾಥ್ ನನಗೆ ಮಾದರಿ ಎಂದು ಶಿರೂರು ಮಠ ಸ್ವಾಮೀಜಿ ನುಡಿದರು.

ಉಸ್ತುವಾರಿ ಸಚಿವರನ್ನು ಹಾಡಿ ಹೊಗಳಿದ ಶಿರೂರು
ಟಿಕೆಟ್ ನೀಡಿದರೆ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಇಚ್ಛಿಸುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿ, ಜಿಲ್ಲೆಯ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಉಡುಪಿಯಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ.

ಇಡೀ ರಾಜ್ಯಕ್ಕೆ ಮಾದರಿಯಾಗುವ ಕೆಲಸಗಳನ್ನು ಪ್ರಮೋದ್ ಮಧ್ವರಾಜ್ ಮಾಡಿ ತೋರಿಸಿದ್ದಾರೆ. ತನ್ನ ಸ್ಪರ್ಧೆಯಿಂದ ಪ್ರಮೋದ್ ಅವರಿಗೆ ಲಾಭವಾಗಲಿದೆ. ಮುಂದಿನ ಚುನಾವಣೆಗೆ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್‌ನಿಂದ ಸ್ಪರ್ಧಿಸುವುದು ಖಚಿತವಾಗಿದೆ ಎಂದ ಅವರು, ಪ್ರಮೋದ್ ವಿರುದ್ದ ಸ್ಪರ್ಧೆಗಿಳಿಯುವುದು ನನ್ನ ಉದ್ದೇಶವಲ್ಲ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.

ಇಂದು ಓದಿದ ಹೆಚ್ಚು ಸುದ್ದಿಗಳು
►►ಬ್ಯಾಂಕ್‌ಗೆ ವಂಚನೆ ಆರೋಪ: ಬಹುಭಾಷಾ ನಟಿ ಸಿಂಧು ಮೆನನ್ ವಿರುದ್ದ ಎಫ್‌ಐಆರ್:
http://bit.ly/2FuHwRM
►►ರೌಡಿಶೀಟರ್ ನವೀನ್ ಡಿ'ಸೋಜಾ ಬರ್ಬರ ಹತ್ಯೆ: ಆರೋಪಿಗಳ ಸೆರೆ: http://bit.ly/2HmnlpA
►►ಜೆಸಿರೆಟ್ ಮಹಿಳಾ ದಿನಾಚರಣೆ: ಪತ್ರಕರ್ತೆ ಅಶ್ವಿನಿ ಹಕ್ಲಾಡಿ ಸೇರಿ ಐವರಿಗೆ ಪ್ರಶಸ್ತಿ: http://bit.ly/2DgMCiB
►►ಮೋದಿಯ 'ಅಚ್ಛೇ ದಿನ್' ವಾಜಪೇಯಿಯ 'ಇಂಡಿಯಾ ಶೈನಿಂಗ್' ಗತಿ ಕಾಣಲಿದೆ: ಸೋನಿಯಾ ಗಾಂಧಿ: http://bit.ly/2tylyfa
►►2011ರ ಕೆಪಿಎಸ್‌ಸಿ ನೇಮಕಾತಿ ಆದೇಶ ಹೈಕೋರ್ಟ್‌ನಿಂದ ರದ್ದು: http://bit.ly/2tvJ3FT
►►ಗೌರಿ ಲಂಕೇಶ್‌ ಹತ್ಯೆಯಲ್ಲಿ ಮೊದಲ ಬಂಧನ. ಕೆ.ಟಿ. ನವೀನ್‌ ಕುಮಾರ್ ಆರೋಪಿ ನಂಬರ್ 1: http://bit.ly/2p25IUA
►►ಅಯ್ಯಪ್ಪಸ್ವಾಮಿ ಭಕ್ತಿಗೀತೆ ಧಾಟಿಯಲ್ಲಿ ಮೊಯ್ದಿನ್ ಬಾವಾ ಪ್ರಚಾರ ಗೀತೆ ವಿವಾದ: http://bit.ly/2IeaLKr
►►ತ್ರಿಪುರಾ ಮುಖ್ಯಮಂತ್ರಿಯಾಗಿ ಬಿಪ್ಲಬ್ ದೇವ್ ಪ್ರಮಾಣವಚನ: http://bit.ly/2Fou9GX

Related Tags: Udupi, Shiroor Swamiji, Enters Election, Independent, BJP Ticket, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ