ಬ್ಯಾಂಕ್‌ಗೆ ವಂಚನೆ ಆರೋಪ: ಬಹುಭಾಷಾ ನಟಿ ಸಿಂಧು ಮೆನನ್ ವಿರುದ್ದ ಎಫ್‌ಐಆರ್

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ನಕಲಿ ದಾಖಲೆಗಳನ್ನು ನೀಡಿ ಸಾಲ ಪಡೆದು ಬರೋಡ ಬ್ಯಾಂಕಿಗೆ ವಂಚನೆ ಮಾಡಿರುವ ಆರೋಪದಲ್ಲಿ ಬಹುಭಾಷಾ ನಟಿ ಸಿಂಧು ಮೆನನ್ ಮತ್ತು ಸಹೋದರ ಸೇರಿದಂತೆ ಹಲವರ ಮೇಲೆ ಪ್ರಕರಣ ದಾಖಲಾಗಿದೆ.

ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್ ಆಫ್ ಬರೋಡಗೆ 36 ಲಕ್ಷ ರೂ. ವಂಚನೆಗೈದ ಆರೋಪದ ಮೇಲೆ ಸಿಂಧು ಮೆನನ್ ಸೇರಿದಂತೆ ನಾಲ್ವರ ವಿರುದ್ಧ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 420 ಅಡಿಯಲ್ಲಿ ಪ್ರಕರಣ ಎಫ್‍ಐಆರ್ ದಾಖಲಾಗಿದೆ.

ಪ್ರಕರಣದಲ್ಲಿ ಸಿಂಧೂ ಮೆನನ್​ರ ಸಹೋದರ ಮನೋಜ್​ ಕಾರ್ತಿಕೇಯನ್​ ವರ್ಮ ಮೊದಲ ಆರೋಪಿಯಾಗಿದ್ದು ಹಾಗೂ 2ನೇ ಆರೋಪಿ ನಾಗಶ್ರೀ ಶಿವಣ್ಣ ಎಂಬುವವರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.

ಸಿಂಧು ಮೆನನ್​ ಅವರನ್ನು 3ನೇ ಆರೋಪಿಯನ್ನಾಗಿಸಲಾಗಿದೆ. 4ನೇ ಆರೋಪಿಯಾಗಿ ಸುಧಾ ರಾಜಶೇಖರ್​ ವರ್ಮ ಎಂಬುವವರ ವಿರುದ್ಧವೂ ದೂರು ದಾಖಲಾಗಿದೆ.

ಬ್ಯಾಂಕ್ ಆಫ್ ಬರೋಡಾದಲ್ಲಿ ಕಾರ್ ಖರೀದಿಗಾಗಿ ಆರೋಪಿಗಳು 36 ಲಕ್ಷ ರೂ ಸಾಲ ಪಡೆದಿದ್ದರು. ಬ್ಯಾಂಕ್‌ಗೆ ಕೊಟ್ಟ ದಾಖಲೆಗಳನ್ನು ಪರಿಶೀಲಿಸಿದಾಗ ನಕಲಿ ಎಂಬುದು ಗೊತ್ತಾಗಿ ಬ್ಯಾಂಕ್​ನ ಮ್ಯಾನೇಜರ್ ರಮೇಶ್ ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.


ಸದ್ಯ ಸಿಂಧು ಮೆನನ್ ಅಮೇರಿಕಾದಲ್ಲಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು, ಈ ಬಗ್ಗೆ ಖಚಿತ ಪಡಿಸಿರುವ ಉತ್ತರ ವಲಯದ ಡಿಸಿಪಿ ಚೇತನ್ ಸಿಂಗ್ ರಾಥೋಡ್, ಈ ಪ್ರಕರಣದಲ್ಲಿ ಸಿಂಧು ಮೆನನ್ ಪರೋಕ್ಷವಾಗಿ ಸಹಕರಿಸಿರಬಹುದು. ಅವರನ್ನು ಕರೆಸಿ ವಿಚಾರಣೆ ನಡೆಸಲಾಗುವುದು. ಒಂದು ವೇಳೆ ಆರೋಪ ಸಾಬೀತಾದರೆ ಬಂಧಿಸುತ್ತೇವೆ ಎಂದಿದ್ದಾರೆ.

ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ಸಿಂಧು ಮೆನನ್ ಕನ್ನಡದ 'ನಂದಿ', 'ಖುಷಿ', 'ಧರ್ಮ', 'ಯಾರೇ ನೀ ಹುಡುಗಿ' ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ.

ಇಂದು ಓದಿದ ಹೆಚ್ಚು ಸುದ್ದಿಗಳು
►►ರೌಡಿಶೀಟರ್ ನವೀನ್ ಡಿ'ಸೋಜಾ ಬರ್ಬರ ಹತ್ಯೆ: ಆರೋಪಿಗಳ ಸೆರೆ:
http://bit.ly/2HmnlpA
►►ಜೆಸಿರೆಟ್ ಮಹಿಳಾ ದಿನಾಚರಣೆ: ಪತ್ರಕರ್ತೆ ಅಶ್ವಿನಿ ಹಕ್ಲಾಡಿ ಸೇರಿ ಐವರಿಗೆ ಪ್ರಶಸ್ತಿ: http://bit.ly/2DgMCiB
►►ಮೋದಿಯ 'ಅಚ್ಛೇ ದಿನ್' ವಾಜಪೇಯಿಯ 'ಇಂಡಿಯಾ ಶೈನಿಂಗ್' ಗತಿ ಕಾಣಲಿದೆ: ಸೋನಿಯಾ ಗಾಂಧಿ: http://bit.ly/2tylyfa
►►2011ರ ಕೆಪಿಎಸ್‌ಸಿ ನೇಮಕಾತಿ ಆದೇಶ ಹೈಕೋರ್ಟ್‌ನಿಂದ ರದ್ದು: http://bit.ly/2tvJ3FT
►►ಗೌರಿ ಲಂಕೇಶ್‌ ಹತ್ಯೆಯಲ್ಲಿ ಮೊದಲ ಬಂಧನ. ಕೆ.ಟಿ. ನವೀನ್‌ ಕುಮಾರ್ ಆರೋಪಿ ನಂಬರ್ 1: http://bit.ly/2p25IUA
►►ಅಯ್ಯಪ್ಪಸ್ವಾಮಿ ಭಕ್ತಿಗೀತೆ ಧಾಟಿಯಲ್ಲಿ ಮೊಯ್ದಿನ್ ಬಾವಾ ಪ್ರಚಾರ ಗೀತೆ ವಿವಾದ: http://bit.ly/2IeaLKr
►►ತ್ರಿಪುರಾ ಮುಖ್ಯಮಂತ್ರಿಯಾಗಿ ಬಿಪ್ಲಬ್ ದೇವ್ ಪ್ರಮಾಣವಚನ: http://bit.ly/2Fou9GX

Related Tags: Actress Sindhu Menon, FIR, RMC Yard Police Station, Bangalore, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ