ಕೊನೆ ಉಸಿರಿನ ತನಕ ಡಿವೋರ್ಸ್ ಕೊಡಲಾರೆ: ಕ್ರಿಕೆಟಿಗ ಶಮಿ ವಿರುದ್ಧ ತಿರುಗಿಬಿದ್ದ ಪತ್ನಿ
ಶಮಿ ನನ್ನ ಬಳಿ ಕ್ಷಮೆ ಕೇಳಬೇಕು. ಆತ ನನ್ನೊಡನೆ ಬದುಕಬೇಕು ಎಂದು ಹೇಳಿದರೆ ಅದು ಷಡ್ಯಂತ್ರ ಹೇಗಾಗುತ್ತದೆ. ನೋವು ಬಹಿರಂಗಪಡಿಸಿದ ಕ್ರಿಕೆಟಿಗನ ಪತ್ನಿ

ಕರಾವಳಿ ಕರ್ನಾಟಕ ವರದಿ

ನವದೆಹಲಿ:
ಆತ ದೊಡ್ಡ ಮೋಸಗಾರ. ನನ್ನ ಕೊನೆಯ ಉಸಿರಿನವರೆಗೂ ಆತನಿಗೆ ವಿಚ್ಛೇದನ ನೀಡುವುದಿಲ್ಲ. ನನ್ನ ಹತ್ತಿರ ಎಲ್ಲಾ ಸಾಕ್ಷ್ಯಗಳಿವೆ. ಸದ್ಯದಲ್ಲೇ  ಆತನನ್ನು ನ್ಯಾಯಲಯಕ್ಕೆ ಎಳೆಯುತ್ತೇನೆ ಎಂದು ಭಾರತೀಯ ಕ್ರಿಕೆಟ್ ತಂಡದ ಬೌಲರ್ ಮೊಹಮ್ಮದ್ ಶಮಿ ಅವರ ಪತ್ನಿ ಹಸೀನ್ ಜಹಾನ್ ಗುಡುಗಿದ್ದಾರೆ.

ಶಮಿ ತನ್ನ ವಿರುದ್ಧದ ಆರೋಪದ ಹಿಂದೆ ತನ್ನ ಕ್ರೀಡಾ ಜೀವನವನ್ನು ಮುಗಿಸುವ ದೊಡ್ಡ ಷಡ್ಯಂತ್ರವೇ ಇದೆ. ಇದೆಲ್ಲ ಸುಳ್ಳು ಸುದ್ದಿ ಎಂದು ಟ್ವೀಟ್ ಮಾಡಿದ್ದಾರೆ.

ಆದರೆ ಅವರ ಪತ್ನಿ ಹಸೀನ್, ಶಮಿ ನನ್ನ ಬಳಿ ಕ್ಷಮೆ ಕೇಳಬೇಕು. ಎಲ್ಲ ವಿವಾಹಿತರೂ ಬದುಕುವಂತೆ ಆತ ನನ್ನೊಡನೆ ಬದುಕಬೇಕು ಎಂದು ಹೇಳಿದರೆ ಅದು ಷಡ್ಯಂತ್ರ ಹೇಗಾಗುತ್ತದೆ ಎಂದಿದ್ದಾರೆ.

ಆತ ನನಗೆ ದೈಹಿಕ ಮತ್ತು ಮಾನಸಿಕವಾಗಿ ಚಿತ್ರಹಿಂಸೆ ನೀಡಿದ. ಮದುವೆಯಾದ ದಿನದಿಂದಲೂ ನನ್ನನ್ನು ಹೆಂಡತಿಯಂತೆ ಕಂಡಿಲ್ಲ. ನನ್ನನ್ನು ಮದುವೆಯಾಗುವ ಮೊದಲು ಆತನಿಗೆ ಬೇರೆ ಯುವತಿಯೊಡನೆ ಐದು ವರ್ಷಗಳ ಸಂಬಂಧವಿತ್ತು.

ಮದುವೆಯಾದ ಬಳಿಕವೂ ಹಲವರೊಡನೆ ಸಂಬಂಧ ಹೊಂದಿದ್ದ. ಸೆಕ್ಸ್ ಮಾಡಿದ. ಹೊಟೇಲುಗಳಲ್ಲಿ ಉಳಿದುಕೊಂಡ. ಆತ ಯಾವತ್ತೂ ತನ್ನ ಪತ್ನಿಯಂತೆ ನನ್ನನ್ನು ನಡೆಸಿಕೊಳ್ಳಲಿಲ್ಲ.

ತನ್ನ ಮೊಬೈಲ್ ಫೋನ್ ಅನ್ನು ನಾನು ಕೈಗೆತ್ತಿಕೊಂಡಾಗಲೆಲ್ಲ ಅದರಲ್ಲಿರುವ ಮಾಹಿತಿಯನ್ನು ಡಿಲೀಟ್ ಮಾಡುತ್ತಿದ್ದ. ಆತನ ಪ್ರೀತಿಯನ್ನಾಗಲೀ, ಹಣಕಾಸಿನ ವ್ಯವಹಾರವಾಗಲೀ, ಬದುಕಿನ ವಿವರಗಳನ್ನಾಗಲೀ ನನ್ನೊಂದಿಗೆ ಹಂಚಿಕೊಳ್ಳದೇ ನನಗೆ ಓರ್ವ ಪತ್ನಿಗೆ ಸಿಗಬೇಕಾಗಿರುವುದನ್ನು ತಪ್ಪಿಸಿದ ಎಂದು ಶಮಿ ಪತ್ನಿ ಹೇಳಿದ್ದಾರೆ. ಇವರು 2014ರಲ್ಲಿ ವಿವಾಹವಾಗಿದ್ದರು.

ಆತನ ತಾಯಿ ಮತ್ತು ಸಹೋದರ ನನ್ನನ್ನು ನಿಂದಿಸಿದ್ದಾರೆ ಎಂದು ಹಸೀನ್ ತಮ್ಮ ಫೇಸ್‌ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:
ಬುರ್ಖಾ ಇಲ್ಲದ ಪತ್ನಿಯ ಜೊತೆ ಫೋಟೊ: ಟೀಕಾಕಾರರ ಬಾಯಿ ಮುಚ್ಚಿಸಿದ ಕ್ರಿಕೆಟಿಗ ಶಮಿ:
http://bit.ly/2ivI0LN

ಇಂದು ಓದಿದ ಹೆಚ್ಚು ಸುದ್ದಿಗಳು:
►►ಮಹಿಳಾ ದಿನಾಚರಣೆ: ಹುಬ್ಬಳ್ಳಿ-ಧಾರವಾಡ 56902 ರೈಲಿಗೆ ಮಹಿಳೆಯರ ಸಾರಥ್ಯ:
http://bit.ly/2G42SXg
►►ಲೋಕಾಯುಕ್ತರಿಗೆ ಚೂರಿ ಹಾಕಿದವ ದೇವರಿಗೂ ಪತ್ರ ಬರೆದಿದ್ದ!: http://bit.ly/2G6YlUc

Related Tags: Cricketer Mohammed Shami, Big Flirt, Mohammed Shami’s Wife, Cheating, Hasin Jahan, Allegations, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ