ಮಹಿಳಾ ದಿನಾಚರಣೆ: ಹುಬ್ಬಳ್ಳಿ-ಧಾರವಾಡ 56902 ರೈಲಿಗೆ ಮಹಿಳೆಯರ ಸಾರಥ್ಯ

ಕರಾವಳಿ ಕರ್ನಾಟಕ ವರದಿ

ಧಾರವಾಡ:
ಹುಬ್ಬಳ್ಳಿ-ಧಾರವಾಡ 56902 ರೈಲನ್ನು ಮಹಿಳಾ ಸಿಬ್ಬಂದಿಯೇ ನಿರ್ವಹಿಸುವ ಮೂಲಕ ‘ಮಹಿಳಾ ದಿನಾಚರಣೆ’ ಆಚರಿಸಿದರು.

ಮುಂಬೈಯ ಮತುಂಗ ರೈಲ್ವೆ ನಿಲ್ದಾಣವನ್ನು ಮಹಿಳೆಯರೇ ನಿರ್ವಹಿಸುತ್ತಿರುವುದರ ಪ್ರೇರಣೆಯಿಂದ ನೈರುತ್ಯ ರೈಲ್ವೆ ವಲಯದ ಧಾರವಾಡ ನಿಲ್ದಾಣದಲ್ಲಿ ಈ ಪ್ರಯತ್ನ ಮಾಡಲಾಗಿದೆ.

ಡಿ.ಸಂಗೀತ ಲೋಕೋ ಪೈಲೆಟ್ ಆಗಿ ಎಂಜಿನ್ ಚಾಲನೆ ಮಾಡಿದರು.  8.51ಕ್ಕೆ ರೈಲು ಹುಬ್ಬಳ್ಳಿಯ ಕಡೆ ಪ್ರಯಾಣಿಸಿತು.

ಗೇಟ್ ವುಮನ್‌ನಿಂದ ಸಹಾಯಕ ವಾಣಿಜ್ಯ ಅಧಿಕಾರಿಯವರೆಗೆ ವಿವಿಧ ಹಂತಗಳಲ್ಲಿ 25 ಮಹಿಳಾ ಸಿಬ್ಬಂದಿ ಕಾರ್ಯ ನಿರ್ವಹಿಸಿದರು.

ಮುಂದೆ ಈ ನಿಲ್ದಾಣವನ್ನು ಸಂಪೂರ್ಣ ಮಹಿಳಾ ಸಿಬ್ಬಂದಿಯಿಂದಲೇ ನಿರ್ವಹಿಸುವ ದಿಸೆಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಹಾಯಕ ವಾಣಿಜ್ಯ ಅಧಿಕಾರಿ ಪ್ರಿಯಾ ಹೇಳಿದ್ದಾರೆ.Related Tags: Kannada News, Karnataka News, Karavali Karnataka, Latest Kannada News, ಹುಬ್ಬಳ್ಳಿ-ಧಾರವಾಡ 56902 ರೈಲು, ಮಹಿಳಾ ದಿನಾಚರಣೆ, ಕರಾವಳಿ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ