ನೇಮದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಅಸಹಕಾರ: ವೃದ್ಧನ ಹೆಣಕ್ಕೆ ಹೆಗಲಾಗಿ ಮಾನವೀಯತೆ ಮೆರೆದ ಪೊಲೀಸರು

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ಗುಡ್ಡದಿಂದ ಬಿದ್ದು ಮೃತಪಟ್ಟ ವೃದ್ಧನ ಶವವನ್ನು ಮನೆಗೆ ಕೊಂಡೊಯ್ಯಲು ಗ್ರಾಮಸ್ಥರು ಹಿಂಜರಿದ ಸಂದರ್ಭ ಕಡಬ ಠಾಣಾ ಪೊಲೀಸರು ಶವವನ್ನು ಹೆಗಲ ಮೇಲೆ ಹೊತ್ತೊಯ್ದು ಅಂತ್ಯ ಸಂಸ್ಕಾರ ಮಾಡಿ ಕರ್ತವ್ಯದ ಜೊತೆಗೆ ಮಾನವೀಯತೆ ಮೆರೆದ ಅಪರೂಪದ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯಿಂದ ವರದಿಯಾಗಿದೆ.

ಕಡಬ ಪೊಲೀಸ್ ಠಾಣೆಯ ಪಿಎಸ್‍ಐ ಪ್ರಕಾಶ್, ಎಎಸ್‍ಐ ರವಿ, ಹೋಮ್ ಗಾರ್ಡ್ ಸಂದೇಶ್ ಶವ ಹೊತ್ತು ಸಾಗುತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಪೊಲೀಸರ ಮಾನವೀಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಜಂಬದಹಳ್ಳಿಯ ಅಸಲಪ್ಪ (80) ಎಂಬುವವರು 20 ವರ್ಷಗಳಿಂದ ಕೊಯಿಲದ ಗುಲ್ಲೋಡಿಯಲ್ಲಿ ವಾಸವಾಗಿದ್ದರು.

ಶನಿವಾರ ಮಧ್ಯಾಹ್ನ ಜಂಬದಹಳ್ಳಿಗೆ ಹೋಗಲು ಕಾಲುದಾರಿಯಲ್ಲಿ ಅವರು ಕೊಯಿಲಕ್ಕೆ ಹೊರಟಿದ್ದರು. ಮನೆಯಿಂದ ಸುಮಾರು ಅರ್ಧ ಕಿಲೋಮೀಟರ್‌ ದೂರದಲ್ಲಿ ಗುಡ್ಡದಲ್ಲಿ ಕುಸಿದುಬಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದರು.

ಕೊಯಿಲದಲ್ಲಿ ಭಾನುವಾರದಿಂದ ದೈವದ ನೇಮ ಮತ್ತು ಜಾತ್ರೆ ಪ್ರಾರಂಭವಾಗಲಿದೆ. ಶವ ಮುಟ್ಟಿದರೆ ಮೈಲಿಗೆ ಆಗುತ್ತದೆ ಎಂಬ ನಂಬಿಕೆಯಲ್ಲಿ ಗ್ರಾಮದ ಯಾರೊಬ್ಬರೂ ಮೃತದೇಹ ಸಾಗಿಸಲು ನೆರವಿಗೆ ಬಂದಿರಲಿಲ್ಲ. ಇದರಿಂದ ಮೃತ ವ್ಯಕ್ತಿಯ ಕುಟುಂಬ ತೀರಾ ಸಂಕಷ್ಟಕ್ಕೆ ಸಿಲುಕಿತ್ತು. ನಂತರ ಪಿಎಸ್ಐ ಪ್ರಕಾಶ್‌, ಸಿಬ್ಬಂದಿಗಳು ಮೃತರ ಮಗನೊಂದಿಗೆ ಸೇರಿಕೊಂಡು ಶವ ಹೊರಲು ಹೆಗಲು ಕೊಟ್ಟರು.

ಮೃತದೇಹ ಮನೆ ತಲುಪಿದ ಬಳಿಕವೂ ನೆರವಿಗೆ ಹೆಚ್ಚಿನ ಜನರು ಇರಲಿಲ್ಲ. ಅಲ್ಲಿಯೂ ಪೊಲೀಸರ ನೆರವಿನಲ್ಲಿ ಅಸಲಪ್ಪ ಅವರ ಜಮೀನಿನಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.

ಇಂದು ಹೆಚ್ಚು ಓದಿದ ಸುದ್ದಿಗಳು:
►►ಕಾಡಾನೆ ತುಳಿತಕ್ಕೆ ಅರಣ್ಯ ಸಂರಕ್ಷಣಾಧಿಕಾರಿ ಬಲಿ:
http://bit.ly/2oGeJ6n
►►ಬಸ್ ಅಪಘಾತ: ಪವರ್ ಲಿಫ್ಟಿಂಗ್ ಪಟು ವಿಶ್ವನಾಥ ಗಾಣಿಗ ಅಪಾಯದಿಂದ ಪಾರು: http://bit.ly/2FbhrLq
►►ಮೇಘಾಲಯದಲ್ಲಿ ಅತಂತ್ರ ಸ್ಥಿತಿ: ಸರ್ಕಾರ ರಚನೆಗಾಗಿ ಶಿಲ್ಲಾಂಗ್‌ನತ್ತ ಕೈ ನಾಯಕರು: http://bit.ly/2HZTvbH
►►ಅಪಹರಣ ಪ್ರಕರಣ: ಬಿಗ್‌ಬಾಸ್ ಖ್ಯಾತಿಯ ಸುನಾಮಿ ಕಿಟ್ಟಿ ಅರೆಸ್ಟ್: http://bit.ly/2FLauh7
►►ತ್ರಿಪುರಾದಲ್ಲಿ ಸ್ಪಷ್ಟ ಬಹುಮತದತ್ತ ಬಿಜೆಪಿ. ಮೇಘಾಲಯದಲ್ಲಿ ಕಾಂಗ್ರೆಸ್ ಮುನ್ನಡೆ: http://bit.ly/2Fg1BhZ

Related Tags: Aged Person Death, Nema, Villagers Denail, Police Transport Dead Body, Asalappa Death, Kadaba Police, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ