ಕಾಡಾನೆ ತುಳಿತಕ್ಕೆ ಅರಣ್ಯ ಸಂರಕ್ಷಣಾಧಿಕಾರಿ ಬಲಿ
ಕಾಳ್ಗಿಚ್ಚು ನಂದಿಸುವ ಕಾರ್ಯಾಚರಣೆ ಪರಿಶೀಲಿಸಲು ಕಾಲುದಾರಿಯಲ್ಲಿ ನಡೆಯುವಾಗ ಒಂಟಿ ಸಲಗ ದಾಳಿಗೆ ದಕ್ಷ ಅಧಿಕಾರಿ ಸಾವು.

ಕರಾವಳಿ ಕರ್ನಾಟಕ ವರದಿ

ಮೈಸೂರು:
ನಾಗರಹೊಳೆ ಹುಲಿ ರಕ್ಷಿತಾರಣ್ಯದ ಅರಣ್ಯ ಸಂರಕ್ಷಣಾಧಿಕಾರಿ ಮಣಿಕಂಠನ್ (45) ಅವರು ಕಾಡಾನೆ ದಾಳಿಯಿಂದ ಮೃತಪಟ್ಟ ಖೇದಕರ ಸಂಗತಿ ವರದಿಯಾಗಿದೆ.
 
ಎಚ್.ಡಿ.ಕೋಟೆ ತಾಲ್ಲೂಕು ಡಿ.ಬಿ.ಕುಪ್ಪೆ ಅರಣ್ಯ ವಲಯದ ಕುತ್ತುನಾಳಕೊಲ್ಲಿ ಪ್ರದೇಶದಲ್ಲಿ ಕಾಳ್ಗಿಚ್ಚು ನಂದಿಸುವ ಕಾರ್ಯಾಚರಣೆ ಪರಿಶೀಲಿಸಲು ಜೀಪಿನಲ್ಲಿ ತೆರಳಿದ ಮಣಿಕಂಠನ್ ಅವರು ಜೀಪಿಳಿದು  ಕಾಲುದಾರಿಯಲ್ಲಿ ನಡೆಯುವಾಗ ಒಂಟಿ ಸಲಗ ದಾಳಿ ನಡೆಸಿತ್ತು. ಈ ಸಂದರ್ಭ ಸಿಬ್ಬಂದಿ ಕೂಗಿ ಎಚ್ಚರಿಸಿದ್ದರು.

ಆದರೆ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮಣಿಕಂಠನ್ ಮತ್ತು ಸುಬ್ರಹ್ಮಣಿ ತಪ್ಪಿಸಿಕೊಳ್ಳುವ ವೇಳೆ ಎಡವಿ ಬಿದ್ದಿದ್ದರು. ಆಗ ಮಣಿಕಂಠನ್ ಅವರನ್ನು ಆನೆ ತುಳಿದಿದ್ದು, ಎದೆ ಹಾಗೂ ಕುತ್ತಿಗೆ ಭಾಗಕ್ಕೆ ಬಿದ್ದ ತೀವ್ರ ಏಟಿನಿಂದ ಮಣಿಕಂಠನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಲಯ ಅರಣ್ಯಾಧಿಕಾರಿ ಸುಬ್ರಹ್ಮಣಿ ಎಡವಿ ಬಿದ್ದರೂ ಸತ್ತಂತೆ ನಟಿಸಿ ಆನೆ ದಾಳಿಯಿಂದ ಪಾರಾಗಿದ್ದಾರೆ.

ಮಣಿಕಂಠನ್  ಪತ್ನಿ ಸಂಗೀತಾ, ಪುತ್ರಿ ಮಿಥಿಲಾ ಹಾಗೂ ಪುತ್ರ ಕವಿಲೇಶ್ ಅವರನ್ನು ಅಗಲಿದ್ದಾರೆ.

ಶನಿವಾರ ಬೆಳಿಗ್ಗೆಯಿಂದಲೂ ಇದೇ ಪ್ರದೇಶದಲ್ಲಿ 40ಕ್ಕೂ ಹೆಚ್ಚಿನ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದರು. ತಮಿಳುನಾಡಿನ ತೇನಿ ಜಿಲ್ಲೆಯ ಕಂಬಂ ಗ್ರಾಮದ ಮಣಿಕಂಠನ್, 2001ರ ಬ್ಯಾಚ್ ಐಎಫ್ಎಸ್ ಅಧಿಕಾರಿ. ಹಿಂದೆ ಬಳ್ಳಾರಿ, ಬೀದರ್, ಬಿಳಿಗಿರಿ ರಂಗನಬೆಟ್ಟ, ಬೆಂಗಳೂರಿನಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಬಳ್ಳಾರಿಯಲ್ಲಿ ದಕ್ಷತೆಯಿಂದ ಹೆಸರುಮಾಡಿದ್ದ ಮಣಿಕಂಠನ್ ಎರಡು ವರ್ಷಗಳಿಂದ ನಾಗರಹೊಳೆಯ ಹುಲಿ ಯೋಜನೆ ನಿರ್ದೇಶಕರಾಗಿದ್ದರು.

ನಾಗರಹೊಳೆಯಲ್ಲಿ ಎಲ್ಲೇ ಬೆಂಕಿ ಬಿದ್ದರೂ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಸಿಬ್ಬಂದಿಗೆ ಮಾರ್ಗದರ್ಶನ ನೀಡುತ್ತಿದ್ದರು. ಅರಣ್ಯ ಇಲಾಖೆ ನೀಡುವ ಉತ್ತಮ ಹುಲಿ ಸಂರಕ್ಷಣಾಧಿಕಾರಿ ಪ್ರಶಸ್ತಿಗೆ ಪಾತ್ರರಾಗಿದ್ದರು.

ಮಣಿಕಂಠನ್ ಅವರಿಗೆ ಜಿಲ್ಲಾಡಳಿತ ವತಿಯಿಂದ ಗೌರವ ವಂದನೆ ಸಲ್ಲಿಸಲಾಯಿತು.

ಇಂದು ಹೆಚ್ಚು ಓದಿದ ಸುದ್ದಿಗಳು:
►►ಬಸ್ ಅಪಘಾತ: ಪವರ್ ಲಿಫ್ಟಿಂಗ್ ಪಟು ವಿಶ್ವನಾಥ ಗಾಣಿಗ ಅಪಾಯದಿಂದ ಪಾರು:
http://bit.ly/2FbhrLq
►►ಮೇಘಾಲಯದಲ್ಲಿ ಅತಂತ್ರ ಸ್ಥಿತಿ: ಸರ್ಕಾರ ರಚನೆಗಾಗಿ ಶಿಲ್ಲಾಂಗ್‌ನತ್ತ ಕೈ ನಾಯಕರು: http://bit.ly/2HZTvbH
►►ಅಪಹರಣ ಪ್ರಕರಣ: ಬಿಗ್‌ಬಾಸ್ ಖ್ಯಾತಿಯ ಸುನಾಮಿ ಕಿಟ್ಟಿ ಅರೆಸ್ಟ್: http://bit.ly/2FLauh7
►►ತ್ರಿಪುರಾದಲ್ಲಿ ಸ್ಪಷ್ಟ ಬಹುಮತದತ್ತ ಬಿಜೆಪಿ. ಮೇಘಾಲಯದಲ್ಲಿ ಕಾಂಗ್ರೆಸ್ ಮುನ್ನಡೆ: http://bit.ly/2Fg1BhZ
►►ಮಂಗಳೂರು: ವ್ಯಕ್ತಿಯೋರ್ವನ ಇರಿದು ಕೊಲೆ. ಆರೋಪಿ ಸೆರೆ: http://bit.ly/2CVs670
►►ಬಿಜೆಪಿ ಚಾರ್ಜ್‌ಶೀಟ್ ಕಸಕ್ಕೆ ಎಸೆಯಲೂ ಬಾರದ ವೇಸ್ಟ್ ಬಂಡಲ್: ಜಾರ್ಜ್ ವ್ಯಂಗ್ಯ: http://bit.ly/2oMeYMm
►►ವಿಚಾರವಾದಿಯೊಬ್ಬರ ಹತ್ಯೆಗೆ ಸಂಚು ರೂಪಿಸಿದ್ದ ನವೀನ್: ಪೊಲೀಸ್ ತನಿಖೆಯಲ್ಲಿ ಬಯಲು: http://bit.ly/2FbwzV0

Related Tags: Senior IFS Officer S. Manikandan, Conservator of Forests, Director of Nagarahole Tiger Reserve, Wild Tusker, ಕಾಡಾನೆ ತುಳಿತಕ್ಕೆ ಅರಣ್ಯ ಸಂರಕ್ಷಣಾಧಿಕಾರಿ ಬಲಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ