ಅಪಹರಣ ಪ್ರಕರಣ: ಬಿಗ್‌ಬಾಸ್ ಖ್ಯಾತಿಯ ಸುನಾಮಿ ಕಿಟ್ಟಿ ಅರೆಸ್ಟ್

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ರೆಸ್ಟೋರೆಂಟ್ ಸಿಬ್ಬಂದಿಯೋರ್ವನನ್ನು ಅಪಹರಣ ಮಾಡಿದ ಆರೋಪದ ಮೇಲೆ ಬಿಗ್‌ಬಾಸ್ ಖ್ಯಾತಿಯ ಸುನಾಮಿ ಕಿಟ್ಟಿಯನ್ನು ಪೊಲೀಸರು ಬಂಧಿಸಿದ್ದಾರೆ.

ರೆಸ್ಟೋರೆಂಟ್‌ ಒಂದರಲ್ಲಿ ಸುನಾಮಿ ಕಿಟ್ಟಿ ಮತ್ತು ತಂಡ ಸಪ್ಲಾಯರ್ ಗಿರೀಶ್ ಎಂಬುವವರಿಗೆ ಗನ್ ತೋರಿಸಿ, ಬೆದರಿಸಿರುವುದಾಗಿ ಪ್ರಕರಣ ದಾಖಲಾಗಿತ್ತು. ಆದರೆ ಇದೀಗ ಗಿರೀಶ್ ಎಂಬಾತನನ್ನು ಕಿಟ್ಟಿ ಮತ್ತು ತಂಡ ಅಪಹರಣ ಮಾಡಿದ್ದಾರೆ ಎಂದು ಆರೋಪಿಸಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಪೊಲೀಸರು ಸುನಾಮಿ ಕಿಟ್ಟಿ ಸೇರಿದಂತೆ ಅರ್ಜುನ್ ಮತ್ತು ಯೋಗೇಂದ್ರ ಎಂಬುವವರನ್ನು ಬಂಧಿಸಿದ್ದಾರೆ. ಈ ಪ್ರಕರಣದ ಇನ್ನೊಬ್ಬ ಆರೋಪಿ ಗಿರೀಶ್ ಎಂಬುವವರು ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಕಿಟ್ಟಿ ಸ್ನೇಹಿತ ಸುನಿಲ್ ಎಂಬುವರ ಪತ್ನಿ ತೌಶಿಕ್​ ಎಂಬುವವರೊಡನೆ ಮಾಳಗಾಳದ ಕುಟೀರ್​ ಪಾರ್ಕ್​ ರೆಸ್ಟೊರೆಂಟ್​ಗೆ ಊಟಕ್ಕೆ ಆಗಾಗ್ಗೆ ಹೋಗುತ್ತಿದ್ದರು. ಈ ಕುರಿತು ತೌಶಿಕ್​ ಯಾರು ಎಂಬುದನ್ನು ತಿಳಿದುಕೊಳ್ಳಲು ಫೆ.28ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಸುನಾಮಿ ಹಾಗೂ ತಂಡ ಕುಟೀರ ಪಾರ್ಕ್​ ಲ್ಯಾಂಡ್​ ಬಾರ್​ಗೆ ತೆರಳಿ ಅಲ್ಲಿನ ಬಾರ್​ ಸಪ್ಲಾಯರ್​ ಗಿರೀಶ್​ರನ್ನು ಅಪಹರಿಸಿ ತೌಶಿಕ್‌ನನ್ನು ತೋರಿಸುವಂತೆ ಒತ್ತಾಯ ಮಾಡಿದ್ದರು.

ತೌಶಿಕ್​ಗೆ ಕರೆ ಮಾಡಿ ಕರೆಸಿಕೊಳ್ಳುವಂತೆ ಒತ್ತಾಯಿಸಿದ ಅವರು, ತೌಶಿಕ್ ಬಂದಮೇಲೆ ಇಬ್ಬರನ್ನೂ ಹೊರಮಾವು ಬಳಿಯಿರುವ ತೋಟದ ಮನೆಗೆ ಕರೆದೊಯ್ದು ಹಲ್ಲೆ ನಡೆಸಿ, ವಿಷಯವನ್ನು ಪೊಲೀಸರಿಗೆ ತಿಳಿಸದಂತೆ ಜೀವ ಬೆದರಿಕೆ ಹಾಕಿ ನನ್ನನ್ನು ಬಿಟ್ಟರು ಎಂದು ದೂರುದಾರ ಗಿರೀಶ್​ ಎಫ್​ಐಆರ್​ ಪ್ರತಿಯಲ್ಲಿ ತಿಳಿಸಿದ್ದಾರೆ.

ಇಂದು ಹೆಚ್ಚು ಓದಿದ ಸುದ್ದಿಗಳು:
►►ತ್ರಿಪುರಾದಲ್ಲಿ ಸ್ಪಷ್ಟ ಬಹುಮತದತ್ತ ಬಿಜೆಪಿ. ಮೇಘಾಲಯದಲ್ಲಿ ಕಾಂಗ್ರೆಸ್ ಮುನ್ನಡೆ:
http://bit.ly/2Fg1BhZ
►►ಮಂಗಳೂರು: ವ್ಯಕ್ತಿಯೋರ್ವನ ಇರಿದು ಕೊಲೆ. ಆರೋಪಿ ಸೆರೆ: http://bit.ly/2CVs670
►►ಬಿಜೆಪಿ ಚಾರ್ಜ್‌ಶೀಟ್ ಕಸಕ್ಕೆ ಎಸೆಯಲೂ ಬಾರದ ವೇಸ್ಟ್ ಬಂಡಲ್: ಜಾರ್ಜ್ ವ್ಯಂಗ್ಯ: http://bit.ly/2oMeYMm
►►ವಿಚಾರವಾದಿಯೊಬ್ಬರ ಹತ್ಯೆಗೆ ಸಂಚು ರೂಪಿಸಿದ್ದ ನವೀನ್: ಪೊಲೀಸ್ ತನಿಖೆಯಲ್ಲಿ ಬಯಲು: http://bit.ly/2FbwzV0
►►ಇಂದು ಹೊರಬೀಳಲಿದೆ ಈಶಾನ್ಯ ರಾಜ್ಯಗಳ ಚುನಾವಣಾ ಫಲಿತಾಂಶ: http://bit.ly/2oBP4f6
►►ವಿದ್ವತ್ ಮೇಲೆ ಹಲ್ಲೆ: ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಜಾಮೀನು ಅರ್ಜಿ ವಜಾ: http://bit.ly/2F55tTA

Related Tags: Kidnap Case, Tsunami Kitty Arrested, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ