ಬಿಜೆಪಿ ಚಾರ್ಜ್‌ಶೀಟ್ ಕಸಕ್ಕೆ ಎಸೆಯಲೂ ಬಾರದ ವೇಸ್ಟ್ ಬಂಡಲ್: ಜಾರ್ಜ್ ವ್ಯಂಗ್ಯ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಬಿಡುಗಡೆ ಮಾಡಿರುವ ಚಾರ್ಜ್‌ಶೀಟ್ ಒಂದು ದೊಡ್ಡ ಸುಳ್ಳಿನ ಕಂತೆ. ಅದು ಕಸಕ್ಕೆ ಎಸೆಯಲೂ ಬಾರದ ವೇಸ್ಟ್ ಬಂಡಲ್. ಬಿಜೆಪಿಯವರು ತಮ್ಮ ಮೇಲಿರುವ ಆರೋಪಗಳನ್ನೆಲ್ಲಾ ತಾವೇ ಪಟ್ಟಿ ಮಾಡಿಕೊಂಡು ತಮ್ಮ ಮರ್ಯಾದೆಯನ್ನು ಬೀದಿಯಲ್ಲಿ ಹರಾಜು ಹಾಕಿಕೊಳ್ಳುತ್ತಿದ್ದಾರೆ ಎಂದು ಸಚಿವ ಕೆ.ಜೆ. ಜಾರ್ಜ್ ವಾಗ್ದಾಳಿ ನಡೆಸಿದರು.

ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಬಿಜೆಪಿ ಬಿಡುಗಡೆ ಮಾಡಿರುವ ಚಾರ್ಜ್‌ಶೀಟ್‌ನ ಪ್ರತಿಯೊಂದು ಆರೋಪಗಳಿಗೂ ತಿರುಗೇಟು ನೀಡಿದರು.

ನಾವು ಬಹಳಷ್ಟು ಹುಲಿಗಳನ್ನು ನೋಡಿದ್ದೇವೆ. ಶಾ ಒಬ್ಬ ಪೇಪರ್ ಟೈಗರ್ ಅಷ್ಟೆ. ಇನ್ನು ಪ್ರಧಾನಿಯನ್ನು ಬಿಜೆಪಿಯವರು ಗುಜರಾತ್ ಸಿಂಹ ಎಂದು ಕರೆಯುತ್ತಾರೆ. ನಮ್ಮ ಬನ್ನೇರುಘಟ್ಟದಲ್ಲೂ ಸಾಕಷ್ಟು ಸಿಂಹಗಳಿವೆ. ಸಿಂಹ ಕಾಡಿನಲ್ಲಿದ್ದರೆ ಮಾತ್ರ ಶಕ್ತಿ. ಝೂನಲ್ಲಿರುವ ಸಿಂಹ ಹೇಗಿದೆ ಎನ್ನೋದು ಎಲ್ಲರಿಗೂ ಗೊತ್ತಿದೆ ಎಂದು ಸಚಿವ ಕೆ.ಜೆ. ಜಾರ್ಜ್ ವ್ಯಂಗ್ಯವಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಯಡಿಯೂರಪ್ಪ ಸೇರಿದಂತೆ ಬಿಜೆಪಿಯವರು ಏನೇ ಮಾಡಿದರೂ ಮುಂದಿನ ಚುನಾವಣೆಯಲ್ಲಿ 50 ಸೀಟೂ ಗೆಲ್ಲಲು ಸಾಧ್ಯವಿಲ್ಲ. ಸೋಲಿನ ಭಯದಿಂದ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅವರು ಬಿಡುಗಡೆ ಮಾಡಿರುವ ಚಾರ್ಜ್‌ಶೀಟ್‌ನಲ್ಲಿ ಒಂದೇ ಒಂದು ಆರೋಪದ ಬಗ್ಗೆಯಾದರೂ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.

ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿರುವುದಾಗಿ ಚಾರ್ಜ್‌ಶೀಟ್‌ನಲ್ಲಿ ಆರೋಪ ಮಾಡಿದ್ದಾರೆ. ಅವರ ಚಾರ್ಜ್‌ಶೀಟ್‌ನಲ್ಲಿರುವ ಬಹುತೇಕ ಆರೋಪಗಳು ಬಿಜೆಪಿಯ ವಿವಿಧ ನಾಯಕರ ಮೇಲೆ ಇವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಇಂದು ಹೆಚ್ಚು ಓದಿದ ಸುದ್ದಿಗಳು:
►►ವಿಚಾರವಾದಿಯೊಬ್ಬರ ಹತ್ಯೆಗೆ ಸಂಚು ರೂಪಿಸಿದ್ದ ನವೀನ್: ಪೊಲೀಸ್ ತನಿಖೆಯಲ್ಲಿ ಬಯಲು:
http://bit.ly/2FbwzV0
►►ಇಂದು ಹೊರಬೀಳಲಿದೆ ಈಶಾನ್ಯ ರಾಜ್ಯಗಳ ಚುನಾವಣಾ ಫಲಿತಾಂಶ: http://bit.ly/2oBP4f6
►►ವಿದ್ವತ್ ಮೇಲೆ ಹಲ್ಲೆ: ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಜಾಮೀನು ಅರ್ಜಿ ವಜಾ: http://bit.ly/2F55tTA
►►ಸುರತ್ಕಲ್ ಮಾರುಕಟ್ಟೆಯ ಹೆಸರಲ್ಲಿ ಜನತೆಯ ಹಣ ಲೂಟಿ: ಮುನೀರ್ ಆರೋಪ: http://bit.ly/2CQgXUV
►►ಕೊಲ್ಲಿ ರಾಷ್ಟ್ರದಲ್ಲಿರುವ ಕರಾವಳಿಗರಿಗೆ ನಾನು ಅವಹೇಳನ ಮಾಡಿಲ್ಲ: ಸಚಿವ ಖಾದರ್ ಸ್ಪಷ್ಟನೆ: http://bit.ly/2F7bn6O
►►ನೀರವ್ ಮೋದಿ ಅಮೇರಿಕಾದಲ್ಲಿರುವುದು ಖಚಿತಪಡಿಸಲಾಗದು: ಅಮೇರಿಕಾ: http://bit.ly/2CSYtmP

Related Tags: BJP Charge Sheet, Bundle Of Lies, Congress, K.J George, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ