ವಿಚಾರವಾದಿಯೊಬ್ಬರ ಹತ್ಯೆಗೆ ಸಂಚು ರೂಪಿಸಿದ್ದ ನವೀನ್: ಪೊಲೀಸ್ ತನಿಖೆಯಲ್ಲಿ ಬಯಲು

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಶಂಕಿತ ಆರೋಪಿ ವಿಚಾರವಾದಿಯೊಬ್ಬರ ಕೊಲೆಗೆ ಸಂಚು ರೂಪಿಸಿದ್ದ ಎಂಬ ಮಹತ್ತರವಾದ ಸಂಗತಿ ಪೊಲೀಸ್ ತನಿಖೆಯ ವೇಳೆ ಬೆಳಕಿಗೆ ಬಂದಿದೆ.

ಗೌರಿ ಲಂಕೇಶ್ ಹಂತಕರ ಪತ್ತೆ ಕಾರ್ಯದಲ್ಲಿ ತೊಡಗಿರುವ ಎಸ್‌ಐಟಿ ಹಲವು ಆಯಾಮಗಳಲ್ಲಿ ಆರೋಪಿಯ ಪತ್ತೆಗಾಗಿ ತನಿಖೆ ನಡೆಸಿದ್ದು, ಕೆಲ ಸಂಘಟನೆಗಳ ಮುಖಂಡರ ಹಾಗೂ ಕಾರ್ಯಕರ್ತರ ಮೊಬೈಲ್ ಸಂಭಾಷಣೆಯನ್ನು ಆಲಿಸುತ್ತಿದ್ದರು.

ಇದೇ ಜನವರಿಯಲ್ಲಿ ಬೆಂಗಳೂರು, ಮೈಸೂರು ಹಾಗೂ ಮಂಗಳೂರಿನ ನಾಲ್ವರು ಯುವಕರಿಗೆ ಕರೆ ಮಾಡಿದ್ದ ಮದ್ದೂರಿನ ‘ಹಿಂದೂ ಯುವಸೇನೆ’ ಮುಖಂಡ ನವೀನ್ ಬಲಪಂಥೀಯ ವಿರೋಧಿ ವಿಚಾರವಾದಿಯೊಬ್ಬರನ್ನು ಹೊಡೆಯಬೇಕು ಎಂದಿದ್ದ.

ಇದೇ ವಿಚಾರವಾಗಿ 1 ತಾಸಿಗೂ ಹೆಚ್ಚು ಸಂಭಾಷಣೆ ನಡೆಸಿದ್ದ ನವೀನ್ ಪತ್ತೆಗೆ ಕೂಡಲೇ ಕಾರ್ಯಾಚರಣೆ ಪ್ರಾರಂಭಿಸಿದ ಪೊಲೀಸರು, ಚಿಕ್ಕಮಗಳೂರು ಜಿಲ್ಲೆಯ ಬೀರೂರಿನಲ್ಲಿ ಆತನನ್ನು ವಶಕ್ಕೆ ಪಡೆದಿದ್ದರು.

ಗೌರಿ ಹತ್ಯೆ ಪ್ರಕರಣದಲ್ಲೂ ನವೀನ್ ಪಾತ್ರವಿರುವ ಬಗ್ಗೆ ಬಲವಾದ ಅನುಮಾನ ವ್ಯಕ್ತವಾಗಿದ್ದು, ಆ ನಾಲ್ವರು ಯುವಕರು ಸಿಕ್ಕ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಅವರನ್ನು ಹುಡುಕಿಕೊಂಡು ವಿಶೇಷ ತಂಡಗಳು ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ ತೀವ್ರ ವಿಚಾರಣೆ ನಡೆಸಿದ ಸಿಸಿಬಿ ಪೊಲೀಸರಿಗೆ ನವೀನ್‌ ಕುಮಾರ್‌ ಗೌರಿ ಹಂತಕರ ಬಗ್ಗೆ ಸುಳಿವು ನೀಡಿದ್ದ. ಅಲ್ಲದೇ, ಹಂತಕರು ಕರ್ನಾಟಕಕ್ಕೆ ಬಂದಾಗ ಸಹಾಯ ಮಾಡಿರುವ ಬಗ್ಗೆಯೂ ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ.

ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿ ಹಾಗೂ ಶಂಕಿತರ ಮೂರು ರೇಖಾಚಿತ್ರಕ್ಕೂ ಬಂಧಿತ ಆರೋಪಿಯ ಚಹರೆಗೂ ಸಾಮ್ಯತೆ ಕಂಡು ಬರುತ್ತಿದೆ.

ಇದೀಗ ಶಂಕಿತ ಆರೋಪಿ ನವೀನ್‌ ಕುಮಾರ್‌ ಅಲಿಯಾಸ್‌ ಹೊಟ್ಟೆ ಮಂಜನನ್ನು ಹೆಚ್ಚಿನ ತನಿಖೆಗಾಗಿ ವಿಶೇಷ ತನಿಖಾ ತಂಡ ಎಸ್‌ಐಟಿ ತನ್ನ ವಶಕ್ಕೆ ಪಡೆದುಕೊಂಡಿದೆ.

ಇಂದು ಹೆಚ್ಚು ಓದಿದ ಸುದ್ದಿಗಳು:
►►ಇಂದು ಹೊರಬೀಳಲಿದೆ ಈಶಾನ್ಯ ರಾಜ್ಯಗಳ ಚುನಾವಣಾ ಫಲಿತಾಂಶ:
http://bit.ly/2oBP4f6
►►ವಿದ್ವತ್ ಮೇಲೆ ಹಲ್ಲೆ: ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಜಾಮೀನು ಅರ್ಜಿ ವಜಾ: http://bit.ly/2F55tTA
►►ಸುರತ್ಕಲ್ ಮಾರುಕಟ್ಟೆಯ ಹೆಸರಲ್ಲಿ ಜನತೆಯ ಹಣ ಲೂಟಿ: ಮುನೀರ್ ಆರೋಪ: http://bit.ly/2CQgXUV
►►ಕೊಲ್ಲಿ ರಾಷ್ಟ್ರದಲ್ಲಿರುವ ಕರಾವಳಿಗರಿಗೆ ನಾನು ಅವಹೇಳನ ಮಾಡಿಲ್ಲ: ಸಚಿವ ಖಾದರ್ ಸ್ಪಷ್ಟನೆ: http://bit.ly/2F7bn6O
►►ನೀರವ್ ಮೋದಿ ಅಮೇರಿಕಾದಲ್ಲಿರುವುದು ಖಚಿತಪಡಿಸಲಾಗದು: ಅಮೇರಿಕಾ: http://bit.ly/2CSYtmP

Related Tags: Gauri Lankesh Murder Case, Hindu Yuva Sena, K.T Naveen, Karnataka News, SIT, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ