ದಕ್ಷಿಣ ಆಫ್ರಿಕಾ ವಿರುದ್ದ ಭರ್ಜರಿ ಜಯ: ಟೀಮ್ ಇಂಡಿಯಾಗೆ ಐತಿಹಾಸಿಕ ಸರಣಿ ಗೆಲುವು

ಕರಾವಳಿ ಕರ್ನಾಟಕ ವರದಿ

ಪೋರ್ಟ್ ಎಲಿಜಬೆತ್:
ಭಾರತ-ದಕ್ಷಿಣ ಆಫ್ರಿಕಾ ನಡುವಿನ 5ನೇ ಏಕದಿನ ಪಂದ್ಯದಲ್ಲಿ ಭಾರತ 73 ರನ್ ಗಳಿಂದ ಭರ್ಜರಿ ಜಯ ಗಳಿಸಿದೆ. ಈ ಮೂಲಕ ದಕ್ಷಿಣ ಆಫ್ರಿಕಾದಲ್ಲಿ ಇದೇ ಮೊದಲ ಬಾರಿಗೆ ಏಕದಿನ ಸರಣಿ ಗೆಲ್ಲುವ ಮೂಲಕ ಭಾರತೀಯ ತಂಡ ಇತಿಹಾಸ ನಿರ್ಮಿಸಿದೆ.

ಟಾಸ್ ಗೆದ್ದ ದಕ್ಷಿಣ ತಂಡ ಭಾರತ ತಂಡವನ್ನು ಮೊದಲು ಬ್ಯಾಟಿಂಗ್ ಗೆ ಇಳಿಸಿತು. ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರ ಶತಕದ ನೆರವಿನಿಂದಾಗಿ ಟೀಂ ಇಂಡಿಯಾ 274 ರನ್ ಗಳನ್ನು ಪೇರಿಸಿದ್ದು, ಆಫ್ರಿಕಾಗೆ ಗೆಲ್ಲಲು 275 ರನ್ ಗುರಿ ನೀಡಿತ್ತು.

275 ರನ್ ಗಳ ಗುರಿ ಬೆನ್ನಟ್ಟಿದ ಆಫ್ರಿಕಾ ತಂಡ 201 ರನ್ ಗಳಿಗೆ ಸರ್ವಪತನ ಕಂಡು ಭಾರತಕ್ಕೆ ಶರಣಾಯಿತು. ಆರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ 4-1 ಅಂತರದಿಂದ ಸರಣಿಯನ್ನು ಕೈವಶ ಮಾಡಿಕೊಂಡಿದೆ.

ಆಫ್ರಿಕಾ ಸರಣಿ ಆರಂಭಿಕ ಪಂದ್ಯಗಳಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ ವಿರೋಧಿಗಳಿಂದ 'ಮೇಕ್ ಇನ್ ಇಂಡಿಯಾ' ಎಂದು ಟೀಕೆಗೆ ಗುರಿಯಾಗಿದ್ದ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿದರು. 107 ಎಸೆತ ಎದುರಿಸಿ ರೋಹಿತ್ 10 ಬೌಂಡರಿ, 4 ಸಿಕ್ಸರ್ ಮೂಲಕ ವೃತ್ತಿ ಜೀವನದ 17 ನೇ ಶತಕ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಶತಕ ಸಿಡಿದರು.

ಈ ಮೂಲಕ ಸ್ವದೇಶದಲ್ಲಿ ಹೀರೋ, ವಿದೇಶದಲ್ಲಿ ಝೀರೋ ಎಂದು ತೆಗಳಿದ್ದವರಿಗೆ ತಿರುಗೇಟು ನೀಡಿದರು.
ಭಾರತ ಪರ ಏಕದಿನ ಪಂದ್ಯಗಳಲ್ಲಿ ಅತಿಹೆಚ್ಚು ಶತಕ ಸಿಡಿಸಿದ ಪಟ್ಟಿಯಲ್ಲಿ ಸಚಿನ್, ವಿರಾಟ್ ಕೊಹ್ಲಿ, ಸೌರವ್ ಗಂಗೂಲಿ ನಂತರ ಸ್ಥಾನವನ್ನು ರೋಹಿತ್ ಶರ್ಮಾ ಪಡೆದಿದ್ದಾರೆ.

ರೋಹಿತ್ ಶತಕ ಗಳಿಸುವ ಮುನ್ನ ಹಿಂದೆ ಆಫ್ರಿಕಾ ಆಟಗಾರರು ಎರಡು ಬಾರಿ ರನ್ ಔಟ್ ಹಾಗೂ 96 ರನ್ ಗಳಿಸಿದ್ದ ವೇಳೆ ಆಫ್ರಿಕಾ ಶಮ್ಸಿ ಕ್ಯಾಚ್ ಚೆಲ್ಲಿ ಜೀವದಾನ ನೀಡಿದರು.

ಪಂದ್ಯದ ಆರಂಭದಲ್ಲಿ ರನ್ ಗಳಿಸಲು ತಿಣುಕಾಡಿದ ರೋಹಿತ್ ಮೊದಲ ರನ್ ಗಳಿಸಲು 15 ಎಸೆತಗಳನ್ನು ತೆಗೆದುಕೊಂಡರು. ಅಂತಿಮವಾಗಿ 126 ಎಸೆತಗಳಲ್ಲಿ 11 ಬೌಂಡರಿ, 4 ಸಿಕ್ಸರ್ ಮೂಲಕ 115 ರನ್ ಗಳಿಸಿ ರೋಹಿತ್ ಶರ್ಮಾ ಔಟ್ ಆದರು. ಟೀಂ ಇಂಡಿಯಾ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 274 ರನ್ ಗಳಿಸಿತು.

ಇಂದು ಓದಿದ ಹೆಚ್ಚು ಸುದ್ದಿಗಳು
►►ಜಮ್ಮು ಕಾಶ್ಮೀರ: ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ:
http://bit.ly/2o4bhRN
►►ಎಪಿಎಂಸಿ ಅಧ್ಯಕ್ಷರ ಚುನಾವಣೆ: ಬಿಜೆಪಿ ಸದಸ್ಯ ಕಿಡ್ನ್ಯಾಪ್: http://bit.ly/2EYMtTq
►►ಸಾಗರದಾಳದಲ್ಲಿ ಸ್ಕೂಬಾ ಡೈವಿಂಗ್ ಮೂಲಕ ದಂಪತಿಯ 'ಹ್ಯಾಪಿ ಆನಿವರ್ಸರಿ': http://bit.ly/2HaKrQJ
►►ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ಭೀಕರ ಸ್ಫೋಟ: ಐವರು ಮೃತ್ಯು, 11 ಮಂದಿ ಗಂಭೀರ: http://bit.ly/2sqH2df
►►ಅವಲಕ್ಕಿ ಗಂಟಲಲ್ಲಿ ಸಿಲುಕಿ 3 ವರ್ಷದ ಮಗು ಮೃತ್ಯು: http://bit.ly/2EABNfX

Related Tags: India v/s South Africa, 5th ODI, Port Elizabeth, Rohit, Kuldeep, Historic Win, Sports News, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ