ಎಪಿಎಂಸಿ ಅಧ್ಯಕ್ಷರ ಚುನಾವಣೆ: ಬಿಜೆಪಿ ಸದಸ್ಯ ಕಿಡ್ನ್ಯಾಪ್

ಅಝೀಝ್ ಕಿರುಗುಂದ/ಕರಾವಳಿ ಕರ್ನಾಟಕ ವರದಿ

ಚಿಕ್ಕಮಗಳೂರು:
ಫೆ.17 ರಂದು ಜಿಲ್ಲೆಯಲ್ಲಿ ಎಪಿಎಂಸಿ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದ್ದು, ಈ ನಡುವೆ ಬಿಜೆಪಿಯ ಎಪಿಎಂಸಿ ಸದಸ್ಯರೋರ್ವರು ದಿಢೀರ್ ಆಗಿ ಕಾಣೆಯಾದ ಘಟನೆ ನಡೆದಿದೆ.

ಚಿಕ್ಕಮಗಳೂರು ತಾಲೂಕಿನ ಮಾಚೇನಹಳ್ಳಿಯ ಬಿಜೆಪಿ ಸದಸ್ಯ ಲೋಕೇಶ್ ನಾಪತ್ತೆಯಾದವರು. ಚುನಾವಣಾ ದೃಷ್ಟಿಯಿಂದ ಲೋಕೇಶ್ ಕಿಡ್ನಾಪ್ ಆಗಿರುವುದಾಗಿ ಸಂಬಂಧಿಕರು ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.

ಫೆ.17 ರಂದು ಚಿಕ್ಕಮಗಳೂರು ಎಪಿಎಂಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಒಟ್ಟು 16 ಸದಸ್ಯರಲ್ಲಿ ಬಿಜೆಪಿ 9 ಹಾಗೂ ನಾಮಿನಿ ಸದಸ್ಯರು ಸೇರಿ 7 ಜನ ಕಾಂಗ್ರೆಸ್ ನವರಿದ್ದಾರೆ. ಚುನಾವಣಾ ಹಿನ್ನೆಲೆಯಲ್ಲೇ ಲೋಕೇಶ್ ಅವರನ್ನು ಕಿಡ್ನ್ಯಾಪ್ ಮಾಡಲಾಗಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ನನ್ನನ್ನು ಯಾರೋ ಕೆರೆದುಕೊಂಡು ಹೋಗುತ್ತಿದ್ದಾರೆ ಎಂದು ಮಗನಿಗೆ ಸಂಜೆ 7.15 ಕ್ಕೆ ಕರೆ ಮಾಡಿ ತಿಳಿಸಿದ್ದು, ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ.

ಈ ಕುರಿತು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇಂದು ಓದಿದ ಹೆಚ್ಚು ಸುದ್ದಿಗಳು
►►ಸಾಗರದಾಳದಲ್ಲಿ ಸ್ಕೂಬಾ ಡೈವಿಂಗ್ ಮೂಲಕ ದಂಪತಿಯ 'ಹ್ಯಾಪಿ ಆನಿವರ್ಸರಿ':
http://bit.ly/2HaKrQJ
►►ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ಭೀಕರ ಸ್ಫೋಟ: ಐವರು ಮೃತ್ಯು, 11 ಮಂದಿ ಗಂಭೀರ: http://bit.ly/2sqH2df
►►ಅವಲಕ್ಕಿ ಗಂಟಲಲ್ಲಿ ಸಿಲುಕಿ 3 ವರ್ಷದ ಮಗು ಮೃತ್ಯು: http://bit.ly/2EABNfX
►►ಮಗನನ್ನು ಚೂರಿಯಿಂದ ಇರಿದು ಕೊಲೆಗೈದ ತಂದೆ ಪೊಲೀಸ್ ಬಲೆಗೆ: http://bit.ly/2nZOaYB
►►ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಚಂದ್ರಶೇಖರ್​ ಕಂಬಾರ: http://bit.ly/2BTKgKa
►►ಕಂಬಳ ತಡೆಗೆ ಸುಪ್ರೀಂ ನಕಾರ: ಪೇಟಾ ಸಲ್ಲಿಸಿದ್ದ ಅರ್ಜಿ ವಜಾ: http://bit.ly/2BT47JA

Related Tags: Chikkamaglur, APMC Election, APMC Member Kidnap, Chikkamagalur Police, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ